ಅಪಘಾತ ಪ್ರಕರಣದಲ್ಲಿ ಜಪ್ತಿಯಾದ ವಾಹನ 24 ಗಂಟೆಯೊಳಗೆ ಮಾಲೀಕರಿಗೆ ಹಸ್ತಾಂತರ: ಕಮಿಷನರ್ ಡಾ.ಸಲೀಂ

ಆಕ್ಸಿಡೆಂಟ್ ಕೇಸ್ ವಾಹನ ಮಾಲೀಕರಿಗೆ ಟ್ರಾಫಿಕ್ ಸ್ಪೆಷಲ್ ಕಮಿಷನರ್ ಡಾ.ಸಲೀಂ ಹೇಳಿಕೆ ಗುಡ್ ನ್ಯೂಸ್ ನೀಡಿದ್ದು, ಆಕ್ಸಿಡೆಂಟ್​ ಪ್ರಕರಣಗಳಲ್ಲಿ ಸೀಜ್​ ಆದ ವಾಹನಗಳನ್ನು ಮಾಲೀಕರು 24 ಗಂಟೆಯೊಳಗೆ ವಾಪಸ್ ಪಡೆದುಕೊಳ್ಳಬಹುದು.

ಅಪಘಾತ ಪ್ರಕರಣದಲ್ಲಿ ಜಪ್ತಿಯಾದ ವಾಹನ 24 ಗಂಟೆಯೊಳಗೆ ಮಾಲೀಕರಿಗೆ ಹಸ್ತಾಂತರ: ಕಮಿಷನರ್ ಡಾ.ಸಲೀಂ
ಟ್ರಾಫಿಕ್ ವಿಭಾಗದ ವಿಶೇಷ ಕಮಿಷನರ್ ಎಂ.ಎ.ಸಲೀಂ
Follow us
| Updated By: ರಮೇಶ್ ಬಿ. ಜವಳಗೇರಾ

Updated on:Dec 07, 2022 | 8:22 PM

ಬೆಂಗಳೂರು: ಅಪಘಾತ ಪ್ರಕರಣದಲ್ಲಿ (Accident Cases) ಜಪ್ತಿಯಾದ ವಾಹನಗಳನ್ನು 24 ಗಂಟೆಯೊಳಗೆ ಬಿಡುಗಡೆ ಮಾಡಬೇಕೆಂದು ಬೆಂಗಳೂರು ಸಂಚಾರಿ ವಿಶೇಷ ಕಮಿಷನರ್ ಡಾ.ಸಲೀಂ (Bengaluru Traffic special Commissioner MA Saleem) ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಕೇಸ್​​ನ ತನಿಖೆಯಿಂದಾಗಿ ಜಪ್ತಿಯಾದ ವಾಹನಗಳು ತಿಂಗಳುಗಟ್ಟಲ್ಲೇ ಸ್ಟೇಷನ್​ಲ್ಲಿ ​ಇರುತ್ತಿದ್ದವು. ಆದರೆ, ಇನ್ನು ಮುಂದೆ ಆ್ಯಕ್ಸಿಡೆಂಟ್ ಆದ 24 ಗಂಟೆಗಳಲ್ಲಿ ವಾಹನ ವಾಪಸ್ ನೀಡಬೇಕೆಂದು ಪೊಲೀಸರಿಗೆ ಕಮಿಷನರ್ ಎಂ.ಎ. ಸಲೀಂ ಸೂಚನೆ ನೀಡಿದ್ದಾರೆ.

ಆಕ್ಸಿಡೆಂಟ್ ವಾಹನಗಳನ್ನು ಪೊಲೀಸರು ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಆರ್​ಟಿಓ ದಿಂದ ಪರಿಶೀಲನೆ ನಡೆದ ಬಳಿಕ, ಮೆಕಾನಿಕಲ್ ಆಗಿ ಏನಾದ್ರು ತೊಂದರೆ ಆಗಿದೆಯಾ ಎಂದು ರಿಪೋರ್ಟ್ ಮಾಡಲಾಗುತ್ತದೆ. ನಂತರ ಸಿಬ್ಬಂದಿ ಮಾಲೀಕರಿಗೆ ಸೂಚನೆ ನೀಡಿ, ಮುಚ್ಚಳಿಕೆ ಬರೆಸಿಕೊಂಡು ವಾಹನ ಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳಗ್ಗೆ 8.30ರ ನಂತರ ಶಾಲಾ ವಾಹನ ಸಂಚಾರ ಬಂದ್: ರಾಜಧಾನಿ ಟ್ರಾಫಿಕ್ ಸಮಸ್ಯೆಗೆ ಮತ್ತೊಂದು ಸಲೀಂ ಅಸ್ತ್ರ

ಅಪಘಾತ ಆಗಿದೆ ಅಂತಾ ವಾಹನಗಳನ್ನು ಸ್ಟೇಷನ್ ಮುಂದೆ ಇಟ್ಟುಕೊಂಡರೆ ಸಾಕಷ್ಟು ವಾಹನ ಬಂದು ಬೀಳುತ್ತವೆ. ಇದರಿಂದ ಸ್ಟೇಷನ್ ಕೂಡ ಲಕ್ಷಣವಾಗಿ ಕಾಣಿಸುವುದಿಲ್ಲ. ಪೊಲೀಸ್ ಠಾಣೆ ಸುತ್ತ ಮುತ್ತಲಿನ ಆವರಣ ಶುಚಿಯಾಗಿಡಬೇಕು. ಹೀಗಾಗಿ ಆಕ್ಸಿಡೆಂಟ್ ವಾಹನಗಳು ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಇನ್ನು ಮುಂದೆ 24 ಗಂಟೆಯಲ್ಲಿ ಪರಿಶೀಲನೆ ನಡೆಸಿ ವಾಪಸ್ ನೀಡಲಾಗುತ್ತದೆ ಎಂದು ಟ್ರಾಫಿಕ್ ಸ್ಪೆಷಲ್ ಕಮಿಷನರ್ ಸಲೀಂ ಮಾಹಿತಿ ನೀಡಿದ್ದಾರೆ.

