Jasprit Bumrah: ಭಾರತ ಪರ ಇದುವರೆಗೆ ಯಾರೂ ಮಾಡಿಲ್ಲ: ವಿಶೇಷ ದಾಖಲೆ ನಿರ್ಮಿಸಿದ ಜಸ್​ಪ್ರೀತ್ ಬುಮ್ರಾ

IND vs SL; ಈ ಪಂದ್ಯದಲ್ಲಿ ವಿಕೆಟ್​ಗಳ ಮಳೆ ಸುರಿಸಿದ ಯಾರ್ಕರ್ ಕಿಂಗ್ ಜಸ್​ಪ್ರೀತ್ ಬುಮ್ರಾ (Jasprit Bumrah) ವಿಶೇಷ ದಾಖಲೆ ನಿರ್ಮಿಸಿದರು. ಅದುಕೂಡ ಭಾರತದ ಯಾವೊಬ್ಬ ಬೌಲರ್ ಮಾಡಿರದ ಸಾಧನೆ ಎಂಬುದು ವಿಶೇಷ.

Jasprit Bumrah: ಭಾರತ ಪರ ಇದುವರೆಗೆ ಯಾರೂ ಮಾಡಿಲ್ಲ: ವಿಶೇಷ ದಾಖಲೆ ನಿರ್ಮಿಸಿದ ಜಸ್​ಪ್ರೀತ್ ಬುಮ್ರಾ
Jasprit Bumrah
Follow us
TV9 Web
| Updated By: Vinay Bhat

Updated on: Mar 15, 2022 | 1:50 PM

ಭಾರತ ಕ್ರಿಕೆಟ್ ತಂಡ ಶ್ರೀಲಂಕಾ (India vs Sri Lanka) ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಗೆದ್ದು ಸರಣಿ ಕ್ಲೀನ್​ಸ್ವೀಪ್ ಮಾಡಿದ ಸಾಧನೆ ಗೈದಿದೆ. ಟೀಮ್ ಇಂಡಿಯಾ ಬೌಲಿಂಗ್ ದಾಳಿಗೆ ಧೂಳಿಪಟವಾದ ಸಿಂಹಳೀಯರು ಹೀನಾಯ ಸೋಲು ಕಂಡರೆ, ಭಾರತ 238 ರನ್​​ಗಳ ಅಮೋಘ ಜಯ ಸಾಧಿಸಿತು. ಈ ಮೂಲಕ ಕಳೆದ 10 ವರ್ಷಗಳಲ್ಲಿ ತವರು ನೆಲದಲ್ಲಿ ಯಾವುದೇ ತಂಡದ ಎದುರು ಟೆಸ್ಟ್ ಸರಣಿ ಸೋಲದ ತನ್ನ ದಾಖಲೆಯನ್ನು ಮುಂದುವರೆಸಿತು. ಅಲ್ಲದೆ ತವರಿನಲ್ಲಿ ಸತತ 15 ಸರಣಿ ಗೆದ್ದ ಏಕೈಕ ತಂಡವಾಗಿ ಟೀಮ್ ಇಂಡಿಯಾ ಇತಿಹಾಸ ನಿರ್ಮಿಸಿದೆ. ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಶ್ರೇಯಸ್ ಅಯ್ಯರ್ (Shreyas Iyer) ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರೆ, ಎರಡೂ ಟೆಸ್ಟ್ ಸರಣಿಯಲ್ಲಿ ಸ್ಫೋಟಕ ಆಟವಾಡಿದ ರಿಷಭ್ ಪಂತ್ ಸರಣಿಶ್ರೇಷ್ಠ ತಮ್ಮದಾಗಿಸಿದರು. ಈ ಪಂದ್ಯದಲ್ಲಿ ವಿಕೆಟ್​ಗಳ ಮಳೆ ಸುರಿಸಿದ ಯಾರ್ಕರ್ ಕಿಂಗ್ ಜಸ್​ಪ್ರೀತ್ ಬುಮ್ರಾ (Jasprit Bumrah) ವಿಶೇಷ ದಾಖಲೆ ನಿರ್ಮಿಸಿದರು. ಅದುಕೂಡ ಭಾರತದ ಯಾವೊಬ್ಬ ಬೌಲರ್ ಮಾಡಿರದ ಸಾಧನೆ ಎಂಬುದು ವಿಶೇಷ.

