IPL 2022: ಐಪಿಎಲ್ನ ಮೊದಲ ವಾರ 26 ಸ್ಟಾರ್ ಆಟಗಾರರು ಅಲಭ್ಯ..!
IPL 2022: ವಿಶೇಷ ಎಂದರೆ ಈ 5 ತಂಡಗಳಿಂದ ಐಪಿಎಲ್ನಲ್ಲಿ 26 ಆಟಗಾರರಿದ್ದಾರೆ. ಅಂದರೆ ಐಪಿಎಲ್ ಸೀಸನ್ 15 ಮೊದಲ ವಾರದ ಪಂದ್ಯಗಳಿಗೆ 26 ಆಟಗಾರರು ಗೈರಾಗುವುದು ಖಚಿತ ಎಂದೇ ಹೇಳಬಹುದು.
ಐಪಿಎಲ್ ಸೀಸನ್ 15 (IPL 2022) ರಂಗೇರಲು ಇನ್ನು ವಾರಗಳು ಮಾತ್ರ ಉಳಿದಿವೆ. ಈಗಾಗಲೇ ಎಲ್ಲಾ ತಂಡಗಳು ಅಭ್ಯಾಸವನ್ನು ಆರಂಭಿಸಿದ್ದರೂ, ಕೆಲ ಆಟಗಾರರು ಇನ್ನಷ್ಟೇ ಕ್ಯಾಂಪ್ಗೆ ಸೇರಿಕೊಳ್ಳಬೇಕಿದೆ. ಅದರಲ್ಲೂ ರಾಷ್ಟ್ರೀಯ ತಂಡದಲ್ಲಿರುವ ವಿದೇಶಿ ಆಟಗಾರರು ಇನ್ನಷ್ಟೇ ಆಗಮಿಸಬೇಕಿದೆ. ಆದರೆ ವೆಸ್ಟ್ ಇಂಡೀಸ್, ಇಂಗ್ಲೆಂಡ್, ಆಸ್ಟ್ರೇಲಿಯಾ, ಬಾಂಗ್ಲಾದೇಶ್ ಹಾಗೂ ಸೌತ್ ಆಫ್ರಿಕಾ ತಂಡಗಳ ಆಟಗಾರರು ಐಪಿಎಲ್ ಆರಂಭದ ಮೊದಲ ವಾರದೊಳಗೆ ಆಗಮಿಸುವುದು ಅನುಮಾನ. ಏಕೆಂದರೆ ಈ ಎಲ್ಲಾ ಎಲ್ಲಾ ತಂಡಗಳು ಇದೀಗ ವಿವಿಧ ಸರಣಿ ಆಡುತ್ತಿದ್ದು, ಹೀಗಾಗಿ ಮಾರ್ಚ್ 26 ರ ಬಳಿಕ ಆಗಮಿಸಿದರೂ ಕ್ವಾರಂಟೈನ್ ಮುಗಿಸಿ ತಂಡವನ್ನು ಕೂಡಿಕೊಳ್ಳುವಷ್ಟರಲ್ಲಿ ಮೊದಲ ವಾರದ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.
ವಿಶೇಷ ಎಂದರೆ ಈ 5 ತಂಡಗಳಿಂದ ಐಪಿಎಲ್ನಲ್ಲಿ 26 ಆಟಗಾರರಿದ್ದಾರೆ. ಅಂದರೆ ಐಪಿಎಲ್ ಸೀಸನ್ 15 ಮೊದಲ ವಾರದ ಪಂದ್ಯಗಳಿಗೆ 26 ಆಟಗಾರರು ಗೈರಾಗುವುದು ಖಚಿತ ಎಂದೇ ಹೇಳಬಹುದು. ಏಕೆಂದರೆ ಐಪಿಎಲ್ಗಾಗಿ ಆಗಮಿಸುವ ವಿದೇಶಿ ಆಟಗಾರರಿಗೆ 3 ದಿನಗಳ ಕಡ್ಡಾಯ ಕ್ವಾರಂಟೈನ್ ಇರಲಿದೆ. ಇತ್ತ ವೆಸ್ಟ್ ಇಂಡೀಸ್-ಇಂಗ್ಲೆಂಡ್ ಸರಣಿ ಮುಗಿಯುವುದು ಮಾರ್ಚ್ 28 ಕ್ಕೆ, ಈ ಎರಡು ತಂಡಗಳ ಆಟಗಾರರು ಮಾರ್ಚ್ 29 ಕ್ಕೆ ಆಗಮಿಸಿದರೂ ಏಪ್ರಿಲ್ 2 ಕ್ಕೆ ತಂಡವನ್ನು ಸೇರಿಸಿಕೊಳ್ಳಬಹುದು. ಇನ್ನು ಪಾಕಿಸ್ತಾನ್ ವಿರುದ್ದ ಸರಣಿ ಆಡುತ್ತಿರುವ ಆಸ್ಟ್ರೇಲಿಯಾ ಟೆಸ್ಟ್ ತಂಡದ ಆಟಗಾರರು ಮಾರ್ಚ್ 26 ಕ್ಕೆ ಆಗಮಿಸುವ ಸಾಧ್ಯತೆಯಿದೆ. ಹಾಗೆಯೇ ಟಿ20-ಏಕದಿನ ತಂಡಗಳಲ್ಲಿರುವ ಆಟಗಾರರು ಏಪ್ರಿಲ್ 5 ರ ಬಳಿಕವಷ್ಟೇ ಭಾರತಕ್ಕೆ ಬರಲಿದ್ದಾರೆ.
