ಬೆಂಗಳೂರು: ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ITMS) ಅನ್ನು ಪ್ರಾರಂಭಿಸಲು ಮುಂದಾಗಿದ್ದು, ಪ್ರಮುಖ 50 ಜಂಕ್ಷನ್‌ಗಳಲ್ಲಿ ಅತ್ಯಾಧುನಿಕ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಬೆಂಗಳೂರು ಪೊಲೀಸರ (Bengaluru Police) ಪ್ರಕಾರ, ಪೊಲೀಸರ ಸಹಾಯವಿಲ್ಲದೆ ಸಂಚಾರ ಉಲ್ಲಂಘನೆಯನ್ನು ಐಟಿಎಂಎಸ್ ಪತ್ತೆಹಚ್ಚುತ್ತದೆ. 50 ಪ್ರಮುಖ ಜಂಕ್ಷನ್‌ಗಳಲ್ಲಿ ಅಳವಡಿಸಲಾಗಿರುವ 250 ಎಎನ್‌ಪಿಆರ್ ಕ್ಯಾಮೆರಾಗಳ (ANPR Camera) ಮೂಲಕ ಸಂಚಾರ ನಿಯಮ ಉಲ್ಲಂಘನೆ (Traffic rule violations)ಯನ್ನು ಸೆರೆಹಿಡಿಯಲಾಗುತ್ತದೆ. ಸ್ವಯಂಚಾಲಿತ ವ್ಯವಸ್ಥೆಯು ನೋಟಿಸ್ ರಚಿಸುತ್ತದೆ. ಮಾತ್ರವಲ್ಲದೆ ಚಲನ್ ಅನ್ನು ಉಲ್ಲಂಘಿಸುವವರಿಗೆ SMS ಕೂಡ ಕಳುಹಿಸುವ ಕೆಲಸ ಮಾಡುತ್ತದೆ.
ಅತಿವೇಗ, ಕೆಂಪು ದೀಪ ಉಲ್ಲಂಘನೆ, ಸ್ಟಾಪ್ ಲೇನ್ ಉಲ್ಲಂಘನೆ, ಹೆಲ್ಮೆಟ್ ಉಲ್ಲಂಘನೆ, ತ್ರಿಬಲ್ ರೈಡಿಂಗ್, ಚಾಲನೆ ವೇಳೆ ಮೊಬೈಲ್ ಬಳಕೆ ಮತ್ತು ಸೀಟ್ ಬೆಲ್ಟ್ ಇಲ್ಲದೆ ವಾಹನ ಚಲಾಯಿಸುವುದು ಮುಂತಾದ ಅನೇಕ ಸಂಚಾರ ಉಲ್ಲಂಘನೆಗಳನ್ನು ಐಟಿಎಂಎಸ್ ಪತ್ತೆ ಮಾಡಲಿದೆ. ಆದರೆ ಈ ಕ್ರಮವನ್ನು ವಾಹನ ಸವಾರರಿಂದ ದಂಡ ವಸೂಲಿ ಮಾಡಲು ಅಳವಡಿಸಲಾಗುತ್ತಿಲ್ಲ. ನಗರದಲ್ಲಿ ಸಂಚಾರ ಶಿಸ್ತು ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಅಳವಡಿಸಲಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: Karnataka Weather: ಬೆಂಗಳೂರು ಸೇರಿ ಕರ್ನಾಟಕದಾದ್ಯಂತ ಭಾರಿ ಮಳೆ ಮುನ್ಸೂಚನೆ, 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ
ಐಟಿಎಂಎಸ್ ವ್ಯವಸ್ಥೆಯನ್ನು 50 ಜಂಕ್ಷನ್‌ಗಳಲ್ಲಿ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. ಯಾವುದೇ ಸಂಚಾರ ನಿಯಮಗಳನ್ನು ಉಲ್ಲಂಘಿಸಬೇಡಿ. ಉದ್ದೇಶವು ದಂಡವನ್ನು ಸಂಗ್ರಹಿಸುವುದು ಅಲ್ಲ. ಇದು ಸಂಪರ್ಕರಹಿತವಾಗಿದೆ, ವಾರದ 7 ದಿನವೂ ಈ ವ್ಯವಸ್ಥೆ ಸಕ್ರಿಯವಾಗಿರಲಿದೆ. ಉತ್ತಮ ರಸ್ತೆ ನಡವಳಿಕೆ ಮತ್ತು ಅನುಸರಣೆಯನ್ನು ಹೆಚ್ಚಿಸುವುದು ಗುರಿಯಾಗಿದೆ ಎಂದು ಪೊಲೀಸ್ ಆಯುಕ್ತರು ಟ್ವೀಟ್ ಮಾಡಿದ್ದಾರೆ.
Launching Soon, the ITMS of @BlrCityPolice @blrcitytraffic at 50 junctions.
Make no mistake, the Objective is NOT to collect fines.
It is contactless, AI enabled & 24×7
Aim is to enhance better road behaviour & compliance. @CMofKarnataka @JnanendraAraga @DgpKarnataka pic.twitter.com/SNmXmLZ5bv— Pratap Reddy, IPS ಪೊಲೀಸ್ ಆಯುಕ್ತರು, ಬೆಂಗಳೂರು ನಗರ (@CPBlr) December 7, 2022
ಸಂಚಾರ ಉಲ್ಲಂಘನೆಯನ್ನು ಗುರುತಿಸದ ಹೊರತು ನಿಯಮಿತ ತಪಾಸಣೆಗಾಗಿ ಯಾವುದೇ ವಾಹನವನ್ನು ನಿಲ್ಲಿಸಲಾಗುವುದಿಲ್ಲ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಜುಲೈನಲ್ಲಿ ಹೇಳಿದ್ದರು. ದಾಖಲೆ ಪರಿಶೀಲನೆಯ ಹೆಸರಿನಲ್ಲಿ ಟ್ರಾಫಿಕ್ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂಬ ಹಲವು ದೂರುಗಳ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:56 am, Thu, 8 December 22