Bengaluru Power Cut: ಬೆಂಗಳೂರಿನಲ್ಲಿ ಈ ವಾರ ಪವರ್ ಕಟ್; ಇಲ್ಲಿದೆ ವಿವರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 26, 2023 | 11:45 AM

ಬೆಂಗಳೂರು ನಗರದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗಬಹುದು. ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳ ವಿವರ ಹೀಗಿದೆ

Bengaluru Power Cut: ಬೆಂಗಳೂರಿನಲ್ಲಿ ಈ ವಾರ ಪವರ್ ಕಟ್; ಇಲ್ಲಿದೆ ವಿವರ
ಪವರ್ ಕಟ್
Follow us on

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು (Karnataka Power Transmission Corporation Limited – KTPCL) ನಗರದ ವಿವಿಧ ಪ್ರದೇಶಗಳಲ್ಲಿ ತುರ್ತು ನಿರ್ವಹಣೆ, ತಂತಿ ಬದಲಾವಣೆ, ಮರಕಡಿತಲೆ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಬೆಂಗಳೂರು ನಗರದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗಬಹುದು. ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳ ವಿವರ ಹೀಗಿದೆ.

ಜನವರಿ 27, ಶುಕ್ರವಾರ

ಕಾವೇರಿ ನಗರ, ಹುಳಿಮಾವು, ಅಕ್ಷಯ ನಗರ, ಹೊಂಗಸಂದ್ರ, ಬಿಟಿಎಸ್ ಲೇಔಟ್, ವಿರಾಟ ನಗರ, ಕಾಳೇನ ಅಗ್ರಹಾರ, ವೆಗಾ ಸಿಟಿ, ಅರೆಕೆರೆ ಬಿಡಿಎ, ನ್ಯಾಪನಹಳ್ಳಿ, ಸತ್ಯಸಾಯಿ ಬಿಡಿಎ, ಕೋಡಿಚಿಕ್ಕನಹಳ್ಳಿ, ವಿಜಯಾ ಬ್ಯಾಂಕ್ ಲೌಔಟ್, ವಿಶ್ವಪ್ರಿಯಾ ಲೇಔಟ್ ಮತ್ತು ಸುತ್ತಮುತ್ತಲ ಪ್ರದೇಶಗಳು.

ಜನವರಿ 28ರ ಶನಿವಾರ ತುಮಕೂರು ಮತ್ತು ಕೋಲಾರ ನಗರಗಳೂ ಸೇರಿದಂತೆ ಎರಡೂ ಜಿಲ್ಲೆಗಳ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ.

ಇದನ್ನೂ ಓದಿ: RTPS: ರಾಯಚೂರು ವಿದ್ಯುತ್ ಉತ್ಪಾದನಾ ಕೇಂದ್ರದ 4 ಘಟಕಗಳು ಬಂದ್, ಲೋಡ್ ಶೆಡ್ಡಿಂಗ್ ಭೀತಿ

ಬೆಂಗಳೂರು ನಗರದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