
ಬೆಂಗಳೂರು, ಮೇ 11: ಬೆಂಗಳೂರಿನ (Bangaluru) ಮಹತ್ವಾಕಾಂಕ್ಷಿ ಉಪನಗರ ರೈಲು ಯೋಜನೆಗೆ (Suburban Rail Project) ಮಹತ್ವದ ವೇಗ ದೊರೆತಿದ್ದು, 153 ಹವಾನಿಯಂತ್ರಿತ ಮೆಟ್ರೋ ಮಾದರಿಯ ಬೋಗಿಗಳನ್ನು ಪೂರೈಸಲು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಜೊತೆ ಕರ್ನಾಟಕ ರೈಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಎಂಟರ್‌ಪ್ರೈಸ್ (ಕೆ-ರೈಡ್) 1,513.75 ಕೋಟಿ ರೂ ವೆಚ್ಚದ ಒಪ್ಪಂದ ಮಾಡಿಕೊಂಡಿದೆ.
ಇದನ್ನೂ ಓದಿ: ಮಲ್ಟಿ ಟ್ರ್ಯಾಕಿಂಗ್ ರೈಲ್ವೆ ಯೋಜನೆಗೆ ಕೇಂದ್ರ ಒಪ್ಪಿಗೆ: ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ ಬಂಪರ್ ಕೊಡುಗೆ
ಒಟ್ಟು 1,513.75 ಕೋಟಿ ರೂ ಮೊತ್ತದ ಕಾರ್ಯಾದೇಶವನ್ನು ಮೇ 6ರಂದು ಐಸಿಎಫ್‌ಗೆ ನೀಡಲಾಗಿದೆ. ಯೋಜನೆಯ ಕಾರಿಡಾರ್-2 ಮತ್ತು ಕಾರಿಡಾರ್-4ಕ್ಕೆ ಬ್ರಾಡ್-ಗೇಜ್ ಮೆಟ್ರೋ ಮಾದರಿಯ 153 ಬೋಗಿಗಳನ್ನು ಪೂರೈಸಲು ಈ ಒಪ್ಪಂದ ಮಾಡಿಕೊಳ್ಳಲಾಗಿದೆ.
ಒಪ್ಪಂದದ ಪ್ರಕಾರ ಮುಂದಿನ 18 ತಿಂಗಳೊಳಗೆ ಐಸಿಎಫ್ ಸಂಸ್ಥೆ ಕಡ್ಡಾಯವಾಗಿ ಬೋಗಿಗಳ ಪೂರೈಕೆ ಆರಂಭಿಸಬೇಕಿದೆ. ಏಕೆಂದರೆ ಕಾರಿಡಾರ್-2 ವ್ಯಾಪ್ತಿಯ ಚಿಕ್ಕಬಾಣಾವರ ಟು ಯಶವಂತಪುರ ಮಾರ್ಗವನ್ನು ನಿಗದಿತ ಸಮಯದಲ್ಲಿಯೇ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ. ಶೀಘ್ರದಲ್ಲೇ ಉಭಯ ಸಂಸ್ಥೆಗಳ ನಡುವೆ ಅಧಿಕೃತ ಒಡಂಬಡಿಕೆಗೆ (ಎಂಒಯು) ಸಹಿ ಬೀಳಲಿದೆ.
ಚೆನ್ನೈನ ಐಸಿಎಫ್‌ಗೆ ನೀಡಲಾದ ಈ ಸಮಗ್ರ ಗುತ್ತಿಗೆಯು ಕೇವಲ ಬೋಗಿಗಳ ನಿರ್ಮಾಣವನ್ನಷ್ಟೇ ಅಲ್ಲದೆ, ಈ ಕೆಳಗಿನ ಜವಾಬ್ದಾರಿಗಳನ್ನು ಒಳಗೊಂಡಿದೆ.
ಇದನ್ನೂ ಓದಿ: ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡ ಕಡೆಗಣನೆ: ರಾಜ್ಯಾದ್ಯಂತ ರೈಲು ಸಂಚಾರ ಬಂದ್ ಮಾಡುವ ಎಚ್ಚರಿಕೆ ನೀಡಿದ ಕರವೇ
ಈ ಬೃಹತ್ ಕಾರ್ಯಾದೇಶದಿಂದ ಬೆಂಗಳೂರು ಉಪನಗರ ರೈಲು ಯೋಜನೆ ಕಾಮಗಾರಿಗೆ ಮತ್ತಷ್ಟು ವೇಗ ದೊರೆಯುವ ನಿರೀಕ್ಷೆಯಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:50 pm, Mon, 11 May 26