AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋಳಿ ಹಬ್ಬದಂದು ಕಣ್ಣಿನ ರಕ್ಷಣೆ ಹೇಗೆ? ಕೆಲ ಸಲಹೆ ಇಲ್ಲಿವೆ

ಮೈ ಮರೆತು ಆಡುವ ಈ ಹಬ್ಬದಲ್ಲಿ ದೇಹಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತೆ. ಹೀಗಾಗಿ ಅಪಾಯಗಳ ಬಗ್ಗೆ ಎಚ್ಚರ ವಹಿಸಬೇಕು. ಒಬ್ಬರಿಗೊಬ್ಬರು ಬಣ್ಣ ಎರಚಿಕೊಂಡಾಗ ಕಣ್ಣಿಗೆ ಬೀಳಬಹುದು.

ಹೋಳಿ ಹಬ್ಬದಂದು ಕಣ್ಣಿನ ರಕ್ಷಣೆ ಹೇಗೆ? ಕೆಲ ಸಲಹೆ ಇಲ್ಲಿವೆ
ಸಾಂದರ್ಭಿಕ ಚಿತ್ರ
TV9 Web
| Updated By: sandhya thejappa|

Updated on: Mar 15, 2022 | 2:06 PM

Share

ಮಾರ್ಚ್ 18ಕ್ಕೆ ಹೋಳಿ ಹಬ್ಬ (Holi). ದೇಶದ ಹಲವು ಕಡೆ ಬಹಳ ಅದ್ದೂರಿಯಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಕುಣಿದು ಕುಪ್ಪಳಿಸುವುದಕ್ಕೆ ಜನ ಕಾಯುತ್ತಿದ್ದಾರೆ. ಬಣ್ಣಗಳನ್ನ (Colour) ಎರಚ್ಚುತ್ತಾ ಸಂಭ್ರಮಿಸುವ ಈ ಹಬ್ಬ ಎಂದರೆ ಎಲ್ಲರಿಗೂ ಇಷ್ಟ. ಮೈ ಮರೆತು ಕುಣಿಯುತ್ತಾ ಆಡುವ ಈ ಹಬ್ಬದಲ್ಲಿ ದೇಹಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತೆ. ಹೀಗಾಗಿ ಅಪಾಯಗಳ ಬಗ್ಗೆ ಎಚ್ಚರ ವಹಿಸಬೇಕು. ಒಬ್ಬರಿಗೊಬ್ಬರು ಬಣ್ಣ ಎರಚಿಕೊಂಡಾಗ ಕಣ್ಣಿಗೆ ಬೀಳಬಹುದು. ಹೋಳಿ ಹಬ್ಬದಂದು ಕಣ್ಣಿನ ಬಗ್ಗೆ ಹೇಗೆ ಎಚ್ಚರವಹಿಸಬೇಕು ಅಂತ ಇಲ್ಲಿ ತಿಳಿಸಲಾಗಿದೆ.

ಕಣ್ಣಿನ ಸುತ್ತ ಕೊಬ್ಬರಿ ಎಣ್ಣೆ: ಕೆಮಿಕಲ್ ಬಳಸಿ ಬಣ್ಣವನ್ನು ಸಿದ್ಧಪಡಿಸಲಾಗುತ್ತದೆ. ಹೀಗಾಗಿ ಬಣ್ಣ ಕಣ್ಣಿಗೆ ಹೋದರೆ ಅಲರ್ಜಿ ಆಗಬಹುದು. ಕೆಲವೊಮ್ಮೆ ಕಾಣಿಸದೇ ಇರಬಹುದು. ಇದರಿಂದ ಕಣ್ಣಿನ ಸುತ್ತ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡು ಹೋಳಿ ಆಡಿ. ಹೀಗೆ ಮಾಡಿದರೆ ಕಣ್ಣು ಸುರಕ್ಷಿತವಾಗಿರುತ್ತದೆ.

