AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: DPL ನತ್ತ ಮುಖ ಮಾಡಿದ IPL ನಲ್ಲಿ ಅವಕಾಶ ಸಿಗದ ಭಾರತೀಯ ಆಟಗಾರರು..!

DPL 2022: ಐಪಿಎಲ್ ತಂಡಗಳಲ್ಲಿ ಕಾಣಿಸಿಕೊಳ್ಳದ ಭಾರತದ ದೇಶೀಯ ಆಟಗಾರರಿಗೆ ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ ವಿವಿಧೆಡೆ ಕ್ರಿಕೆಟ್ ಆಡಲು ಬಿಸಿಸಿಐ ಅನುಮತಿ ನೀಡಿದೆ.

IPL 2022: DPL ನತ್ತ ಮುಖ ಮಾಡಿದ IPL ನಲ್ಲಿ ಅವಕಾಶ ಸಿಗದ ಭಾರತೀಯ ಆಟಗಾರರು..!
DPL teams
TV9 Web
| Updated By: ಝಾಹಿರ್ ಯೂಸುಫ್|

Updated on: Mar 15, 2022 | 3:23 PM

Share

IPL 2022 ರ ಮೆಗಾ ಹರಾಜಿನಲ್ಲಿ ಮಾರಾಟವಾಗದ ಭಾರತೀಯ ಆಟಗಾರರು ಇದೀಗ ಬಾಂಗ್ಲಾದೇಶದಲ್ಲಿ ನಡೆಯಲಿರುವ ಢಾಕಾ ಪ್ರೀಮಿಯರ್ ಲೀಗ್​ನತ್ತ ಮುಖ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಅಭಿಮನ್ಯು ಈಶ್ವರನ್, ಪರ್ವೇಜ್ ರಸೂಲ್, ಬಾಬಾ ಅಪರಾಜಿತ್, ಅಶೋಕ್ ಮನೇರಿಯಾ, ಚಿರಾಗ್ ಜಾನಿ ಮತ್ತು ಗುರಿಂದರ್ ಸಿಂಗ್ ಹೆಸರುಗಳಿವೆ. ಈ ಆಟಗಾರರನ್ನು ಐಪಿಎಲ್​ನಲ್ಲಿ ಯಾವುದೇ ತಂಡ ಖರೀದಿಸಿರಲಿಲ್ಲ. ಇದೀಗ 50 ಓವರ್​ಗಳ ಕ್ರಿಕೆಟ್​ ಟೂರ್ನಿ ಢಾಕಾ ಪ್ರೀಮಿಯರ್ ಲೀಗ್ (ಡಿಪಿಎಲ್) ನಲ್ಲಿ ಆಡಲು ಒಪ್ಪಂದ ಮಾಡಿಕೊಂಡಿದ್ದಾರೆ.

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹನುಮ ವಿಹಾರಿ ಟೀಮ್ ಇಂಡಿಯಾದ ಭಾಗವಾಗಿದ್ದರು. ಢಾಕಾಗೆ ತೆರಳುವ ಮುನ್ನ ಅವರು ಮೊದಲು ಹೈದರಾಬಾದ್‌ನಲ್ಲಿರುವ ತಮ್ಮ ಮನೆಗೆ ಆಗಮಿಸಿದ್ದಾರೆ. ಹನುಮಾ ವಿಹಾರಿ ಅವರು ಢಾಕಾ ಪ್ರೀಮಿಯರ್ ಲೀಗ್‌ನಲ್ಲಿ ಅಬಹಾನಿ ಲಿಮಿಟೆಡ್‌ ತಂಡದ ಪರ ಆಡಲಿದ್ದಾರೆ. ಇದಾಗ್ಯೂ ಮೊದಲ 3 ಪಂದ್ಯಗಳಲ್ಲಿ ಹನುಮ ಈ ತಂಡದ ಪರ ಕಾಣಿಸಿಕೊಳ್ಳುವುದಿಲ್ಲ ಎಂದು ತಿಳಿದು ಬಂದಿದೆ. ಅವರ ಸ್ಥಾನದಲ್ಲಿ ಅಫ್ಘಾನಿಸ್ತಾನದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ನಜಿಬುಲ್ಲಾ ಜದ್ರಾನ್‌ಗೆ 3 ಪಂದ್ಯಗಳಲ್ಲಿ ಅವಕಾಶ ನೀಡಲಾಗಿದೆ.

