ಈ ರೀತಿಯ ಜೀವನಶೈಲಿಯಿಂದ ಸ್ತನ ಕ್ಯಾನ್ಸರ್​ನ ಅಪಾಯ ಹೆಚ್ಚು: ಇಲ್ಲಿದೆ ಮಾಹಿತಿ

ಆಲ್ಕೋಹಾಲ್ ನಿಮ್ಮ ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ ಎನ್ನುವ ನಂಬಿಕೆಯಿದೆ. ಆದರೆ ಇದು ಸ್ತನ ಕ್ಯಾನ್ಸರ್ ಅಪಾಯವನ್ನೂ ಹೆಚ್ಚಿಸುತ್ತದೆ.

ಈ ರೀತಿಯ ಜೀವನಶೈಲಿಯಿಂದ ಸ್ತನ ಕ್ಯಾನ್ಸರ್​ನ ಅಪಾಯ ಹೆಚ್ಚು: ಇಲ್ಲಿದೆ ಮಾಹಿತಿ
ಸಾಂಕೇತಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on:Mar 16, 2022 | 10:33 AM

ಕ್ಯಾನ್ಸರ್​ನೊಂದಿಗಿನ ಯುದ್ಧಅಷ್ಟು ಸುಲಭವಲ್ಲ. ಕ್ಯಾನ್ಸರ್​ನಲ್ಲಿ ಹಲವು ವಿಧ. ಅವುಗಳಲ್ಲಿ ಒಂದು ಸ್ತನ ಕ್ಯಾನ್ಸರ್​. ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ. ಹಾರ್ಮೋನ್, ಜೀವನಶೈಲಿ ಮತ್ತು ಪರಿಸರದ ಅಂಶಗಳು ಸ್ತನ ಕ್ಯಾನ್ಸರ್‌ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ಸಂಶೋಧಕರು. ಹೀಗಾಗಿ ಜೀವನಶೈಲಿಯನ್ನು ಬದಲಿಸಿಕೊಂಡರೆ ಕ್ಯಾನ್ಸರ್​ನ ಅಪಾಯವನ್ನು ತಡೆಗಟ್ಟಬಹುದು. ಕೆಲವು ದಿನನಿತ್ಯದ ಜೀವನಶೈಲಿಗಳು ಕ್ಯಾನ್ಸರ್​ನ ಅಪಾಯವನ್ನು ಹೆಚ್ಚಸುತ್ತದೆ. ಹಾಗಾದರೆ ಯಾವಲ್ಲಾ ಅಭ್ಯಾಸಗಳು ಕ್ಯಾನ್ಸರ್​ನ ಅಪಾಯವನ್ನು ಹೆಚ್ಚಿಸುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಇಲ್ಲಿದೆ ಮಾಹಿತಿ

ಜಂಕ್​ ಫುಡ್​ಗಳು: ಜೀವನಶೈಲಿ ಬದಲಾಗಿದೆ. ಜಂಕ್​ಫುಡ್​ಗಳು ಪ್ರತಿನಿತ್ಯದ ಭಾಗವಾಗಿದೆ. ನಿರಂತರ ಜಂಕ್​ಫುಡ್​ಗಳ ಸೇವನೆಯಿಂದ ಕ್ಯಾನ್ಸರ್​ ಅಪಾಯ ಹೆಚ್ಚು.  ಸ್ತನ ಕ್ಯಾನ್ಸರ್​ನ ನ ಅಪಾಯವೂ ಜಂಕ್​ ಫುಡ್​ಗಳಿಂದ ಅಧಿಕವಾಗಿರುತ್ತದೆ ಎನ್ನುತ್ತಾರೆ ತಜ್ಞರು. ಹೀಗಾಗಿ ಹಸಿರು ತರಕಾರಿಗಳ ಸೇವನೆ ಉತ್ತಮ ಆಹಾರವಾಗಿದೆ.

ವ್ಯಾಯಾಮ ಮಾಡದೇ ಇರುವುದು: ದೇಹದಕ್ಕೆ ವ್ಯಾಯಾಮ ಅತೀ ಅಗತ್ಯವಾಗಿದೆ. ಇಡೀ ದಿನ ಕುಳಿತು ಕೆಲಸ ಮಾಡುವವರಿಗಂತೂ ಪ್ರತಿದಿನ ಕನಿಷ್ಠ ಅರ್ಧಗಂಟೆ ವ್ಯಾಯಾಮ ಅವಶ್ಯಕವಾಗಿರುತ್ತದೆ. ವ್ಯಾಯಮ ಮಾಡದೇ ಇರುವುದು ಕೂಡ ಸ್ತನ ಕ್ಯಾನ್ಸರ್​ಗೆ ಕಾರಣವಾಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ. ವಯಸ್ಕರು ವಾರಕ್ಕೆ 150 ನಿಮಿಷಗಳ ಮಧ್ಯಮ ಏರೋಬಿಕ್ ಚಟುವಟಿಕೆ ಅಥವಾ 75 ನಿಮಿಷಗಳ ಶ್ರಮದಾಯಕ ಏರೋಬಿಕ್ ಚಟುವಟಿಕೆಯನ್ನು ಮಾಡಬೇಕು. ಜತೆಗೆ ವಾರಕ್ಕೆ ಕನಿಷ್ಠ ಎರಡು ಬಾರಿ ವ್ಯಾಯಾಮದ ತರಬೇತಿ ಪಡೆದುಕೊಳ್ಳಬೇಕು ಎನ್ನುತ್ತದೆ ವೈದ್ಯಲೋಕ.

