ಬೆಂಗಳೂರಲ್ಲಿ ಆರ್​​ಎಂಯು ಸ್ಫೋಟದ ರೂವಾರಿ ಇಲಿ: ಬ್ಲಾಸ್ಟ್​ ಅಸಲಿಯತ್ತು ಬಯಲು

ಬೆಂಗಳೂರಿನ ಯಲಹಂಕದ ಬಾಗಲೂರು ಕ್ರಾಸ್ ಬಳಿಯ ಅಮೇಜಾನ್ ಕಚೇರಿ ಸಮೀಪ ರಿಮೋಟ್ ಮಾನಿಟರಿಂಗ್ ಯೂನಿಟ್ ಬಾಕ್ಸ್​ ಸ್ಫೋಟಗೊಂಡು ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ. ಗಾಯಗಳು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಲಹಂಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇನ್ನು ಸ್ಫೋಟಕ್ಕೆ ಕಾರಣವೇನು ಎನ್ನುವುದು ಇದೀಗ ಬಯಲಾಗಿದೆ.

ಬೆಂಗಳೂರಲ್ಲಿ ಆರ್​​ಎಂಯು ಸ್ಫೋಟದ ರೂವಾರಿ ಇಲಿ: ಬ್ಲಾಸ್ಟ್​ ಅಸಲಿಯತ್ತು ಬಯಲು
ಆರ್​​ಎಂಯು ಸ್ಫೋಟ
Image Credit source: tv9 kannada
Edited By:

Updated on: Oct 07, 2026 | 5:38 PM

ಮುಖ್ಯಾಂಶಗಳು

  • ಬಾಗಲೂರು ಮುಖ್ಯರಸ್ತೆಯಲ್ಲಿ RMU ಸ್ಫೋಟ
  • ಘಟನೆಯಲ್ಲಿ ಇಬ್ಬರಿಗೆ ಗಾಯ, ಮುಂದುವರಿದ ಚಿಕಿತ್ಸೆ
  • ಸ್ಫೋಟಕಕ್ಕೆ ಕಾರಣವಾಗಿದ್ದು ಒಂದು ಇಲಿ

ಬೆಂಗಳೂರು, ಅಕ್ಟೋಬರ್​​ 07: ರಿಮೋಟ್ ಮಾನಿಟರಿಂಗ್ ಯೂನಿಟ್ ಬಾಕ್ಸ್ ಸ್ಫೋಟಗೊಂಡು ಇಬ್ಬರು ಗಾಯಗೊಂಡಿರುವ ಘಟನೆ ನಗರದ ಬಾಗಲೂರು ಕ್ರಾಸ್ ಬಳಿಯ ಅಮೆಜಾನ್ ಕಚೇರಿ ಗೇಟ್ ನಂಬರ್ 3ರ ಬಳಿ ನಡೆದಿದೆ. ಸ್ಫೋಟದ ರಭಸಕ್ಕೆ ಬೆಂಕಿ ತಗುಲಿ ಓರ್ವ ವ್ಯಕ್ತಿಗೆ ಗಂಭೀರ ಗಾಯವಾಗಿದೆ. ಮತ್ತೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ರಿಮೋಟ್ ಮಾನಿಟರಿಂಗ್ ಯೂನಿಟ್ ಬಾಕ್ಸ್ ಬ್ಲಾಸ್ಟ್​ಗೆ ಇಲಿ ಕಾರಣ ಎನ್ನಲಾಗುತ್ತಿದೆ.

ನಡೆದಿದ್ದೇನು?

ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಗಲೂರು ಕ್ರಾಸ್ ಬಳಿಯ ಅಮೆಜಾನ್​ ಕಚೇರಿ ಗೇಟ್ ನಂಬರ್ 3 ಬಳಿ ಫುಟ್​ಪಾತ್​ ಮೇಲೆ ಇಬ್ಬರು ಯುವಕರು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ರಿಮೋಟ್ ಮಾನಿಟರಿಂಗ್ ಯೂನಿಟ್ ಬಾಕ್ಸ್ ಏಕಾಏಕಿ ಸ್ಫೋಟಗೊಂಡಿದೆ.

ಇದನ್ನೂ ಓದಿ: ಮಂಗಳೂರಿನ MRPLನಲ್ಲಿ ಸ್ಫೋಟ: ಓರ್ವ ಸಾವು, 9 ಕಾರ್ಮಿಕರಿಗೆ ಗಾಯ; ಸ್ಫೋಟದ ಶಬ್ಧಕ್ಕೆ ಬೆಚ್ಚಿಬಿದ್ದ ಜನ

ಇಬ್ಬರು ಯುವಕರು ಗಾಯಗೊಂಡಿದ್ದಾರೆ. ಕೂದಳೆಲೆ ಅಂತರದಲ್ಲಿ ಇನ್ನೂ ಕೆಲವರು ಪ್ರಾಣಾಪಾದಿಂದ ಪಾರಾಗಿದ್ದಾರೆ. ಘಟನೆಯಿಂದಾಗಿ ವಾಹನ ಸವಾರರು ಸೇರಿದಂತೆ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಯಲಹಂಕ ಉಪನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಸ್ಫೋಟಕ್ಕೆ ಕಾರಣವಾಯಿತು ಇಲಿ

ಇನ್ನು ರಿಮೋಟ್ ಮಾನಿಟರಿಂಗ್ ಯೂನಿಟ್ ಬಾಕ್ಸ್​​ ಸ್ಫೋಟಕ್ಕೆ ಕಾರಣವಾಗಿದ್ದು ಒಂದು ಇಲಿ. ಆರ್​ಎಂಯು ಪೆಟ್ಟಿಗೆ ಒಳಗೆ ಇಲಿ ಸೇರಿಕೊಂಡಿದ್ದು, ಅದರಿಂದಾಗಿ ಶಾರ್ಟ್ ಸರ್ಕ್ಯೂಟ್ ಆಗಿ ಬ್ಲಾಸ್ಟ್ ಆಗಿದೆ ಎನ್ನಲಾಗುತ್ತಿದೆ. ಏಕೆಂದರೆ ಇಲಿ ಕೂಡ ಸುಟ್ಟು ಕರಕಲಾಗಿದೆ.

ರಿಮೋಟ್ ಮಾನಿಟರಿಂಗ್ ಯೂನಿಟ್ ಹೇಗೆ ಕೆಲಸ ಮಾಡುತ್ತೆ?

ಇನ್ನು ಸ್ಫೋಟಗೊಂಡಿರುವ ರಿಮೋಟ್ ಮಾನಿಟರಿಂಗ್ ಯೂನಿಟ್ ಬಾಕ್ಸ್​ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ನೋಡುವುದಾದರೆ, ಮೇನ್ ಕೇಬಲ್​​ನಿಂದ ಪವರ್​​ ರಿಮೋಟ್ ಮಾನಿಟರಿಂಗ್ ಯೂನಿಟ್​​ಗೆ ಬರುತ್ತದೆ. ಚಿಕ್ಕ ಚಿಕ್ಕ ಕೇಬಲ್​ಗಳ ಮೂಲಕ ಬೇರೆ ಬೇರೆ ನಗರಗಳಿಗೆ ಇದೇ ರಿಮೋಟ್ ಮಾನಿಟರಿಂಗ್ ಯೂನಿಟ್​ನಿಂದ ವಿದ್ಯುತ್​ ಸರಬರಾಜು ಮಾಡಲಾಗುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More
Loading...
Unable to load recommendations.
Follow Us