7 ಆಟಗಾರರು: ಹನುಮ ವಿಹಾರಿ ಅಲ್ಲದೆ ಟೀಂ ಇಂಡಿಯಾದ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರುವ ಅಭಿಮನ್ಯು ಈಶ್ವರನ್ ಕೂಡ ಢಾಕಾ ಪ್ರೀಮಿಯರ್ ಲೀಗ್‌ನತ್ತ ಮುಖ ಮಾಡಿದ್ದಾರೆ. ಈಶ್ವರನ್ ಪ್ರೈಮ್ ಬ್ಯಾಂಕ್‌ ತಂಡದ ಪರ ಆಡಲಿದ್ದಾರೆ. ಇವರಲ್ಲದೆ, ಶೇಖ್ ಜಮಾಲ್ ಧನ್ಮಂಡಿಯ ತಂಡದ ಪರ ಪರ್ವೇಜ್ ರಸೂಲ್, ರೂಪಗಂಜ್ ಟೈಗರ್‌ಗಾಗಿ ಬಾಬಾ ಅಪರಾಜಿತ್, ಖೇಲಾಘರ್‌ನ ಅಶೋಕ್ ಮನೇರಿಯಾ, ಲೆಜೆಂಡ್ ಆಫ್ ರೂಪಗಂಜ್‌ನ ಚಿರಾಗ್ ಜಾನಿ ಮತ್ತು ಘಾಜಿ ಗ್ರೂಪ್ ಕ್ರಿಕೆಟರ್ಸ್‌ ಪರ ಗುರಿಂದರ್ ಕಾಣಿಸಿಕೊಳ್ಳಲಿದ್ದಾರೆ.

ವಿಹಾರಿ, ಈಶ್ವರನ್, ಅಪರಾಜಿತ್, ಮನೇರಿಯಾ ಮತ್ತು ರಸೂಲ್ ಈ ಹಿಂದೆ ಢಾಕಾ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ್ದಾರೆ. ಇವರಲ್ಲದೆ ದಿನೇಶ್ ಕಾರ್ತಿಕ್, ಮನೋಜ್ ತಿವಾರಿ ಮತ್ತು ಯೂಸುಫ್ ಪಠಾಣ್ ಅವರಂತಹ ಆಟಗಾರರು ಕೂಡ ಈ ಹಿಂದೆ ಢಾಕಾ ಪ್ರೀಮಿಯರ್ ಲೀಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಐಪಿಎಲ್ ತಂಡಗಳಲ್ಲಿ ಕಾಣಿಸಿಕೊಳ್ಳದ ಭಾರತದ ದೇಶೀಯ ಆಟಗಾರರಿಗೆ ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ ವಿವಿಧೆಡೆ ಕ್ರಿಕೆಟ್ ಆಡಲು ಬಿಸಿಸಿಐ ಅನುಮತಿ ನೀಡಿದೆ. ಕೆಲವರು ಡಿಪಿಎಲ್‌ಗಾಗಿ ಬಾಂಗ್ಲಾದೇಶಕ್ಕೆ ತೆರಳಿದರೆ, ಇನ್ನು ಕೆಲವರು ಯುಕೆಯಲ್ಲಿ ಕ್ಲಬ್ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸೀಸನ್​ನಲ್ಲಿ ಚೇತೇಶ್ವರ ಪೂಜಾರ ಅವರು ಇಂಗ್ಲಿಷ್ ಕೌಂಟಿ ಸರ್ಕ್ಯೂಟ್‌ನಲ್ಲಿ ಸಸೆಕ್ಸ್‌ ಪರ ಆಡಲಿದ್ದಾರೆ .

ಇದನ್ನೂ ಓದಿ: IPL 2022: ಐಪಿಎಲ್​ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್

(Hanuma Vihari, Abhimanyu Easwaran among seven Indians signed up by DPL teams)