ಆಲ್ಕೋಹಾಲ್​ ಸೇವನೆ: ಆಲ್ಕೋಹಾಲ್ ನಿಮ್ಮ ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ ಎನ್ನುವ ನಂಬಿಕೆಯಿದೆ. ಆದರೆ ಇದು ಸ್ತನ ಕ್ಯಾನ್ಸರ್ ಅಪಾಯವನ್ನೂ ಹೆಚ್ಚಿಸುತ್ತದೆ. ಸೇವಿಸುವ ಆಲ್ಕೋಹಾಲ್ ಪ್ರಮಾಣದೊಂದಿಗೆ ಅಪಾಯದ ಮಟ್ಟವು ಹೆಚ್ಚಾಗುತ್ತದೆ.

ಧೂಮಪಾನ:  ಸ್ತನ ಕ್ಯಾನ್ಸರ್​ನ ಅಪಾಯವನ್ನು ಧೂಮಪಾನ ಹೆಚ್ಚಿಸುತ್ತದೆ. ಜತೆಗೆ ಇದು ಶ್ವಾಸಕೋಶದ ಕ್ಯಾನ್ಸರ್​ಗೂ ಕಾರಣವಾಗುತ್ತದೆ. ಧೂಮಪಾನ ಮಾಡುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್​ ಅಪಾಯ ಹೆಚ್ಚು ಇತ್ತೀಚಿಗೆ ನಡೆದ ಅಧ್ಯಯಯನ ಸಾಬೀತುಪಡಿಸಿದೆ.

ರಾಸಾಯನಿಕ ವಸ್ತುಗಳ ಬಳಕೆ: ರಾಸಾಯನಿಕ ವಸ್ತುಗಳ ಅತಿಯಾದ ಬಳಕೆಯಿಂದ ಸ್ತನ ಕ್ಯಾನ್ಸರ್​ ಅಪಾಯ ಹೆಚ್ಚು. ಅವುಗಳಲ್ಲಿ ಕಾಸ್ಮೇಟಿಕ್ಸ್​ ಅಥವಾ ಪ್ಲಾಸ್ಟಿಕ್​ಗಳ ಅತಿಯಾದ ಬಳಕೆಯಿಂದಲೂ ಸ್ತನ ಕ್ಯಾನ್ಸರ್​ ಬರುತ್ತದೆ ಎನ್ನಲಾಗಿದೆ.

ಗರ್ಭಧಾರಣೆ ವಿಳಂಬ: 35 ವರ್ಷಗಳ ನಂತರ ಗರ್ಭಧರಿಸುವ ಮಹಿಳೆಯರು ಮತ್ತು ಗರ್ಭಧಾರಣೆಯನ್ನು ಹೊಂದಿರದ ಮಹಿಳೆಯರು ನಿರಂತರವಾಗಿ ಈಸ್ಟ್ರೊಜೆನ್ ಹಾರ್ಮೋನ್‌ಗೆ ಒಡ್ಡಿಕೊಳ್ಳುತ್ತಾರೆ. ಅವರಿಗೆ ಸ್ತನ ಕ್ಯಾನ್ಸರ್ ಬರುವ ಅಪಾಯ ಹೆಚ್ಚು. ಯುವತಿಯರಿಗೆ 35 ವರ್ಷಕ್ಕಿಂತ ಮುಂಚಿತವಾಗಿ ಗರ್ಭಧರಿಸುವುದು ಸೂಕ್ತ ಸಮಯವಾಗಿದೆ.

ಸ್ತನ್ಯಪಾನ ಮಾಡಿಸದೇ ಇರುವುದು: ಮಹಿಳೆ ಹಾಲುಣಿಸುವ ಸಮಯದಲ್ಲಿ ಈಸ್ಟ್ರೊಜೆನ್ ಮಟ್ಟಗಳು ಕಡಿಮೆಯಾಗಬಹುದು. ಸ್ತನ್ಯಪಾನ ಮಾಡಿಸುವ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬರುವ ಅಪಾಯವು ಮಕ್ಕಳನ್ನು ಹೊಂದಿದ್ದರೂ ಸ್ತನ್ಯಪಾನ ಮಾಡದ ಮಹಿಳೆಯರಿಗಿಂತ 4.3 ಪ್ರತಿಶತದಷ್ಟು ಕಡಿಮೆಯಾಗಿದೆ. ಹೀಗಾಗಿ ಸ್ತನ್ಯಪಾನ ಮಾಡಿಸುವುದರಿಂದ ಸ್ತನ ಕ್ಯಾನ್ಸರ್​ನ ಅಪಾಯವನ್ನು ಕಡಿಮೆ ಮಾಡಬಹುದು.

ಇದನ್ನೂ ಓದಿ:

ವಾಯುಮಾಲಿನ್ಯದಿಂದ ಹದಿಹರೆಯದವರಲ್ಲಿ ಹೆಚ್ಚುತ್ತಿದೆ ಖಿನ್ನತೆ ಸಮಸ್ಯೆ: ಅಧ್ಯಯನ

Published On - 10:30 am, Wed, 16 March 22