ಬೆಂಗಳೂರಿನಲ್ಲಿವೆ ಯಮರೂಪಿ ಅಂಡರ್ ಪಾಸ್​ಗಳು; ಮಳೆ ಬಂದಾಗ ವಾಹನ ಸವಾರರೆ ಜಾಗ್ರತೆ

|

Updated on: May 22, 2023 | 10:28 AM

ಮಳೆ ಬಂತು ಎಂದು ಅಂಡರ್ ಪಾಸ್​ಗಳಲ್ಲಿ ನಿಲ್ಲೋದು. ಬೇಗ ಮನೆ ಸೇರಬೇಕು ಎಂಬ ಒಂದೇ ಒಂದು ಉದ್ದೇಶದಿಂದ ನೀರಿದ್ದರೂ ಅಂಡರ್ ಪಾಸ್​ನಲ್ಲಿ ಸಂಚಾರ ಮಾಡೋದು ಸಹಜ. ಆದ್ರೆ ಹೀಗೆ ಮಾಡುವುದರಿಂದ ಸಮಸ್ಯೆ ಕಟ್ಟಿಟ್ಟಬುತ್ತಿ.

ಬೆಂಗಳೂರಿನಲ್ಲಿವೆ ಯಮರೂಪಿ ಅಂಡರ್ ಪಾಸ್​ಗಳು; ಮಳೆ ಬಂದಾಗ ವಾಹನ ಸವಾರರೆ ಜಾಗ್ರತೆ
ಅಂಡರ್ ಪಾಸ್
Follow us on

ಬೆಂಗಳೂರು: ಐಟಿ ಬಿಟಿ, ಸಿಲಿಕಾನ್ ಸಿಟಿ ಹೀಗೆ ನಾನಾ ಹೆಸರುಗಳಿಂದ ಲಕ್ಷಾಂತರ ಜನರ ಜೀವನಕ್ಕೆ ಆಧಾರ ಆಗಿರುವ ಬೆಂಗಳೂರು ಸಮಸ್ಯೆಗಳ ಆಗರ(Bengaluru). ಇಲ್ಲಿ ದಿನದ ಆರಂಭದಿಂದಲೂ ದಿನದ ಅಂತ್ಯದ ವರೆಗೂ ಪ್ರತಿಯೊಬ್ಬರೂ ಒಂದಲ್ಲಾ ಒಂದು ಸಮಸ್ಯೆಯನ್ನು ಎದುರಿಸಿ ಸರ್ಕಾರಕ್ಕೆ ಛೀಮಾರಿ ಹಾಕದೇ ಇರರು. ಮೇ 21ರ ಸಂಜೆ ಸುರಿದ ಮಳೆಯಿಂದಾಗಿ ಅಮಾಯಕ ಜೀವ ಬಲಿಯಾಗಿದೆ(Bengaluru Rain). ಇದು ಸಿಲಿಕಾನ್ ಸಿಟಿ ಮಂದಿಗೆ ಪಾಠ. ಬೆಂಗಳೂರಿನ ಜನರೇ ಈಗಲಾದರೂ ಎಚ್ಚರದಿಂದಿರಿ. ಟ್ರಾಫಿಕ್ ತಪ್ಪಿಸ ಬೇಕು, ಬೇಗ ಮನೆಗೆ ಸೇರ ಬೇಕು ಅನ್ನೋರು ತಪ್ಪದೇ ಈ ಸುದ್ದಿ ಓದಿ.

ಮಳೆ ಬಂತು ಎಂದು ಅಂಡರ್ ಪಾಸ್​ಗಳಲ್ಲಿ ನಿಲ್ಲೋದು. ಬೇಗ ಮನೆ ಸೇರಬೇಕು ಎಂಬ ಒಂದೇ ಒಂದು ಉದ್ದೇಶದಿಂದ ನೀರಿದ್ದರೂ ಅಂಡರ್ ಪಾಸ್​ನಲ್ಲಿ ಸಂಚಾರ ಮಾಡೋದು ಸಹಜ. ಆದ್ರೆ ಹೀಗೆ ಮಾಡುವುದರಿಂದ ಸಮಸ್ಯೆ ಕಟ್ಟಿಟ್ಟಬುತ್ತಿ. ಯಾಕಂದ್ರೆ ಅಂಡರ್ ಪಾಸ್ ಸೇಫ್ ಇದೆ ಎಂದು ಹೋದ್ರೆ, ಹರಿಶ್ಚಂದ್ರ ಘಾಟ್ ಸೇರೋದು ಗ್ಯಾರಂಟಿ. ಆದ್ರೆ ನೀವು ಸಂಚಾರ ಮಾಡೋ ಅಂಡರ್ ಪಾಸ್​ಗಳು ಸೇಫ್ ಇದಿಯಾ ಅಂತ ಒಮ್ಮೆ ಯೋಚಿಸಿ.

ಇದನ್ನೂ ಓದಿ:  ಮಳೆಯಿಂದ KR ಸರ್ಕಲ್ ಅಂಡರ್‌ಪಾಸ್‌ನಲ್ಲಿ ಕಾರು ಸಿಲುಕಿ ಟೆಕ್ಕಿ ಸಾವು: ದುರಂತದ ಬಗ್ಗೆ ಬಾಯ್ಬಿಟ್ಟ ಕಾರು ಡ್ರೈವರ್

ಬೆಂಗಳೂರಿನಲ್ಲಿವೆ ಯಮರೂಪಿ ಅಂಡರ್ ಪಾಸ್​ಗಳು

ಶಿವಾನಂದ ರೈಲ್ವೆ ಅಂಡರ್ ಪಾಸ್ ಅತ್ಯಂತ ಡೇಂಜರೆಸ್. ಕೆ‌.ಆರ್. ಸರ್ಕಲ್ ಅಂಡರ್ ಪಾಸ್, ಪ್ಯಾಲೇಸ್ ರೋಡ್ ಗಾಲ್ಫ್ ಅಂಡರ್ ಪಾಸ್, ಮಾಗಡಿ ರೋಡ್ ನ ಹೌಸಿಂಗ್ ಬೋಡ್೯ ಅಂಡರ್ ಪಾಸ್, ಟೋಲ್ ಗೇಟ್ ಅಂಡರ್ ಪಾಸ್, ನಾಯಂಡಹಳ್ಳಿ, ಅಂಡರ್ ಪಾಸ್​ಗಳು ತುಂಬಾ ಡೇಂಜರ್. ಮಳೆ ಬಂದ 10 ನಿಮಿಷಕ್ಕೆ ಈ ಅಂಡರ್ ಪಾಸ್​ಗಳು ಕೆರೆಯಂತಾಗುತ್ತವೆ. ಮಳೆ ನೀರು ಹರಿದು ಹೋಗುವ ವ್ಯವಸ್ಥೆ ಇಲ್ಲದೆ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಿರುವುದೇ ಇದಕ್ಕೆ ಮುಖ್ಯ ಕಾರಣ. ಹೀಗಾಗಿ ಅಂಡರ್ ಪಾಸ್​ಗಳನ್ನು ದಾಟಿ ಮನೆಗೆ ಹೋಗುವಾಗ ಎಚ್ಚರ ವಹಿಸಿ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