IPL 2022: ಐಪಿಎಲ್ 2022 ರಲ್ಲಿ ದೊಡ್ಡ ಬದಲಾವಣೆ: ಹೊಸ ನಿಯಮ ಜಾರಿಗೆ ತಂದ ಬಿಸಿಸಿಐ
IPL 2022 New Rule: ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿಯ ಐಪಿಎಲ್ನಲ್ಲಿ ಕೆಲವು ಹೊಸ ನಿಯಮಗಳಲ್ಲಿ ಜಾರಿಗೆ ತರಲಾಗಿದೆ. ಹೌದು, ಐಪಿಎಲ್ 2022 ರ ಹೊಸ ನಿಯಮದ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಾಹಿತಿ ನೀಡಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈಗಾಗಲೇ ಐಪಿಎಲ್ 2022 (IPL 2022) ಫೀವರ್ ಶುರುವಾಗಿದ್ದು ಅಭಿಮಾನಿಗಳಂತು ರೋಚಕ ಕ್ರಿಕೆಟ್ನ ಅನುಭವ ಪಡೆಯಲು ಕಾದುಕುಳಿತಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿ ಸಾಕಷ್ಟು ಭಿನ್ನತೆಯಿಂದ ಕೂಡಿದೆ. ಎರಡು ಹೊಸ ತಂಡಗಳು ಸೇರಿ ಒಟ್ಟು 10 ತಂಡಗಳು ಒಂದು ಟ್ರೋಫಿಗಾಗಿ ಕಾದಾಟ ನಡೆಸಲಿದೆ. ಮಾರ್ಚ್ 26 ರಂದು ಈ ಚುಟುಕು ಸಮಯಕ್ಕೆ ಚಾಲನೆ ಸಿಗಲಿದ್ದು ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ತಂಡ ಸೆಣೆಸಾಟ ನಡೆಸಲಿದೆ. ಒಟ್ಟು 65 ದಿನಗಳ ಕಾಲ ನಡೆಯಲಿರುವ ಈ ಪಂದ್ಯದಲ್ಲಿ 70 ಲೀಗ್ ಪಂದ್ಯಗಳು ಮತ್ತು 4 ಪ್ಲೇಆಫ್ ಪಂದ್ಯ ನಡೆಯಲಿದೆ. ಜೊತೆಗೆ ಈ ಬಾರಿ ಕೆಲವು ಹೊಸ ನಿಯಮಗಳಲ್ಲಿ (IPL 2022 Rule Change) ಜಾರಿಗೆ ತರಲಾಗಿದೆ.
ಹೌದು, ಐಪಿಎಲ್ 2022 ರ ಹೊಸ ನಿಯಮದ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಾಹಿತಿ ನೀಡಿದೆ. ಇದರ ಪ್ರಕಾರ ಈ ಬಾರಿ ಶ್ರೀಮಂತ ಲೀಗ್ನಲ್ಲಿ ಅಂಪೈರ್ ತೀರ್ಪು ಪರಾಮರ್ಶೆ ಪದ್ದತಿ (ಡಿಆರ್ಎಸ್) ರಿವ್ಯೂವ್ಗಳ ಸಂಖ್ಯೆಯನ್ನು ಹೆಚ್ಚಿಗೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.ಕ್ರಿಕ್ಬಜ್ ಮಾಡಿರುವ ವರದಿಯ ಪ್ರಕಾರ, ಬಿಸಿಸಿಐ 15ನೇ ಆವೃತ್ತಿಯಲ್ಲಿ ಪ್ರತಿ ಇನ್ನಿಂಗ್ಸ್ನಲ್ಲಿ ಒಂದರ ಬದಲು ಎರಡು ರಿವ್ಯೂವ್ ತೆಗೆದುಕೊಳ್ಳುವ ಅವಕಾಶವನ್ನು ನೀಡಿದೆ. ಅಂದರೆ ಪ್ರತಿ ಇನ್ನಿಂಗ್ಸ್ನಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ತಂಡಗಳು ಅಂಪೈರ್ ತೀರ್ಪಿನ ವಿರುದ್ಧ ತಲಾ 2 ಬಾರಿ ರಿವ್ಯೂವ್ ತೆಗೆದುಕೊಳ್ಳಬಹುದು.
