- Kannada News Photo gallery Bengaluru Fire breaks out at tea stall in Rajajinagar bengaluru news in kannada
ಬೆಂಗಳೂರು: ರಾಜಾಜಿನಗರದಲ್ಲಿ ಅಗ್ನಿ ಅವಘಡ, ಬೆಂಕಿಯ ಧಗೆಗೆ ಟೀ ಸ್ಟಾಲ್ ಭಸ್ಮ
ಬೆಂಗಳೂರಿನ ರಾಜಾಜಿನಗರದ ವೆಸ್ಟ್ ಆಫ್ ಕಾರ್ಡ್ ರೋಡ್ ಸಮೀಪದ ಟೀ ಸ್ಟಾಲ್‌ವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ದುರಂತದಲ್ಲಿ ಯಾವುದೇ ಪ್ರಾಣಾಪಾಯವಿಲ್ಲ, ಆದರೆ, ಅಂಗಡಿ ಸಂಪೂರ್ಣ ಬೆಂಕಿಗೆ ಆಹಿತಿಯಾಗಿದೆ.
Updated on: Jan 26, 2023 | 10:40 PM

ಬೆಂಗಳೂರಿನ ರಾಜಾಜಿನಗರದ ವೆಸ್ಟ್ ಆಫ್ ಕಾರ್ಡ್ ರೋಡ್ ಸಮೀಪದ ಟೀ ಸ್ಟಾಲ್‌ವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ.

ಜೀವನದ ಬಂಡಿ ಸಾಗಿಸಲು ರವಿ ಎಂಬವರು ಚಹಾದ ಅಂಗಡಿ ಹಾಕಿದ್ದರು. ಈ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಹೊತ್ತಿ ಉರಿದಿದೆ.

ಅಗ್ನಿ ಅವಘಡದ ಮಾಹಿತಿ ಪಡೆದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿಯನ್ನು ನಂದಿಸಿದ್ದಾರೆ.

ಬೆಂಕಿ ಹತ್ತಿಕೊಂಡ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಅಗ್ನಿ ನಂದಿಸುವ ಕಾರ್ಯ ನಡೆಸಿದರೂ ಅಂಗಡಿ ಸಂಪೂರ್ಣವಾಗಿ ಸುಟ್ಟು ಕರಕಳಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ.

ಕಳೆದ 20 ವರ್ಷಗಳಿಂದ ರವಿ ಅವರು ಟೀ ಸ್ಟಾಲ್ ನಡೆಸುತ್ತಿದ್ದರು. ಕಳೆದ ಮೂರು ದಿನಗಳಿಂದ ಟೀ ಸ್ಟಾಲ್ ಬಂದ್ ಮಾಡಿ ಮಂಗಳೂರಿಗೆ ತೆರಳಿದ್ದು, ಇಂದು ಸಂಜೆ ಎಂಟು ಗಂಟೆ ಸುಮಾರಿಗೆ ಇವರ ಅಂಗಡಿಗೆ ಬೆಂಕಿ ಹತ್ತಿಕೊಂಡಿದೆ.

ಸ್ಥಳಕ್ಕೆ ಮಾಗಡಿ ರಸ್ತೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟೀ ಸ್ಟಾಲ್ಗೆ ಬೆಂಕಿ ಹೇಗೆ ಬಿತ್ತು ಎಂಬುದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.