ಅದೇ ರೀತಿ ಸೌತ್ ಆಫ್ರಿಕಾ-ಬಾಂಗ್ಲಾದೇಶ ನಡುವಣ ಟೆಸ್ಟ್ ಸರಣಿ ಮಾರ್ಚ್ 23 ಕ್ಕೆ ಮುಗಿದರೂ, ಏಕದಿನ ಸರಣಿ ಮುಗಿಯುವುದು ಏಪ್ರಿಲ್ 12 ಕ್ಕೆ. ಹೀಗಾಗಿ ಈ ತಂಡಗಳಲ್ಲಿರುವ ಆಟಗಾರರು ಕೂಡ ಐಪಿಎಲ್ನ ಬಹುತೇಕ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ ಎಂದೇ ಹೇಳಬಹುದು. ಹಾಗಿದ್ರೆ ಯಾವ ತಂಡದ ಆಟಗಾರರು ಐಪಿಎಲ್ನ ಮೊದಲ ವಾರದ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ನೋಡೋಣ…
ಡ್ವೈನ್ ಪ್ರಿಟೋರಿಯಸ್ (CSK) ಪ್ಯಾಟ್ ಕಮ್ಮಿನ್ಸ್ (KKR) ಆರೋನ್ ಫಿಂಚ್ (KKR) ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (RR) ಮಾರ್ಕೊ ಜಾನ್ಸೆನ್ (SRH) ಸೀನ್ ಅಬಾಟ್ (SRH) ಐಡೆನ್ ಮಾರ್ಕ್ರಾಮ್ (SRH) ಡೇವಿಡ್ ವಾರ್ನರ್ (DC) ಮಿಚೆಲ್ ಮಾರ್ಷ್ (DC) ಅನ್ರಿಕ್ ನೋಕಿಯಾ- ಗಾಯ (DC) ಮುಸ್ತಫಿಜುರ್ ರೆಹಮಾನ್ (DC) ಲುಂಗಿ ಎನ್‌ಗಿಡಿ (DC) ಜೇಸನ್ ಬೆಹ್ರೆನ್‌ಡಾರ್ಫ್ (RCB) ಗ್ಲೆನ್ ಮ್ಯಾಕ್ಸ್‌ವೆಲ್ (RCB) ಜೋಶ್ ಹ್ಯಾಜಲ್‌ವುಡ್ (RCB) ಜಾನಿ ಬೈರ್‌ಸ್ಟೋ (PBKS) ಕಗಿಸೊ ರಬಾಡ (PBKS) ನಾಥನ್ ಎಲ್ಲಿಸ್ (PBKS) ಮಾರ್ಕಸ್ ಸ್ಟೊಯಿನಿಸ್ (LSG) ಜೇಸನ್ ಹೋಲ್ಡರ್ (LSG) ಕೈಲ್ ಮೇಯರ್ಸ್ (LSG) ಮಾರ್ಕ್ ವುಡ್- ಗಾಯ (LSG) ಕ್ವಿಂಟನ್ ಡಿ ಕಾಕ್ (LSG) ಡೇವಿಡ್ ಮಿಲ್ಲರ್ (GT) ಅಲ್ಜಾರಿ ಜೋಸೆಫ್ (GT) ಜೋಫ್ರಾ ಆರ್ಚರ್- ಗಾಯ (MI)
ಈ 26 ಆಟಗಾರರಲ್ಲಿ ಅನ್ರಿಕ್ ನೋಕಿಯಾ, ಜೋಫ್ರಾ ಆರ್ಚರ್ ಹಾಗೂ ಮಾರ್ಕ್ ವುಡ್ ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಈ ಮೂವರು ಆಟಗಾರರು ಐಪಿಎಲ್ನ ಮೊದಲಾರ್ಧ ಅಥವಾ ಇಡೀ ಟೂರ್ನಿಯಿಂದ ಹೊರಗುಳಿದರೂ ಅಚ್ಚರಿಪಡಬೇಕಿಲ್ಲ.
ಇದನ್ನೂ ಓದಿ: IPL 2022: ಐಪಿಎಲ್ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್
(IPL 2022: 26 overseas players set to miss first week of IPL 2022)
Published On - 3:29 pm, Mon, 14 March 22