AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Holi 2022: ಗ್ರಹ ದೋಷ ದೂರವಾಗಲು ಹೋಳಿ ಹಬ್ಬದಂದು ಈ ರಾಶಿಯವರು ಈ ಬಣ್ಣ ಬಳಸಿ

ಈ ಬಾರಿ ಹಬ್ಬಕ್ಕೆ ನೀವು ರಾಶಿಚಕ್ರದ ಪ್ರಕಾರ ಬಣ್ಣಗಳನ್ನು ಆರಿಸಿಕೊಂಡು ಹೋಳಿ ಆಡಿದರೆ, ನಿಮ್ಮ ಜೀವನಕ್ಕೆ ಸಂಬಂಧಿಸಿದ ಗ್ರಹ ದೋಷಗಳು ದೂರವಾಗುತ್ತವೆ.

Holi 2022: ಗ್ರಹ ದೋಷ ದೂರವಾಗಲು ಹೋಳಿ ಹಬ್ಬದಂದು ಈ ರಾಶಿಯವರು ಈ ಬಣ್ಣ ಬಳಸಿ
ಸಾಂದರ್ಭಿಕ ಚಿತ್ರ
TV9 Web
| Updated By: sandhya thejappa|

Updated on: Mar 15, 2022 | 12:19 PM

Share

ರಂಗು ರಂಗಿನ ಹೋಳಿ ಹಬ್ಬಕ್ಕೆ (Holi) ಇನ್ನು ಎರಡೇ ದಿನ ಬಾಕಿ. ಮಾರ್ಚ್ 18ರಂದು ನಡೆಯುವ ಹೋಳಿ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ಹೋಳಿ ಹಬ್ಬ ಎನ್ನುವುದು ಭಾರತದ ಸಂಸ್ಕೃತಿಯ ಸಂಕೇತವಾಗಿದೆ. ಈ ಬಾರಿ ಹಬ್ಬಕ್ಕೆ ನೀವು ರಾಶಿಚಕ್ರದ ಪ್ರಕಾರ ಬಣ್ಣಗಳನ್ನು (Colours) ಆರಿಸಿಕೊಂಡು ಹೋಳಿ ಆಡಿದರೆ, ನಿಮ್ಮ ಜೀವನಕ್ಕೆ ಸಂಬಂಧಿಸಿದ ಗ್ರಹ ದೋಷಗಳು ದೂರವಾಗುತ್ತವೆ. ಅದೃಷ್ಟ ಕೂಡ ಬದಲಾಗಬಹುದು. ಈ ಲೇಖನದಲ್ಲಿ ಯಾವ ರಾಶಿಯವರು ಯಾವ ಬಣ್ಣದೊಂದಿಗೆ ಆಟವಾಡಿದರೆ ಒಳ್ಳೆಯದು ಅಂತ ತಿಳಿಸಲಾಗಿದೆ.

