AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: ಅಪ್ಪುಗೆಯ ಅತ್ಯಾದ್ಭುತ ಕ್ಯಾಚ್: ವಿಡಿಯೋ ವೈರಲ್

European Cricket League: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕ್ ಐ ಕೇರ್ ಬಡಲೋನಾ ತಂಡವು 10 ಓವರ್​ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 93 ರನ್ ಗಳಿಸಿತು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಲಯನ್ಸ್ ನಿಕೋಸಿಯಾ ತಂಡವು ಮೊದಲ 3 ಓವರ್‌ಗಳಲ್ಲಿ ಕೇವಲ 18 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತು.

VIDEO: ಅಪ್ಪುಗೆಯ ಅತ್ಯಾದ್ಭುತ ಕ್ಯಾಚ್: ವಿಡಿಯೋ ವೈರಲ್
ಕ್ಯಾಚ್
TV9 Web
| Edited By: |

Updated on:Mar 15, 2022 | 4:39 PM

Share

ಕ್ರಿಕೆಟ್​ನಲ್ಲಿ ಕ್ಯಾಚಸ್ ವಿನ್ ಮ್ಯಾಚಸ್ ಎಂಬ ಮಾತಿದೆ. ಅಂದರೆ ಕ್ಯಾಚ್​ಗಳನ್ನು ಹಿಡಿದ್ರೆ ಮ್ಯಾಚ್ ಗೆಲ್ಲಬಹುದು ಎಂದರ್ಥ. ಈ ಮಾತನ್ನು ನಿಜ ಎಂದು ಸಾಬೀತುಪಡಿಸಿದ ಅನೇಕ ನಿದರ್ಶನಗಳು ಕೂಡ ನಮ್ಮ ಮುಂದೆ ಇದೆ. ಒಂದೇ ಒಂದು ಕ್ಯಾಚ್ ಮೂಲಕ ಇಡೀ ಪಂದ್ಯದ ಚಿತ್ರಣ ಬದಲಾಗಿದೆ. ಈ ಅದ್ಭುತ ಕ್ಯಾಚ್​ನಿಂದ ಪಂದ್ಯದ ಫಲಿತಾಂಶವೇ ಬದಲಾದ ಚರಿತ್ರೆ ಕೂಡ ಇದೆ. ಹಾಗೆಯೇ ಕ್ಯಾಚ್​ಗಳನ್ನು ಕೈಚೆಲ್ಲಿ ಪಂದ್ಯ ಸೋತ ಅನೇಕ ಮ್ಯಾಚ್​ಗಳನ್ನೂ ಕೂಡ ನೀವು ನೋಡಿರಬಹುದು. ಹೀಗಾಗಿ ಕ್ಯಾಚ್ ಮೂಲಕ ಸಿಗುವ ಅವಕಾಶವನ್ನು ಯಾವತ್ತಿಗೂ ಕೈಚೆಲ್ಲಬಾರದು ಎಂಬುದು ಕ್ರಿಕೆಟ್ ಅಂಗಳದ ತಾರ್ಕಿಕ ನಿಯಮ. ಇದನ್ನೂ ಈಗ ಯಾಕೆ ಹೇಳುತ್ತಿದ್ದೇವೆ ಎಂದರೆ ಯುರೋಪಿಯನ್ ಕ್ರಿಕೆಟ್ ಲೀಗ್​ನಲ್ಲಿ ಹಿಡಿದಿರುವ ಅಧ್ಭುತ ಕ್ಯಾಚ್. ಅದು ಕೂಡ ಫೈನಲ್ ಪಂದ್ಯದಲ್ಲಿ.