ಹೌದು,  ಶ್ರೀಲಂಕಾ ವಿರುದ್ಧ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಜಸ್‌ಪ್ರಿತ್‌ ಬುಮ್ರಾ ಅವರು ಐದು ವಿಕೆಟ್‌ ಸಾಧನೆ ಮಾಡಿದರು. ಆ ಮೂಲಕ ಐದು ವಿಭಿನ್ನ ಖಂಡಗಳಲ್ಲಿ ಐದು ವಿಕೆಟ್‌ ಸಾಧನೆ ಮಾಡಿದ ಮೊದಲ ಭಾರತೀಯ ಏಕೈಕ ಬೌಲರ್ ಎನಿಸಿಕೊಂಡರು. ಅಲ್ಲದೆ ಈ ಸಾಧನೆ ಮಾಡಿರುವ ಡೇಲ್‌ ಸ್ಟೇನ್‌, ಜೇಸನ್‌ ಗಿಲೆಸ್ಪಿ ಹಾಗೂ ಗ್ರಹಾಮ್‌ ಮೆಕೆಂಝಿ ಅವರ ಎಲೈಟ್‌ ಪಟ್ಟಿಗೆ ಬುಮ್ರಾ ಇದೀಗ ಸೇರ್ಪಡೆಯಾಗಿದ್ದಾರೆ. ಭಾರತ(ಏಷ್ಯಾ), ದಕ್ಷಿಣ ಆಫ್ರಿಕಾ(ಆಫ್ರಿಕಾ), ಆಸ್ಟ್ರೇಲಿಯಾ, ಇಂಗ್ಲೆಂಡ್‌ ಹಾಗೂ ವೆಸ್ಟ್ ಇಂಡೀಸ್‌(ಅಮೆರಿಕ) ಮುಂತಾದ ದೇಶಗಳಲ್ಲಿ ಜಸ್‌ಪ್ರಿತ್‌ ಬುಮ್ರಾ ಐದು ವಿಕೆಟ್‌ ಸಾಧನೆ ಮಾಡಿದ್ದಾರೆ.

ಈವರೆಗೆ ಆಡಿರುವ ಕೇವಲ 29 ಟೆಸ್ಟ್‌ ಪಂದ್ಯಗಳಲ್ಲಿ 8ನೇ ಬಾರಿ ಐದು ವಿಕೆಟ್‌ಗಳ ಸಾಧನೆ ಮೆರೆದ ಬುಮ್ರಾ, 29 ಟೆಸ್ಟ್‌ಗಳ ಅಂತ್ಯಕ್ಕೆ ಅತಿ ಹೆಚ್ಚು ಐದು ವಿಕೆಟ್‌ಗಳ ಸಾಧನೆ ಮೆರೆದ ಬೌಲರ್‌ಗಳ ಪಟ್ಟಿಯಲ್ಲಿ ಕಪಿಲ್‌ ದೇವ್‌ ಅವರ ದಾಖಲೆ ಕೂಡ ಸರಿಗಟ್ಟಿದ್ದಾರೆ. ಇದೇ ವೇಳೆ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ 5 ವಿಕೆಟ್‌ ಸಾಧನೆ ಮೆರೆದ ಭಾರತದ ನಾಲ್ಕನೇ ಬೌಲರ್‌ ಹಾಗೂ ಮೂರನೇ ವೇಗಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇಶಾಂತ್‌ ಶರ್ಮಾ, ಉಮೇಶ್‌ ಯಾದವ್ ಮತ್ತು ಅಕ್ಷರ್‌ ಪಟೇಲ್‌ ಇರುವ ವಿಶೇಷ ಪಟ್ಟಿಗೆ ಬುಮ್ರಾ ಸೇರ್ಪಡೆಯಾಗಿದ್ದಾರೆ