ಇದರ ಜೊತೆಗೆ ಇತ್ತೀಚೆಗಷ್ಟೆ ಎಂಸಿಸಿ ಜಾರಿಗೆ ತಂದಿರುವ ಬ್ಯಾಟರ್ ಕ್ಯಾಚ್ ನೀಡಿ ಔಟಾದರೂ ಹೊಸ ಬ್ಯಾಟರ್ ಸ್ಟ್ರೈಕ್ನಲ್ಲೇ ಬ್ಯಾಟಿಂಗ್ ಮಾಡಬೇಕು ನಿಯಮವನ್ನು ಐಪಿಎಲ್ನಲ್ಲೂ ಜಾರಿಗೆ ತರಲು ನಿರ್ಧರಿಸಲಾಗಿದೆ. ಈ ನಿಯಮದ ಪ್ರಕಾರ ಕ್ಯಾಚ್ ವೇಳೆ ನಾನ್ ಸ್ಟ್ರೈಕ್ನಲ್ಲಿ ಬ್ಯಾಟರ್ ಕ್ರೀಸ್ ಕ್ರಾಸ್ ಮಾಡಿದ್ದರೂ ಸಹಾ ಹೊಸದಾಗಿ ಬರುವ ಬ್ಯಾಟರ್ ಸ್ಟ್ರೈಕ್ ತೆಗೆದುಕೊಳ್ಳಬೇಕಾಗಿರುತ್ತದೆ. ಈ ನಿಯಮ ಈ ಬಾರಿಯ ಐಪಿಎಲ್ನಲ್ಲಿ ಇರಲಿದೆ.
ಅಂತೆಯೆ ಐಪಿಎಲ್ 2022 ರಲ್ಲಿ ಮತ್ತೊಂದು ನಿಯಮವು ತುಂಬಾ ವಿಶೇಷವಾಗಿರಲಿದೆ. ಈ ಬಾರಿ ಪ್ಲೇ ಆಫ್ ಅಥವಾ ಫೈನಲ್ ಪಂದ್ಯದಲ್ಲಿ ಟೈ ಆದ ನಂತರ ಸೂಪರ್ ಓವರ್ ಅಥವಾ ಇನ್ನೊಂದು ಸೂಪರ್ ಓವರ್ ಮೂಲಕ ಯಾವುದೇ ನಿರ್ಧಾರವಾಗದಿದ್ದರೆ ಲೀಗ್ ಹಂತದ ಪ್ರದರ್ಶನದ ಮೇಲೆ ಫಲಿತಾಂಶ ಹೊರಬೀಳಲಿದೆ. ಅಂದರೆ ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆಯುವ ತಂಡವನ್ನು ವಿಜೇತ ಎಂದು ಪರಿಗಣಿಸಲಾಗುತ್ತದೆ. ಪ್ಲೇಆಫ್‌ನಲ್ಲಿ ಅರ್ಹತೆ ಪಡೆಯುವುದರೊಂದಿಗೆ ಗುಂಪು ಹಂತದಲ್ಲಿ ಅಂಕಗಳನ್ನು ಅಗ್ರಸ್ಥಾನಕ್ಕೇರಿಸುವುದು ಈಗ ಎಲ್ಲಾ ತಂಡಗಳಿಗೆ ಸವಾಲಾಗಿದೆ. ಆದರೆ, ಈ ನಿಯಮ ಇನ್ನೂ ಅಂತಿಮವಾಗಿಲ್ಲ.
ಇನ್ನು ಕೋವಿಡ್ 19 ಭೀತಿ ಇರುವುದರಿಂದ ಯಾವುದೇ ತಂಡದಲ್ಲಿ ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಕಂಡು ಬಂದು ಮೈದಾನಕ್ಕಿಳಿಯಲು 12 ಸದಸ್ಯರ ತಂಡ(ಸಬ್ಸ್ಟಿಟ್ಯೂಟ್ ಸೇರಿ) ಸಿದ್ಧರಿಲ್ಲದಿದ್ದರೆ ಆ ದಿನದ ಪಂದ್ಯವನ್ನು ಮುಂದೂಡಿ ಬೇರೆ ದಿನ ಆಡಿಸುವ ಅವಕಾಶವನ್ನು ನೀಡಲಾಗಿದೆ. ಮರುವೇಳಾಪಟ್ಟಿಯ ಕೆಲಸವನ್ನು ಐಪಿಎಲ್ ಟೆಕ್ನಿಕಲ್ ಸಮಿತಿ ನಿರ್ಧರಿಸಲಿದೆ ಎಂದು ವರದಿಯಾಗಿದೆ.
ಒಟ್ಟಾರೆ ಈ ಬಾರಿಯ ಐಪಿಎಲ್ ಟೂರ್ನಿ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ಬಿಸಿಸಿಐ ಕೂಡ ಇದರ ಬಗ್ಗೆ ಸಾಕಷ್ಟು ಗಮನ ಹರಿಸಿ ಮಹತ್ವದ ತೀರ್ಮಾನ ಕೈಗೊಳ್ಳುತ್ತಿದೆ. ಈ ಬಾರಿ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿರುವ ಡುಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಅಭಿಯಾನವನ್ನು ಮಾರ್ಚ್ 27 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಆಡುವ ಮೂಲಕ ಶುರು ಮಾಡಲಿದೆ.
Rohit Sharma: ದ್ವಿತೀಯ ಟೆಸ್ಟ್ ಮುಗಿದ ಬಳಿಕ ರೋಹಿತ್ ಶರ್ಮಾ ಏನು ಹೇಳಿದರು ಗೊತ್ತೇ?: ಇಲ್ಲಿದೆ ನೋಡಿ
R Ashwin: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ 100 ವಿಕೆಟ್: ಆರ್. ಅಶ್ವಿನ್ ನೂತನ ದಾಖಲೆ