ಆಕ್ಸಿಡೆಂಟ್ ಪ್ರಕರಣಗಳಲ್ಲಿ ಸಿಕ್ಕರೆ ವಾಹನ ಬೇಗನೆ ಮಾಲೀಕರ ಕೈಸೇರುತ್ತಿರಲಿಲ್ಲ. ಮಾಲೀಕರು ಮತ್ತೆ ತಮ್ಮ ವಾಹನಗಳನ್ನು ಪೊಲೀಸ್ ಸ್ಪೇಷನ್​ಗಳಿಂದ ಬಿಡಿಸಿಕೊಂಡು ಬರಲು ಸಾಕಷ್ಟು ಸಮಯ ತಗಲುತ್ತಿತ್ತು. ಆದರೆ. ಇದೀಗ ಟ್ರಾಫಿಕ್ ಸ್ಪೆಷಲ್ ಕಮಿಷನರ್ ಡಾ.ಸಲೀಂ ಹೊಸ ನಿಯಮ ಜಾರಿ ಮಾಡಿದ್ದು, ಇನ್ಮುಂದೆ ಆಕ್ಸಿಡೆಂಟ್ ಕೇಸ್ ಇರುವ ವಾಹನ ಮಾಲೀಕರು ತಮ್ಮ ವಾಹನಗಳನ್ನು 24 ಗಂಟೆಗಳಲ್ಲಿ ಪಡೆದುಕೊಳ್ಳಬಹುದು.

ಅವೈಜ್ಞಾನಿಕ ಹಂಪ್​ ತೆರವಿಗೆ ಸೂಚನೆ

ಬೆಂಗಳೂರಿನಲ್ಲಿ ನಗರದಲ್ಲಿ ಹಂಪ್ ಗಳಿಂದ ಆ್ಯಕ್ಸಿಡೆಂಟ್ ಪ್ರಕರಣಗಳು ಹೆಚ್ಚುತ್ತಿರುವ ಮಾತನಾಡಿರುವ ಟ್ರಾಫಿಕ್ ಸ್ಪೆಷಲ್ ಕಮಿಷನರ್ ಡಾ. ಸಲೀಂ , 420ಕ್ಕೂ ಹೆಚ್ಚು ಹಂಪ್ ಗಳು ಲಿಸ್ಟ್ ಮಾಡಿ ಬಿಬಿಎಂಪಿಗೆ ನೀಡಲಾಗಿದೆ. ಕೂಡಲೇ ಅವೈಜ್ಞಾನಿಕ ಹಂಪ್ ಗಳನ್ನ ತೆರವುಗೊಳಿಸುವಂತೆ ಸೂಚಿಸಲಾಗಿದೆ. ಅವಶ್ಯಕತೆ ಇರುವ ಕಡೆ ರಬ್ಬರ್ ಹಂಪ್ ಗಳು ಹಾಕಲು ಬಿಬಿಎಂಪಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರು ನಗರದಲ್ಲಿ ಅವೈಜ್ಙಾನಿಕ ಹಂಪ್ ಗಳಿಂದ ಕೆಲವೆಡೆ ಆ್ಯಕ್ಸಿಡೆಂಟ್ ಆಗ್ತಿತ್ತು. ಹೀಗಾಗಿ ಎಲ್ಲೆಲ್ಲಿ ಅವೈಜ್ಞಾನಿಕ ಹಂಪ್‌ಗಳಿದೆ, ಅನವಶ್ಯಕ ಹಂಪ್ ಗಳಿದೆ ಅದನ್ನ ರಿಮೂವ್ ಮಾಡುವುದಕ್ಕೆ ಹೇಳಿದ್ದೇವೆ. ಜೊತೆಗೆ ಸಿಗ್ನಲ್ ಗಳ ಬಳಿ ಇರುವ ಹಂಪ್ ಗಳನ್ನ ರಿಮೂವ್ ಮಾಡುವುದಕ್ಕೆ ತಿಳಿಸಿದ್ದೇವೆ ಎಂದರು.

ರಬ್ಬರ್ ಹಂಪ್‌ ಇಂದ ಅಷ್ಟು ಎಫೆಕ್ಟ್ ಆಗುವುದಿಲ್ಲ. ಈ ಹಿನ್ನಲೆಯಲ್ಲಿ ಅವಶ್ಯಕತೆ ಇರುವ ಕಡೆ ರಬ್ಬರ್ ಹಂಪ್ ಹಾಕಲು ಸೂಚಿಸಿದ್ದೀವಿ. ಸವಾರರ ಸುರಕ್ಷತೆ ದೃಷ್ಟಿಯಿಂದ ಈ ರೀತಿ ಮಾಡುತ್ತಿದ್ದೇವೆ. ಈಗಾಗಲೇ ಬಿಬಿಎಂಪಿ ಅಧಿಕಾರಿಗಳ ಜೊತೆ ಮಾತನಾಡಿದ್ದೇವೆ. ಅವರೂ ಕೆಲಸ ಶುರು ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 8:08 pm, Wed, 7 December 22