ಬೆಂಗಳೂರು: ಪಶ್ಚಿಮ ಬಂಗಾಳ ಮೂಲದ ಯುವಕ ಸಾವಿನ (Suspicious death) ಅಸಲಿಯತ್ತು ಪತ್ತೆಯಚ್ಚುವ ನಿಟ್ಟಿನಲ್ಲಿ ಹೂತಿಟ್ಟ ಮೃತದೇಹವನ್ನು ಹೊರತೆಗೆದ ಬೆಂಗಳೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆತ್ಮಹತ್ಯೆಯೋ, ಕೊಲೆಯೋ ಎಂಬುದನ್ನ ಪತ್ತೆಹಚ್ಚಲು ಮೃತದೇಹ ಹೊರತೆಗೆಯಲಾಗಿದೆ. ಎರಡು ವಾರದ ಹಿಂದೆ ಕೂಲಿ ಕೆಲಸ ಮಾಡಿಕೊಂಡಿದ್ದ ರಸೂಲ್ ಎಂಬ ಯುವಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಆದರೆ ಸಾವಿನ ವಿಷ್ಯವನ್ನ ಪೊಲೀಸರಿಗೆ ತಿಳಿಸದೇ ಸ್ನೇಹಿರು ಅಂತ್ಯಕ್ರಿಯೆ ಮಾಡಿ ಮುಗಿಸಿದ್ದರು. ಇದೀಗ ಸಾವಿನ ಹಿಂದೆ ಅನುಮಾನ ಹುಟ್ಟಿಕೊಂಡ ಹಿನ್ನಲೆ ಶವ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ನಗರದ ಕಾಡುಗೋಡಿ ಪೊಲೀಸರು ಶವ ಹೊರತೆಗೆದಿದ್ದು, ರಸೂಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೋ ಅಥವಾ ಕೊಲೆ ಮಾಡಿ ಹೂತು ಹಾಕಲಾಗಿತ್ತೋ ಎಂಬುದನ್ನ ಪತ್ತೆಹಚ್ಚಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ವರದಿ ಬಂದ ನಂತರವಷ್ಟೇ ಸಾವಿನ ಅಸಲಿಯತ್ತು ತಿಳಿದುಬರಲಿದೆ. ಸದ್ಯ ಮರಣೋತ್ತರ ಪರೀಕ್ಷೆ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ಇದನ್ನೂ ಓದಿ: ದೆಹಲಿ: ಹಾಸಿಗೆಯಲ್ಲಿ ಮೂತ್ರ ಮಾಡಿದ್ದಕ್ಕೆ ಪಾರ್ಶ್ವವಾಯು ಪೀಡಿತ ಅಪ್ಪನನ್ನು ಹೊಡೆದು ಕೊಂದ ಮಗ
ಮೃತ ರಸೂಲ್ ಪತ್ನಿ ಆತನ ಬಿಟ್ಟು ಹೋಗಿದ್ದಳು, ಮತ್ತೊಂದೆಡೆ ಮಾಲೀಕ ಸಂಬಳ ಸಹ ಸರಿಯಾಗಿ ನೀಡುತ್ತಿರಲಿಲ್ಲ. ಈ ಎರಡು ವಿಚಾರಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯೂ ಇದೆ. ಆದರೆ ಸ್ನೇಹಿತರು ಮತ್ತು ಮಾಲೀಕ, ಸಾವಿನ ಬಗ್ಗೆ ಯಾರಿಗೂ ತಿಳಿಸದೇ ಸಮಾಧಿ ಮಾಡಿದ ಹಿನ್ನಲೆ ಮೃತ ರಸೂಲ್ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಸಾವಿನ ಮಾಹಿತಿ ನೀಡದೇ ಅಂತ್ಯಕ್ರಿಯೆ ನಡೆಸಿರುವ ಬಗ್ಗೆ ಕಾಡುಗೊಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:39 am, Tue, 7 February 23