ಬೆಂಗಳೂರಿನ ಬಿಲ್ಡಿಂಗ್ಗಳನ್ನು ಹಾರಿ ವಿಡಿಯೋ ಚಿತ್ರೀಕರಿಸಿ ಯುವತಿಯರನ್ನು ಮಂಚಕ್ಕೆ ಕರೆಯುತ್ತಿದ್ದ ಕಾಮುಕ ಅರೆಸ್ಟ್
ನಾಲ್ಕು ವರ್ಷದಿಂದ ಯಾವುದೇ ಕೆಲಸವಿಲ್ಲದೇ ಅಡ್ಡಾಡುತ್ತಿದ್ದ ನಿರಂಜನ್, ಹೆಣ್ಣು ಮಕ್ಕಳ ವಿಡಿಯೋ ಮಾಡೋದನ್ನೇ ಕಯಾಲಿಮಾಡಿಕೊಂಡಿದ್ದ. ವಿಡಿಯೋ ಚಿತ್ರೀಕರಣ ಮಾಡಿ ಹೆಣ್ಣು ಮಕ್ಕಳನ್ನು ಮಂಚಕ್ಕೆ ಕರೆಯುತ್ತಿದ್ದ.
ಬೆಂಗಳೂರು: ಸಿನಿಮಾ ಸ್ಟೈಲಲ್ಲಿ ಬಿಲ್ಡಿಂಗ್ ಟು ಬಿಲ್ಡಿಂಗ್ ಜಂಪ್ ಮಾಡುವ ಕಾಮುಕನನ್ನು ಬೆಂಗಳೂರು ಆಗ್ನೇಯ ವಿಭಾಗದ ಸೈಬರ್ ಪೊಲೀಸರು ಬಂಧಿಸಿದ್ದಾರೆ. ಬಿಲ್ಡಿಂಗ್ ಜಂಪ್ ಮಾಡಿ ಹೆಣ್ಣು ಮಕ್ಕಳು ಸ್ನಾನ ಮಾಡುವ, ಬಟ್ಟೆ ಬದಲಾಯಿಸುವ ನಗ್ನ, ಅರೆನಗ್ನ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ಪಾಂಡಿಚೇರಿ ಮೂಲದ ನಿರಂಜನ್ ಬಂಧಿತ ಆರೋಪಿ.
ನಾಲ್ಕು ವರ್ಷದಿಂದ ಯಾವುದೇ ಕೆಲಸವಿಲ್ಲದೇ ಅಡ್ಡಾಡುತ್ತಿದ್ದ ನಿರಂಜನ್, ಹೆಣ್ಣು ಮಕ್ಕಳ ವಿಡಿಯೋ ಮಾಡೋದನ್ನೇ ಕಯಾಲಿಮಾಡಿಕೊಂಡಿದ್ದ. ವಿಡಿಯೋ ಚಿತ್ರೀಕರಣ ಮಾಡಿ ಹೆಣ್ಣು ಮಕ್ಕಳನ್ನು ಮಂಚಕ್ಕೆ ಕರೆಯುತ್ತಿದ್ದ. ಮಂಚಕ್ಕೆ ಬಾರದಿದ್ರೆ ವಿಡಿಯೋ ವೈರಲ್ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದ. ಸದ್ಯ ಯುವತಿಯೊಬ್ಬಳ ದೂರಿನ ಮೇರೆಗೆ ಆಗ್ನೇಯ ವಿಭಾಗದ ಸೈಬರ್ ಪೊಲೀಸರು ಆರೋಪಿ ನಿರಂಜನ್ನನ್ನು ಟ್ರ್ಯಾಪ್ ಮಾಡಿ ಬಂಧಿಸಿದ್ದಾರೆ. ಮೊದಲನೇ ಬಾರಿಗೆ ಟ್ರ್ಯಾಪ್ ಮಾಡಿದಾಗ ಯುವತಿಯನ್ನ ಭೇಟಿ ಮಾಡಿ ಆರೋಪಿ ನಿರಂಜನ್ ವಾಪಸ್ಸು ಹೋಗಿದ್ದ. ಎರಡನೇ ದಿನ ರೂಮ್ ಬುಕ್ ಮಾಡಿ ಯುವತಿಯನ್ನ ಕರೆಯಿಸಿದ್ದ. ಈ ವೇಳೆ ರೆಂಡ್ ಹ್ಯಾಂಡಾಗಿ ಆರೋಪಿಯನ್ನು ಬಂಧಿಸಲಾಗಿದೆ.