ಯುರೋಪಿಯನ್ ಟಿ10 ಕ್ರಿಕೆಟ್ ಲೀಗ್​ನ ಫೈನಲ್​ ಪಂದ್ಯದಲ್ಲಿ ಪಂಜಾಬ್ ಲಯನ್ಸ್ ನಿಕೋಸಿಯಾ-ಪಾಕ್ ಐ ಕೇರ್ ಬಡಲೋನಾ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ಪಂಜಾಬ್ ತಂಡದ ಸಿಕಂದರ್ ಅಲಿ ಸುಶೀಲ್ ಕುಮಾರ್ ಬೌಲಿಂಗ್‌ನಲ್ಲಿ ಭರ್ಜರಿ ಹೊಡೆತ ಬಾರಿಸಿದ್ದರು. ಅತ್ತ ಚೆಂಡು ಗಾಳಿಯಲ್ಲಿ ಬೌಂಡರಿಯತ್ತ ಸಾಗುತ್ತಿದ್ದಂತೆ ಇಬ್ಬರು ಫೀಲ್ಡರ್​ಗಳು ಕ್ಯಾಚ್ ಹಿಡಿಯಲು ಓಡಿ ಬಂದರು. ಅಷ್ಟೇ ಅಲ್ಲದೆ ಇಬ್ಬರೂ ಡಿಕ್ಕಿಯಾಗಿ ಅಪ್ಪುಗೆಯೊಂದಿಗೆ ನೆಲಕ್ಕುರುಳಿದರು. ಇತ್ತ ಇಬ್ಬರು ಫೀಲ್ಡರ್​ಗಳು ತಬ್ಬಿಕೊಂಡು ನೆಲಕ್ಕುರುಳಿದ ಪರಿಣಾಮ ಎಲ್ಲರೂ ಕ್ಯಾಚ್ ಡ್ರಾಪ್ ಆಗಿದೆ ಎಂದೇ ಭಾವಿಸಿದ್ದರು. ಆದರೆ ಇದೇ ವೇಳೆ ಒಬ್ಬ ಫೀಲ್ಡರ್ ಕ್ಯಾಚ್​ ಹಿಡಿಯುವಲ್ಲಿ ಯಶಸ್ವಿಯಾಗಿರುವುದನ್ನು ಚೆಂಡನ್ನು ತೋರಿಸುವ ಮೂಲಕ ಸ್ಪಷ್ಟಪಡಿಸಿದರು. ಇದನ್ನು ನೋಡಿದ ಕಮೆಂಟೇಟರ್​ ಕೂಡ ನಿಬ್ಬೆಗಾಗಾಗಿ ಅದ್ಭುತ ಕ್ಯಾಚ್​ ಅನ್ನು ಹಾಡಿಹೊಗಳಿದ್ದಾರೆ. ಇದೀಗ ಈ ಅಪ್ಪುಗೆಯ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕ್ ಐ ಕೇರ್ ಬಡಲೋನಾ ತಂಡವು 10 ಓವರ್​ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 93 ರನ್ ಗಳಿಸಿತು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಲಯನ್ಸ್ ನಿಕೋಸಿಯಾ ತಂಡವು ಮೊದಲ 3 ಓವರ್‌ಗಳಲ್ಲಿ ಕೇವಲ 18 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತು. ಆ ಬಳಿಕ ಪಂದ್ಯಕ್ಕೆ ಅಡಚಣೆ ಉಂಟಾದ ಪರಿಣಾಮ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ ಪಾಕ್ ಐ ಕೇರ್ ಬಡಲೋನಾ ತಂಡ 14 ರನ್​ಗಳಿಂದ ಜಯ ಸಾಧಿಸಿತು.

ಇದನ್ನೂ ಓದಿ: IPL 2022: ಐಪಿಎಲ್​ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್

(VIDEO: What a Catch in European Cricket League, Two player hug each other and take a catch in Cricket)

Published On - 4:39 pm, Tue, 15 March 22

Follow Us
Web contact
Web contact

TV9 Kannada

Read More
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ದೆಹಲಿ: ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ
ದೆಹಲಿ: ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ
ವಾಣಿಜ್ಯ LPG ಸಿಲಿಂಡರ್ ಬೆಲೆ ಏರಿಕೆ: ಹೋಟೆಲ್ ಊಟ-ತಿಂಡಿ ದರ ಹೆಚ್ಚಾಗುತ್ತಾ?
ವಾಣಿಜ್ಯ LPG ಸಿಲಿಂಡರ್ ಬೆಲೆ ಏರಿಕೆ: ಹೋಟೆಲ್ ಊಟ-ತಿಂಡಿ ದರ ಹೆಚ್ಚಾಗುತ್ತಾ?