ಗ್ಲಾಸ್ ಬಳಸಿ: ಹೋಳಿ ಆಡುವ ಮೊದಲು ಕಣ್ಣಿನ ಬಗ್ಗೆ ಕಾಳಜಿ ಇರಲಿ. ರಕ್ಷಣಾತ್ಮಕ ಗ್ಲಾಸ್, ಸನ್​ಗ್ಲಾಸ್​ಗಳನ್ನ ಬಳಸಿ. ಗ್ಲಾಸ್ ಬಳಿಸಿದರೆ ಕಣ್ಣಿಗೆ ಬೀಳುವ ಬಣ್ಣ ಗ್ಲಾಸ್ ಮೇಲೆ ಬೀಳುತ್ತದೆ. ಈ ಮೂಲಕ ಹೋಳಿ ಹಬ್ಬದಂದು ಕಣ್ಣನ್ನು ರಕ್ಷಣೆ ಮಾಡಬಹುದು.

ಶುದ್ಧ ನೀರಿನಿಂದ ತೊಳೆಯಿರಿ: ಹೋಳಿ ಹಬ್ಬದಲ್ಲಿ ಬಣ್ಣಗಳು ಕಣ್ಣಿಗೆ ಬೀಳುವುದು ಸಹಜ. ಆದರೆ ಹಬ್ಬ ಸಂಭ್ರಮದಿಂದ ಕೂಡಿರಬೇಕು. ಬದಲಾಗಿ ನೋವಿಗೆ ಕಾರಣವಾಗಬಾರದು. ಕಣ್ಣಿಗೆ ಬಣ್ಣ ಬಿದ್ದ ತಕ್ಷಣ ಶುದ್ಧ ನೀರಿನಿಂದ ತೊಳೆಯಿರಿ. ಅಥವಾ ಶುದ್ಧ ನೀರಿನಲ್ಲಿ ಕಣ್ಣು ಬಿಡಿ. ಹೀಗೆ ಮಾಡಿದರೆ ಕಣ್ಣನ್ನು ರಕ್ಷಿಸಿಕೊಳ್ಳಬಹುದು.

ಬಣ್ಣದ ಪೌಡರ್ ಬಳಸಿ: ಕಣ್ಣಿನ ಒಳಗೆ ಬಣ್ಣ ಹೋದರೆ ಯಾವುದೇ ಕಾರಣಕ್ಕೂ ಉಜ್ಜಬಾರದು. ಹೋಳಿ ಹಬ್ಬದಂದು ಬಣ್ಣದ ಪೇಸ್ಟ್ ಬಳಸುವ ಬದಲು ಪುಡಿಯನ್ನು ಬಳಸಿ. ಇದರ ಅಪಾಯ ಪ್ರಮಾಣ ಕಡಿಮೆ. ಒಂದು ವೇಳೆ ಕಣ್ಣಿಗೆ ಬಣ್ಣ ಹೋಗಿ ಕೆಂಪಾದರೆ ತಕ್ಷಣ ವೈದ್ಯರ ಬಳಿ ಹೋಗಿ ಪರಿಕ್ಷಿಸಿಕೊಳ್ಳಿ.

ಇದನ್ನೂ ಓದಿ

Jasprit Bumrah: ಭಾರತ ಪರ ಇದುವರೆಗೆ ಯಾರೂ ಮಾಡಿಲ್ಲ: ವಿಶೇಷ ದಾಖಲೆ ನಿರ್ಮಿಸಿದ ಜಸ್​ಪ್ರೀತ್ ಬುಮ್ರಾ

ಫಿಲ್ಮ್​ ಚೇಂಬರ್​ನಲ್ಲಿ ಚುನಾವಣೆ ಗಲಾಟೆ; ಭಾಮಾ ‌ಹರೀಶ್ ಹಾಗು ಸುರೇಶ್ ನಡುವೆ ಮಾತಿನ ಚಕಮಕಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