ಅನುದಾನದ ಬಗ್ಗೆ ಪ್ರಸ್ತಾಪಿಸಿದ ಕಾಗಿನೆಲೆ ಈಶ್ವರಪುರಿ ಸ್ವಾಮೀಜಿ: ಗರಂ ಆಗಿ ಮೈಕ್ ಕಿತ್ತುಕೊಂಡ ಸಿಎಂ ಬೊಮ್ಮಾಯಿ
ಕಾಗಿನೆಲೆ ಈಶ್ವರಾನಂದ ಸ್ವಾಮೀಜಿ ಅನುದಾನ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಂತೆ ಗರಂ ಆದ ಸಿಎಂ ಬಸವರಾಜ ಬೊಮ್ಮಾಯಿ ಸ್ವಾಮೀಜಿಯಿಂದ ಮೈಕ್ ಕಿತ್ತುಕೊಂಡಿದ್ದಾರೆ.

ಬೆಂಗಳೂರು: ನಗರದ ವಿಧಾನಸಭಾ ಕ್ಷೇತ್ರದ ಮಂಜುನಾಥಸ್ವಾಮಿ ದೇಗುಲದಲ್ಲಿ ಧಾರ್ಮಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ (CM basavaraj Bommai) ಕೂಡ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಕಾರ್ಯಕ್ರಮದಲ್ಲಿ ಕಾಗಿನೆಲೆ ಈಶ್ವರಾನಂದ ಸ್ವಾಮೀಜಿ ಅನುದಾನ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಈ ವೇಳೆ ಗರಂ ಆದ ಸಿಎಂ ಬಸವರಾಜ ಬೊಮ್ಮಾಯಿ ಸ್ವಾಮೀಜಿಯಿಂದ ಮೈಕ್ ಕಿತ್ತುಕೊಂಡಿದ್ದಾರೆ. ಬಳಿಕ ಮಾತನಾಡಿದ ಅವರು ನನ್ನಿಂದ ಆದ್ರೆ ಕೊಡ್ತೇನೆ ಎಂದು ಹೇಳುವೆ, ಇಲ್ಲದಿದ್ದರೆ ಆಗಲ್ಲ ಎನ್ನುವೆ. ನಾನು ಆಶ್ವಾಸನೆ ಕೊಡುವ ಸಿಎಂ ಅಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಸಂಗೊಳ್ಳಿ ರಾಯಣ್ಣ ವಿಶೇಷ ಆಶೀರ್ವಾದದಿಂದ ಹುಟ್ಟಿರುವ ವ್ಯಕ್ತಿ: ಸಿಎಂ ಬೊಮ್ಮಾಯಿ
ಸಂಗೊಳ್ಳಿ ರಾಯಣ್ಣ ಬಗ್ಗೆ ಒಂದೇ ಒಂದು ಮಾತು ಹೇಳಿತ್ತೀನಿ. ಸಂಗೊಳ್ಳಿ ರಾಯಣ್ಣ ವಿಶೇಷ ಆಶೀರ್ವಾದದಿಂದ ಹುಟ್ಟಿರುವ ವ್ಯಕ್ತಿ. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ್ದರು ಭಯ ಅನ್ನೋದು ಆತನಿಗೆ ಬಂದಿಲ್ಲ. ಸತ್ಯ, ನ್ಯಾಯ ನಿಷ್ಠೆ ಸಂಗೊಳ್ಳಿ ರಾಯಣ್ಣ ರಾಯಣ್ಣ ನನ್ನ ಕಿತ್ತೂರು ಚೆನ್ನಮ್ಮ ದತ್ತು ತೆಗೆದುಕೊಂಡದಕ್ಕೆ ಬ್ರಿಟಿಷ್ ವಿರೋಧಿಸಿದ್ರು. ರಾಣಿ ಚೆನ್ನಮ್ಮ ಧೈರ್ಯ, ಕಿಚ್ಚಿಗೆ ಬೆನ್ನೆಲುಬು ಆಗಿದ್ದು ರಾಯಣ್ಣ.
