90 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಪ್ರದಾನ ಮಾಡಿದ ರಾಜ್ಯಪಾಲ ಥಾವರ್​​ಚಂದ್ ಗೆಹ್ಲೋಟ್

| Updated By: Rakesh Nayak Manchi

Updated on: Dec 11, 2022 | 12:00 PM

2020 ಮತ್ತು 2021ನೇ ಸಾಲಿನ ರಾಷ್ಟ್ರಪತಿ ಪದಕಗಳನ್ನು ಒಟ್ಟು 90 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ಪ್ರದಾನ ಮಾಡಲಾಯಿತು.

90 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಪ್ರದಾನ ಮಾಡಿದ ರಾಜ್ಯಪಾಲ ಥಾವರ್​​ಚಂದ್ ಗೆಹ್ಲೋಟ್
ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
Image Credit source: ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಒಟ್ಟು 90 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ 2020 ಮತ್ತು 2021ನೇ ಸಾಲಿನ ರಾಷ್ಟ್ರಪತಿ ಪದಕ (President medal 2020-21)ಗಳನ್ನು ರಾಜ್ಯಪಾಲ ಥಾವರ್ ​​ಚಂದ್ ಗೆಹ್ಲೋಟ್ (Thawar Chand Gehlot) ಅವರು ಪ್ರದಾನ ಮಾಡಿದರು. ಬೆಂಗಳೂರಿನಲ್ಲಿರುವ ರಾಜಭವನದ ಗಾಜಿನಮನೆಯಲ್ಲಿ ನಡೆದ ಸಮಾರಂಭ ಸಭೆಯಲ್ಲಿ ರಾಷ್ಟ್ರಪತಿ ಪದಕ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಗೃಹಸಚಿವ ಆರಗ ಜ್ಞಾನೇಂದ್ರ (Araga Jnanendra), ಡಿಜಿ-ಐಜಿಪಿ ಪ್ರವೀಣ್ ಸೂದ್, ಗೃಹ ಇಲಾಖೆ ಎಸಿಎಸ್​ ರಜನೀಶ್​ ಗೋಯಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 2020ನೇ ಸಾಲಿನ ಗಣರಾಜೋತ್ಸವ ಮತ್ತು ಸ್ವಾತಂತ್ರ್ಯ ದಿನದಂದು ಘೋಷಣೆಯಾದ ಪದಕ ಮತ್ತು 2021ನೇ ಸಾಲಿನಲ್ಲಿ ಗಣರಾಜ್ಯೋತ್ಸವ ಹಾಗೂ ಕೇಂದ್ರ ಗೃಹ ಇಲಾಖೆ ಘೋಷಣೆ ಮಾಡಿದ ಪದಕ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನಾನು ಹೆಮ್ಮೆಯಿಂದ ಹೇಳುತ್ತೇನೆ ಕರ್ನಾಟಕ ಪೊಲೀಸ್ ದೇಶದ ನಂಬರ್ 1 ಪೊಲೀಸ್ ಇಲಾಖೆ. ನೀವು ಎಲ್ಲರೂ ಈ ಪದಕಕ್ಕೆ ಅರ್ಹರಿದ್ದೀರಿ. ಇಲಾಖೆ ಇನ್ನೂ ಹೆಚ್ಚಿನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಅದಕ್ಕೆ ಬೇಕಿರುವ ಎಲ್ಲಾ ನೆರವನ್ನು ರಾಜ್ಯ ಸರ್ಕಾರ ನೀಡಲಿದೆ. ಸೈಬರ್ ಕ್ರೈಂ ಎದುರಿಸಲು ಇನ್ನೂ ಹೆಚ್ಚಿನ ತಂತ್ರಜ್ಞಾನ ಅಗತ್ಯವಿದೆ. ಎಲ್ಲ ಪೊಲೀಸರಿಗೂ ತಂತ್ರಜ್ಞಾನದ ತರಬೇತಿ ನೀಡಬೇಕು. ರಾಜ್ಯದಲ್ಲಿ ಫೋರೆನ್ಸಿಕ್ ಲ್ಯಾಬ್​ಗ​​ಳನ್ನು ಹೆಚ್ಚಿಸಬೇಕು. 1 ವಲಯಕ್ಕೆ 2 ವಿಧಿವಿಜ್ಞಾನ ಪ್ರಯೋಗಾಲಯ ತೆರೆಯಬೇಕು. ಆಗ ಮಾತ್ರ ಅಪರಾಧಗಳನ್ನು ತಡೆಯಲು ಸಾಧ್ಯ. ಇದನ್ನು ಗಂಭೀರವಾಗಿ ಪರಿಗಣಿಸಿ ಫೋರೆನ್ಸಿಕ್ ಲ್ಯಾಬ್ ತೆರೆಯಲು ಸಿದ್ಧತೆ ಮಾಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪೊಲೀಸ್ ನೇಮಕಾತಿಯಲ್ಲಿನ ಅಪರಾಧ ತಡೆಯಲು ಇನ್ನಷ್ಟು ಕ್ರಮ

ಪೊಲೀಸ್ ನೇಮಕಾತಿಯಲ್ಲಿ ಏನು ಅಪರಾಧವಾಗುತ್ತಿದೆಯೋ ಅದನ್ನು ನಿಯಂತ್ರಣ ಮಾಡಲು ಇನ್ನಷ್ಟು ಕಠಿಣ ಕ್ರಮವಾಗಬೇಕು. ಅದಕ್ಕೆ ಕಾನೂನು ಬದಲಾವಣೆ ಬೇಕಾದರೂ ಮಾಡಿಕೊಳ್ಳಿ, ತಂತ್ರಜ್ಞಾನವನ್ನಾದರೂ ಬದಲಾವಣೆ ಮಾಡಿಕೊಳ್ಳಿ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಪೊಲೀಸ್ ನೇಮಕಾತಿಯಲ್ಲಿ ಅನ್ಯಾಯವಾದರೆ ಒಳ್ಳೆಯ ಪಡೆ ಹೇಗೆ ನಿರ್ಮಾಣ ಸಾಧ್ಯ ಎಂದು ಪ್ರಶ್ನಿಸಿದರು.

ನಮ್ಮ ಇಲಾಖೆಯಲ್ಲೇ ನೇಮಕಾತಿ ಸೆಲ್ ಇಟ್ಟುಕೊಂಡು ನಮ್ಮ ಇಲಾಖೆಯಲ್ಲೇ ಅಪರಾಧ ನಡೆದರೆ ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದು ಆಗದಂತೆ ನೋಡಿಕೊಳ್ಳುವುದು ಹಿರಿಯ ಪೊಲೀಸ್ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಇದಕ್ಕೆ ಬೇಕಾದ ಹೊಸ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಿ, ಕೆಳಹಂತದಲ್ಲಿ ಚೆನ್ನಾಗಿ ತರಬೇತಿ ನಡೆಯುತ್ತಿದೆ. ಐಪಿಎಸ್ ಹಂತದಲ್ಲೂ ಚೆನ್ನಾಗಿ ಟ್ರೈನಿಂಗ್ ನಡೆಯುತ್ತಿದೆ. ಆದರೆ ಮಧ್ಯ ಹಂತದಲ್ಲಿ ತರಬೇತಿ ಇನ್ನಷ್ಟು ಶಿಸ್ತಿನಿಂದ ಗಟ್ಟಿಯಾಗಬೇಕು ಎಂದರು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:51 am, Sun, 11 December 22