ಸಾಗರೋತ್ತರ ಸರಣಿಗಳಲ್ಲಿ ಭಾರತದ ಬ್ರಹ್ಮಾಸ್ತ್ರವಾಗಿರುವ ಜಸ್ಪ್ರೀತ್ ಬುಮ್ರಾ ಸ್ವದೇಶದಲ್ಲಿ ಇದುವರೆಗೂ ಉತ್ತಮ ಪ್ರದರ್ಶನ ತೋರಲು ಅವಕಾಶ ಸಿಕ್ಕಿರಲಿಲ್ಲ. ಇದೀಗ ಶ್ರೀಲಂಕಾ ವಿರುದ್ಧದ ಟೆಸ್ಟ್​ನಲ್ಲಿ 8 ವಿಕೆಟ್ ಪಡೆಯುವ ಮೂಲಕ ತವರಿನಲ್ಲೂ ತಂಡಕ್ಕೆ ನೆರವಾಗಬಲ್ಲೆ ಎಂದು ಸಾಬೀತುಪಡಿಸಿದ್ದಾರೆ. ಈ ಬಗ್ಗೆ ಖುಷಿ ಹಂಚಿಕೊಂಡ ಅವರು, “ತವರಿನಲ್ಲಿ ವಿಕೆಟ್​ ಪಡೆದಾಗ ಉತ್ತಮ ಭಾವನೆ ಉಂಟು ಮಾಡಲಿದೆ. ನೀವು ಎಲ್ಲಾ ಸ್ವರೂಪದ ಕ್ರಿಕೆಟ್ ಆಡುವಾಗ, ನೀವು ನಿಮ್ಮ ದೇಹದ ಕಡೆಗೂ ಗಮನ ನೀಡಬೇಕಾಗುತ್ತದೆ. ಹಾಗಾಗಿ, ಕೆಲವು ಪಂದ್ಯಗಳಿಂದ ಹೊರಗುಳಿಯುವುದು ಅನಿವಾರ್ಯ. ಆದರೆ, ಅವಕಾಶ ಸಿಕ್ಕಾಗ ತಂಡದ ಯಶಸ್ಸಿನಲ್ಲಿ ನಿಮ್ಮದೇ ಆದ ಕೊಡುಗೆ ನೀಡುವುದು ಸದಾ ಹೆಮ್ಮೆಯ ವಿಷಯ” ಎಂದು ಹೇಳಿದರು.

ಬುಮ್ರಾ 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಅಲ್ಲಿಂದ ಇಲ್ಲಿಯವರೆಗೆ 29 ಟೆಸ್ಟ್​ ಪಂದ್ಯಗಳನ್ನಾಡಿದ್ದರೂ ಭಾರತದಲ್ಲಿ ಕೇವಲ 4 ಪಂದ್ಯಗಳಲ್ಲಿ(ಈ ಸರಣಿ ಸೇರಿ) ಆಡುವ ಅವಕಾಶ ಪಡೆದಿದ್ದರು. ಅವರು ಈ ಸರಣಿಗೂ ಮುನ್ನ ಭಾರತದಲ್ಲಿ 2 ಪಂದ್ಯಗಳನ್ನಾಡಿ 4 ವಿಕೆಟ್​ ಪಡೆದಿದ್ದರು. ಇದೀಗ ಪ್ರಸ್ತುತ ನಡೆಯುತ್ತಿರುವ ಸರಣಿಯಲ್ಲಿ 8 ವಿಕೆಟ್​ ಪಡೆದಿದ್ದಾರೆ. ವಿದೇಶದಲ್ಲಿ ಆಡಿರುವ 25 ಪಂದ್ಯಗಳಿಂದ 109 ವಿಕೆಟ್ ಪಡೆದಿದ್ದಾರೆ.

Virat Kohli: ಶ್ರೀಲಂಕಾ ನಾಯಕ ದಿಮುತ್ ಕರುಣರತ್ನೆ ಶತಕ ಸಿಡಿಸಿದ ವೇಳೆ ವಿರಾಟ್ ಕೊಹ್ಲಿ ಮಾಡಿದ್ದೇನು ನೋಡಿ

IPL 2022: ಐಪಿಎಲ್ 2022 ರಲ್ಲಿ ದೊಡ್ಡ ಬದಲಾವಣೆ: ಹೊಸ ನಿಯಮ ಜಾರಿಗೆ ತಂದ ಬಿಸಿಸಿಐ

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