ಇದನ್ನೂ ಓದಿ: ಕಾಂಗ್ರೆಸ್ ಅವಧಿಯಲ್ಲಿ ದಾಖಲಾಗಿರುವ 59 ಕೇಸ್ ಲೋಕಾಯುಕ್ತಕ್ಕೆ ಹಸ್ತಾಂತರ: ಸಿಎಂ ಬೊಮ್ಮಾಯಿ
ಇವತ್ತಿನ ರೀತಿ ಆಧುನಿಕ ಸೈನ್ಯ ಇರಲಿಲ್ಲ. ರಾಯಣ್ಣ, ಚನ್ನಮ್ಮ ಧೈರ್ಯ ಯುದ್ದವನ್ನು ಗೆದ್ದರು. ಸಾಮಾನ್ಯ ಜನ, ಗುಡ್ಡ ಕಾಡು ಜನ ಸೇರಿಸಿ ಬ್ರಿಟಿಷ್ರ ವಿರುದ್ಧ ಹೋರಾಟ ಮಾಡಿದ್ರು. ಸಣ್ಣ ಸೈನ್ಯವನ್ನು ಇಟ್ಟುಕೊಂಡು ಹೋರಾಟ ಮಾಡಿದ ವ್ಯಕ್ತಿಗಳು ಸಂಗೊಳ್ಳಿ ರಾಯಣ್ಣ, ಶಿವಾಜಿ ಮಾತ್ರ. ಬ್ರಿಟಿಷ್ರು ಮೋಸ ಮಾಡಿ ಬಂಧಿಸಿದ್ರು. ಅವತ್ತು ಬ್ರಿಟಿಷ್ರು ಹುಲಿನ ಬಂಧಿಸಿದ್ದೀವಿ ಅಂತ ತೋರಿಸಬೇಕಿತ್ತು. ಅದಕ್ಕೆ ನೇಣು ಹಾಕಿದ್ರು, ಆಗ ಸಂಗೊಳ್ಳಿ ರಾಯಣ್ಣ ಹೇಳಿದ್ರು ಪ್ರತಿ ಮನೆಯಲ್ಲಿ ಸಂಗೊಳ್ಳಿ ರಾಯಣ್ಣ ಹುಟ್ಟುತ್ತಾನೆ ಅಂದ್ರು. ಅವರ ಸಾಧನೆಯನ್ನ ಇವತ್ತಿನ ಮಕ್ಕಳಿಗೆ ತಿಳಿಸಬೇಕು. ಸಂಗೊಳ್ಳಿ ರಾಯಣ್ಣ ನಮ್ಮ ಜೊತೆ ಇದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ: ಶಿಕ್ಷಣ ಕಾಶಿ ಧಾರವಾಡದಲ್ಲಿ ಮತ್ತೊಂದು ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ! ಜನವರಿ 28 ರಂದು ಅಮಿತ್ ಶಾ ಶಂಕುಸ್ಥಾಪನೆ
ಗದಗ ನಗರದ ಶಿವಾನಂದ ಮಠದ ಆವರಣದಲ್ಲಿ ಹೈಡ್ರಾಮಾ
ಗದಗ: ನಗರದ ಶಿವಾನಂದ ಮಠದ ಆವರಣದಲ್ಲಿ ಪೀಠಾಧಿಪತಿಗಳ ನಡುವೆ ಮತ್ತೆ ಜಟಾಪಟಿ ಶುರವಾಗಿದ್ದು ಹೈಡ್ರಾಮಾನೇ ನಡೆದಿದೆ. ಕಳಸಾಪುರ ರಸ್ತೆಯ ಮಠದ ಆವರಣದಲ್ಲಿ ಹಿರಿಯ, ಕಿರಿಯ ಸದಾಶಿವಾನಂದ ಶ್ರೀಗಳ ಸಮ್ಮುಖದಲ್ಲೇ ಭಕ್ತರು ವಾಗ್ವಾದ ಮಾಡಿದ್ದಾರೆ. ಕೋರ್ಟ್ ಆದೇಶದಂತೆ ಕಿರಿಯ ಶ್ರೀಗಳು ಮಠದ ಆವರಣದಲ್ಲಿ ಏನೂ ಮಾಡುವಂತಿಲ್ಲ ಅಂತಾ ಆರೋಪ ಮಾಡುತ್ತಿದ್ದಾರೆ. ತಪ್ಪು ಸಂದೇಶ ಬೇಡ ಅಂತ ಕಿರಿಯ ಶ್ರೀಗಳ ಪರ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಠದ ನಿಯಮ ಪಾಲಿಸದಿದ್ದಕ್ಕೆ ಪೀಠದಿಂದ ಕಿರಿಯ ಶ್ರೀಗಳನ್ನು ತೆಗೆದು ಹಾಕಲಾಗಿದೆ. ಹೀಗಾಗಿ ಎಲ್ಲ ಶಾಖಾಮಠದ ಶ್ರೀಗಳು ಅಭಿಪ್ರಾಯ ಪಡೆದು ವಜಾ ಮಾಡಲಾಗಿದೆ ಎಂದು ಹಿರಿಯ ಶ್ರೀಗಳು ಹೇಳುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.