  1. ಮೇಷ ಮತ್ತು ವೃಶ್ಚಿಕ: ಎರಡೂ ರಾಶಿಗಳ ಅಧಿಪತಿ ಮಂಗಳ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳನ ಬಣ್ಣ ಕೆಂಪು. ಹೀಗಾಗಿ, ಈ ರಾಶಿಯವರು ಹೋಳಿ ದಿನದಂದು ಕೆಂಪು, ಗುಲಾಬಿ ಬಣ್ಣದಲ್ಲಿ ಆಟವಾಡಿ ಸಂಭ್ರಮಿಸಿ.
  2. ಮೇಷ ಮತ್ತು ವೃಶ್ಚಿಕ: ಎರಡೂ ರಾಶಿಗಳ ಅಧಿಪತಿ ಮಂಗಳ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳನ ಬಣ್ಣ ಕೆಂಪು. ಹೀಗಾಗಿ, ಈ ರಾಶಿಯವರು ಹೋಳಿ ದಿನದಂದು ಕೆಂಪು, ಗುಲಾಬಿ ಬಣ್ಣದಲ್ಲಿ ಆಟವಾಡಿ ಸಂಭ್ರಮಿಸಿ.
  3. ಕನ್ಯಾ ಮತ್ತು ಮಿಥುನ: ಈ ರಾಶಿಗಳ ಅಧಿಪತಿ ಬುಧ. ಬುಧ ಗ್ರಹದ ಬಣ್ಣವನ್ನು ಹಸಿರು ಎಂದು ಪರಿಗಣಿಸಲಾಗುತ್ತದೆ. ಹಸಿರು ಬಣ್ಣದ ಬಳಸಿದರೆ ಜೀವನದಲ್ಲಿ ಸಂತೋಷ ಮತ್ತು ನೆಮ್ಮದಿ ಸಿಗುತ್ತದೆ. ಹಸಿರು ಬಣ್ಣವನ್ನು ಹೊರತುಪಡಿಸಿ, ಕನ್ಯಾ ಮತ್ತು ಮಿಥುನ ಜನರು ಹಳದಿ, ಕಿತ್ತಳೆ ಮತ್ತು ತಿಳಿ ಗುಲಾಬಿ ಬಣ್ಣಗಳೊಂದಿಗೆ ಹೋಳಿಯನ್ನು ಆಡಬಹುದು.
  4. ಮಕರ ಮತ್ತು ಕುಂಭ: ಈ ರಾಶಿಗಳ ಅಧಿಪತಿ ಶನಿ ದೇವ. ಶನಿದೇವನ ಬಣ್ಣ ಕಪ್ಪು ಅಥವಾ ನೀಲಿ. ಅಂತಹವರಿಗೆ ಮಂಗಳಕರವಾದದ್ದು ನೀಲಿ. ಕಪ್ಪು ಬಣ್ಣದಿಂದ ಹೋಳಿ ಆಡಲು ಸಾಧ್ಯವಿಲ್ಲ. ಹೀಗಾಗಿ ನೀಲಿ, ಹಸಿರು ಅಥವಾ ವೈಡೂರ್ಯದ ಬಣ್ಣಗಳೊಂದಿಗೆ ಹೋಳಿಯನ್ನು ಆಡಬಹುದು.
  5. ಧನು ಮತ್ತು ಮೀನ: ಧನು ರಾಶಿ ಮತ್ತು ಮೀನ ರಾಶಿಯ ಅಧಿಪತಿ ಗುರು. ಅವನ ನೆಚ್ಚಿನ ಬಣ್ಣವನ್ನು ಹಳದಿ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ರಾಶಿಗಳ ಜನರು ಹಳದಿ ಬಣ್ಣವನ್ನು ಧರಿಸಬೇಕು. ಇದಲ್ಲದೆ, ಕಿತ್ತಳೆ ಬಣ್ಣವನ್ನು ಸಹ ಬಳಸಬಹುದು.
  6. ಕರ್ಕಾಟಕ ಮತ್ತು ಸಿಂಹ: ಕರ್ಕಾಟಕ ಮತ್ತು ಸಿಂಹ ರಾಶಿಯ ಅಧಿಪತಿ ಚಂದ್ರ. ಈ ರಾಶಿಯವರು ಹೋಳಿಯನ್ನು ಬಿಳಿ ಬಣ್ಣದಿಂದ ಆಡಬೇಕು. ಬಿಳಿ ಬಣ್ಣದಿಂದ ಹೋಳಿ ಆಡುವಂತಿಲ್ಲ. ಹೀಗಾಗಿ ಈ ರಾಶಿಯವರು ಯಾವುದೇ ಬಣ್ಣವನ್ನು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಮೊಸರು ಅಥವಾ ಹಾಲು ಮಿಶ್ರಣ ಮಾಡಿ. ಇದೇ ಸಮಯದಲ್ಲಿ, ಸೂರ್ಯ ದೇವರು, ಸಿಂಹ ರಾಶಿಯ ಅಧಿಪತಿಯಾಗಿರುವುದರಿಂದ, ಕಿತ್ತಳೆ, ಕೆಂಪು ಮತ್ತು ಹಳದಿ ಬಣ್ಣಗಳೊಂದಿಗೆ ಹೋಳಿಯನ್ನು ಆಡಬಹುದು.

ಇದನ್ನೂ ಓದಿ

ಹೋಳಿ ಹಬ್ಬದ ನಂತರವೇ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ರಚನೆ: ಮೂಲಗಳು

ಹೋಳಿ ಬಣ್ಣ ಆಡುವ ಮುನ್ನ ನಿಮ್ಮ ಮುಖದ ಕಾಂತಿ ಬಗ್ಗೆ ಎಚ್ಚರಿಕೆ ವಹಿಸಿ