ಕಷ್ಟದಲ್ಲಿ ಬಿಟ್ಟು ಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಗೌಡ ಮಾತು
ಧನ್ವೀರ್ ಗೌಡ ಅವರು ‘ವಾಮನ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಬಿಡುಗಡೆ ಹತ್ತಿರ ಆಗಿದ್ದು, ಸಂದರ್ಶನ ನೀಡಿದ್ದಾರೆ. ಈ ವೇಳೆ ದರ್ಶನ್ ಬಗ್ಗೆಯೂ ಧನ್ವೀರ್ ಗೌಡ ಮಾತನಾಡಿದ್ದಾರೆ. ಕೆಲವೇ ದಿನಗಳ ಹಿಂದೆ ದರ್ಶನ್ ಅವರು ‘ವಾಮನ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದರು.
ನಟ ಧನ್ವೀರ್ ಗೌಡ (Dhanveer Gowda) ಅವರು ದರ್ಶನ್ ಜೊತೆ ಬೆಂಬಲವಾಗಿ ನಿಂತಿದ್ದಾರೆ. ದರ್ಶನ್ (Darshan) ಜೊತೆ ಆಪ್ತತೆ ಬೆಳೆದಿದ್ದರ ಬಗ್ಗೆ ಧನ್ವೀರ್ ಅವರು ಮಾತನಾಡಿದ್ದಾರೆ. ‘ನಾನು ಒಬ್ಬ ವ್ಯಕ್ತಿಯನ್ನು ಇಷ್ಟಪಟ್ಟರೆ ಅವರನ್ನು ಉಳಿಸಿಕೊಳ್ಳಲು ನೋಡುತ್ತೇನೆ. ಸುಖದಲ್ಲಿ ಇಷ್ಟು ಇರುತ್ತೇವೋ ಕಷ್ಟದಲ್ಲೂ ಅಷ್ಟೇ ಭಾಗಿ ಆಗಬೇಕು. ಅದು ನನ್ನ ವ್ಯಕ್ತಿತ್ವ. ದರ್ಶನ್ ಅವರು ದೊಡ್ಡ ಆಲದ ಮರ. ಅವರ ಕೆಳಗೆ ಬೆಳೆಯುತ್ತಿರುವವರು ನಾವು’ ಎಂದು ಧನ್ವೀರ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos