Sign In

By signing in or creating an account, you agree with Associated Broadcasting Company's Terms & Conditions and Privacy Policy.

Suburban Railway: ಬೆಂಗಳೂರು ಉಪನಗರ ರೈಲು ಯೋಜನೆಗೆ ಕೊನೆಗೂ ಸಿಕ್ಕಿತು ವೇಗ; 4ನೇ ಕಾರಿಡಾರ್ ಕಾಮಗಾರಿಗೆ ಟೆಂಡರ್

2025ರಲ್ಲಿ ‘ಕನಕ ಮಾರ್ಗ’ದ ಕಾರ್ಯಾಚರಣೆ ಆರಂಭವಾಗಲಿದೆ. ಈ ಮಾರ್ಗದಲ್ಲಿ ಪ್ರತಿದಿನ 3.5 ಲಕ್ಷ ಮಂದಿ ಪ್ರಯಾಣಿಸಬಹುದು ಎಂದು ನಿರೀಕ್ಷಿಸಲಾಗಿದೆ.

Suburban Railway: ಬೆಂಗಳೂರು ಉಪನಗರ ರೈಲು ಯೋಜನೆಗೆ ಕೊನೆಗೂ ಸಿಕ್ಕಿತು ವೇಗ; 4ನೇ ಕಾರಿಡಾರ್ ಕಾಮಗಾರಿಗೆ ಟೆಂಡರ್
ಉಪನಗರ ರೈಲು (ಸಂಗ್ರಹ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 26, 2023 | 3:24 PM

ಬೆಂಗಳೂರು: ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಉಪನಗರ ರೈಲು ಯೋಜನೆಯ (Bengaluru Suburban Train) ಅನುಷ್ಠಾನ ಕೊನೆಗೂ ವೇಗ ಪಡೆದುಕೊಳ್ಳುತ್ತಿದೆ. ಹೀಲಲಿಗೆಯಿಂದ ರಾಜಾನುಕುಂಟೆಗೆ ಸಂಪರ್ಕ ಕಲ್ಪಿಸುವ 3ನೇ ಕಾರಿಡಾರ್​ನ ಕಾಮಗಾರಿ ಅನುಷ್ಠಾನಕ್ಕೆ ಟೆಂಡರ್​ ಕರೆಯಲಾಯಿತು. ಈ ಕಾರಿಡಾರ್​ಗೆ ‘ಕನಕ ಮಾರ್ಗ’ (Kanaka Line) ಎಂಬ ಹೆಸರನ್ನೂ ಇಡಲಾಗಿದೆ. 8.96 ಕಿಮೀಗಳಷ್ಟು ಎತ್ತರಿಸಿದ ರೈಲು ಮಾರ್ಗ (elevated tracks – viaducts), 37.92 ಕಿಮೀ ಗಳಷ್ಟು ಅಂತರದ ಸಾಮಾನ್ಯ ರೈಲು ಮಾರ್ಗ ನಿರ್ಮಾಣಕ್ಕೆ ಟೆಂಡರ್​ ಕರೆಯಲಾಗಿದೆ. ಏಪ್ರಿಲ್ 27 ಟೆಂಡರ್​ಗೆ ಬಿಡ್ ಸಲ್ಲಿಸಲು ಕೊನೆಯ ದಿನದ ಎಂದು ಘೋಷಿಸಲಾಗಿದೆ.

ಎಲ್ಲವೂ ಅಂದುಕೊಂಡಂತೆ ಆದರೆ ಇದೇ ವರ್ಷಾಂತ್ಯದೊಳಗೆ ಗುತ್ತಿಗೆ ಅಲಾಟ್​ಮೆಂಟ್ ಮುಗಿಯಲಿದೆ. ನಂತರ ಮೂರು ವರ್ಷಗಳ ಒಳಗೆ ಯೋಜನೆಯನ್ನು ಅನುಷ್ಠಾನಗೊಳಿಸುವ ಹೊಣೆಯನ್ನು ಟೆಂಡರ್ ಪಡೆದ ಕಂಪನಿಗಳು ಹೊತ್ತುಕೊಳ್ಳಬೇಕಿದೆ. ‘ಕನಕ ಮಾರ್ಗ’ದಲ್ಲಿ ಬರುವ 19 ನಿಲ್ದಾಣಗಳ ನಿರ್ಮಾಣಕ್ಕಾಗಿ ಪ್ರತ್ಯೇಕ ಟೆಂಡರ್ ಕರೆಯಲಾಗುವುದು ಎಂದು ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿಯ (Rail Infrastructure Development Company – K RIDE) ಅಧಿಕಾರಿಗಳು ತಿಳಿಸಿದ್ದಾರೆ.

ವಿಸ್ತೃತ ಯೋಜನಾ ವರದಿಗೆ (Detailed Project Report – DPR) ಕೆ-ರೈಡ್ ಅಧಿಕಾರಿಗಳು ತುಸು ಮಾರ್ಪಾಡು ಮಾಡಿದ್ದಾರೆ. ಅದರಂತೆ ‘ಕನಕ ಮಾರ್ಗ’ದ ಒಟ್ಟು ಉದ್ದ 4.24 ಕಿಮೀ ಆಗುತ್ತದೆ. ಭೂ ಸ್ವಾಧೀನ ವೆಚ್ಚ ತಗ್ಗಿಸುವ ಉದ್ದೇಶದಿಂದ ಸಾಮಾನ್ಯ ರೈಲು ಮಾರ್ಗ ನಿರ್ಮಾಣವಾಗಬೇಕಾದ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಎತ್ತರಿಸಿದ ಮಾರ್ಗವನ್ನು ಹೆಚ್ಚಿಸಲಾಗಿದೆ.

ಯೂರೋಪಿಯನ್ ಇನ್ವೆಸ್ಟ್​ಮೆಂಟ್ ಬ್ಯಾಂಕ್ ಮತ್ತು ಜರ್ಮನ್ ಇನ್ವೆಸ್ಟ್​ಮೆಂಟ್ ಅಂಡ್ ಡೆವಲಪ್​ಮೆಂಟ್ ಬ್ಯಾಂಕ್ ಜೊತೆಗೆ ಈ ಸಂಬಂಧ ಕೆ-ರೈಡ್ ಮಾತುಕತೆ ನಡೆಸುತ್ತಿದ್ದು, ಬಂಡವಾಳ ಒಗ್ಗೂಡಿಸಲು ಯತ್ನಿಸುತ್ತಿದೆ. ಬೆಂಗಳೂರು ಉಪನಗರ ರೈಲು ಯೋಜನೆಗೆ ಒಟ್ಟು ₹ 15,767 ಕೋಟಿ ವೆಚ್ಚವಾಗುವ ನಿರೀಕ್ಷೆಯಿದೆ. ಮಾರ್ಚ್ ತಿಂಗಳಲ್ಲಿ ಈ ಸಂಬಂಧ ಒಪ್ಪಂದವಾಗುವ ಸಾಧ್ಯತೆಯಿದೆ.

2025ರಲ್ಲಿ ‘ಕನಕ ಮಾರ್ಗ’ದ ಕಾರ್ಯಾಚರಣೆ ಆರಂಭವಾಗಲಿದೆ. ಈ ಮಾರ್ಗದಲ್ಲಿ ಪ್ರತಿದಿನ 3.5 ಲಕ್ಷ ಮಂದಿ ಪ್ರಯಾಣಿಸಬಹುದು ಎಂದು ನಿರೀಕ್ಷಿಸಲಾಗಿದೆ. ಯಲಹಂಕ ಇಂಟರ್​ಚೇಂಜ್ ಸ್ಟೇಷನ್ ಆಗಲಿದ್ದು, ಇದು ಬೆಂಗಳೂರು-ದೇವನಹಳ್ಳಿ (ಏರ್​ಪೋರ್ಟ್​) ಮಾರ್ಗವನ್ನೂ ಸಂಪರ್ಕಿಸಲಿದೆ.

ಮಲ್ಲಿಗೆ ಮಾರ್ಗ

24.86 ಕಿಮೀ ಅಂತರದ ‘ಮಲ್ಲಿಗೆ ಮಾರ್ಗ’ವು ಬೈಯ್ಯಪ್ಪನಹಳ್ಳಿಯಿಂದ ಚಿಕ್ಕಬಾಣಾವರವನ್ನು ಸಂಪರ್ಕಿಸುತ್ತದೆ. ಈವರೆಗೆ ಕಾಮಗಾರಿ ಆರಂಭವಾಗಿರುವುದು ಇದೊಂದೇ ಮಾರ್ಗದಲ್ಲಿ. ಹೆಬ್ಬಾಳ ಮತ್ತು ಬೆನ್ನಿಗಾನಹಳ್ಳಿಯಲ್ಲಿ ಡಿಪೊಗಳನ್ನು ನಿರ್ಮಿಸಲು ಕೆ-ರೈಡ್ ಅಧಿಕಾರಿಗಳು ಮುಂದಾಗಿದ್ದಾರೆ. ಸೂಚಿತ ಸ್ಥಳಕ್ಕೆ ಬೇಲಿ ಹಾಕುವ, ನೆಲ ಸಮತಟ್ಟು ಮಾಡುವ, ಕಾಂಕ್ರೀಟ್ ಬ್ಯಾಚ್ ಘಟಕ ಅಳವಡಿಸುವ, ಮಣ್ಣು ಪರೀಕ್ಷಾ ಘಟಕ ನಿರ್ಮಾಣದ ಕೆಲಸಗಳು ಮುಕ್ತಾಯವಾಗಿವೆ.

ಮಲ್ಲಿಗೆ ಮಾರ್ಗಕ್ಕೆ ಒಟ್ಟು 177.83 ಎಕರೆ ಭೂಮಿ ಬೇಕಾಗಿದೆ. ಇದರಲ್ಲಿ 157.07 ಎಕರೆಗಳಷ್ಟು ರೈಲ್ವೆ ಭೂಮಿ ಇದ್ದರೆ 15.72 ಎಕರೆಗಳಷ್ಟು ರಾಜ್ಯ ಸರ್ಕಾರದ ಹಾಗೂ 5.11 ಎಕರೆಗಳಷ್ಟು ಖಾಸಗಿ ಭೂಮಿಯಿದೆ. ಈ ಪೈಕಿ ರೈಲ್ವೆ ಇಲಾಖೆಯ ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಮುಕ್ತಾಯವಾಗಿದ್ದರೆ, ಕೇವಲ 3.21 ಎಕರೆ ಖಾಸಗಿ ಭೂಮಿ ಹಾಗೂ 0.62 ಎಕರೆ ಸರ್ಕಾರಿ ಭೂಮಿಯನ್ನು ಸ್ವಾಧೀನಕ್ಕೆ ಪಡೆಯಲಾಗಿದೆ.

306 ಕೋಚ್​ಗಳ ಖರೀದಿಗೆ ಟೆಂಡರ್

ಉಪನಗರ ರೈಲು ಯೋಜನೆಗಾಗಿ ಕೆ-ರೈಡ್ 306 ಕೋಚ್​ಗಳಿಗೆ ಟೆಂಡರ್ ಕರೆದಿದೆ. ಕೋಚ್​ಗಳ ವಿನ್ಯಾಸ, ನಿರ್ಮಾಣ, ಪೂರೈಕೆ, ಕಾರ್ಯಾಚರಣೆ ಮತ್ತು ನಿರ್ವಹಣೆಯ ಷರತ್ತುಗಳನ್ನು ವಿಧಿಸಲಾಗಿದೆ.

ಟೆಂಡರ್ ಫೈಲ್ ಮಾಡಲು ಮಾರ್ಚ್ 15 ಕೊನೆಯ ದಿನ. ಒಂದು ತಿಂಗಳ ಮೌಲ್ಯಮಾಪನದ ನಂತರ ಟೆಂಡರ್​ ಅಂತಿಮಗೊಳಿಸಲಾಗುವುದು. ನಂತರದ 60 ತಿಂಗಳಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ. ಪ್ರತಿ ಬೋಗಿಯೂ 3.2 ಮೀಟರ್​ಗಳಷ್ಟು ಅಗಲ, 21.74 ಮೀಟರ್​ ಉದ್ದ ಇರುತ್ತದೆ. ಏರ್ ಕಂಡಿಷನ್ ವ್ಯವಸ್ಥೆ ಹೊಂದಿರುತ್ತದೆ. ಬಹುತೇಕ ಮೆಟ್ರೋ ಬೋಗಿಗಳನ್ನೇ ಹೋಲಲಿದ್ದು, ಗಂಟೆಗೆ ಗರಿಷ್ಠ 90 ಕಿಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

Published On - 3:24 pm, Thu, 26 January 23

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​