ಆಗ್ನೇಯ ವಿಭಾಗದ ಪಿಜಿಯೊಂದರಲ್ಲಿ ವಾಸವಿದ್ದ ಆರೋಪಿ, ಪಿಜಿಯ ಪಕ್ಕದಲ್ಲೇ ಇದ್ದ ಹೆಣ್ಣು ಮಕ್ಕಳ ಬ್ಲಾಕ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದ. ಸದ್ಯ ಆರೋಪಿ ಮೊಬೈಲ್ನಲ್ಲಿ 20 ರಿಂದ 30ಕ್ಕೂ ಹೆಚ್ಚು ವಿಡಿಯೋಗಳು ಪತ್ತೆಯಾಗಿವೆ. ಹೀಗಾಗಿ ಆರೋಪಿ ಬಂಧಿಸಿ ತನಿಖೆ ಮುಂದುವರೆಸಲಾಗಿದೆ.
ಇದನ್ನೂ ಓದಿ: ತುಮಕೂರು: ಅಂತ್ಯ ಸಂಸ್ಕಾರಕ್ಕೆ ಶಾಸಕ ಗುಬ್ಬಿ ಶ್ರೀನಿವಾಸ್ ಬರಬೇಕೆಂದು ಡೆತ್ ನೋಟ್ ಬರೆದು ಯುವಕ ಆತ್ಮಹತ್ಯೆ
ಅಣ್ಣ-ತಂಗಿ ಜೋಡಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಟ್ವಿಸ್ಟ್
ಧಾರವಾಡದ ನವಲಗುಂದದಲ್ಲಿ ಜೋಡಿಯೊಂದು ಆತ್ಮಹತ್ಯೆ ಮಾಡಿಕೊಂಡಿತ್ತು. ಮೊದಲಿಗೆ ಆತ್ಮಹತ್ಯೆ ಮಾಡಿಕೊಂಡವರಿಬ್ಬರೂ ಸಂಬಂಧದಲ್ಲಿ ಅಣ್ಣ-ತಂಗಿಯಾಗಿದ್ದ ಕಾರಣ ಇದಕ್ಕೆ ಪ್ರೀತಿಯ ವಿಚಾರ ಬಂದಿರಲಿಲ್ಲ. ಆದ್ರೆ ಈಗ ಅಕ್ಕ- ತಂಗಿಯರ ಮಕ್ಕಳಾಗಿದ್ದ ಕುಮಾರ ಮತ್ತು ದೀಪಾ ಆತ್ಮಹತ್ಯೆಗೆ ಅವರಿಬ್ಬರಲ್ಲಿದ್ದ ಪ್ರೀತಿನೇ ಕಾರಣ ಎನ್ನಲಾಗುತ್ತಿದೆ.
ಕುಮಾರ ಆಗಾಗ ನೀರಲಕಟ್ಟಿ ಗ್ರಾಮಕ್ಕೆ ಬರುತ್ತಿದ್ದ. ಕುಮಾರ ಮತ್ತು ದೀಪಾ ಅಣ್ಣ ತಂಗಿಯರಾಗಿದ್ದ ಕಾರಣಕ್ಕೆ ಯಾರಿಗೂ ಸಂಶಯ ಇರಲಿಲ್ಲ. ಆದ್ರೆ ಕುಮಾರ ತಂಗಿಯನ್ನೇ ಪ್ರೀತಿಸಲಾರಂಭಿಸಿದ್ದ. ಎರಡು ದಿನಗಳ ಹಿಂದೆ ಕಾಲೇಜಿಗೆ ಹೋಗಿದ್ದ ದೀಪಾ ಮನೆಗೆ ವಾಪಸ್ ಬಾರದೇ ನಾಪತ್ತೆಯಾಗಿದ್ದಳು. ಮತ್ತೊಂದೆಡೆ ಕುಮಾರ ಕೂಡ ನಾಪತ್ತೆಯಾಗಿದ್ದ. ಹೀಗಾಗಿ ಇಬ್ಬರೂ ಎಲ್ಲಿಯಾದರೂ ಹೋಗಿರಬಹುದು ಬರುತ್ತಾರೆಂದು ಕುಟುಂಬಸ್ಥರು ಸುಮ್ಮನಾಗಿದ್ದರು. ಎರಡು ದಿನಗಳಿಂದ ನವಲಗುಂದ ಲಾಡ್ಜ್‌ನಲ್ಲೇ ಇದ್ದ ಕುಮಾರ್ ಮತ್ತು ದೀಪಾ ತಮ್ಮ ಸ್ನೇಹಿತರ ಸಹಾಯದಿಂದ ಅಶೋಕ ಲಾಡ್ಜ್‌ನಲ್ಲಿ ರೂಮ್ ಪಡೆದಿದ್ದರು. ತಮ್ಮ ಸಂಬಂಧದ ಬಗ್ಗೆ ಪಶ್ಚಾತ್ತಾಪ ಪಟ್ಟು ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಯಾದ ರೂಮ್‌ನಲ್ಲಿ ಇಬ್ಬರ ಬ್ಯಾಗ್ ಪತ್ತೆಯಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:23 am, Thu, 8 December 22