Updated on:Jan 26, 2023 | 7:50 PM
ತೋಟಗಾರಿಕಾ ಇಲಾಖೆ, ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ, ಜಿಲ್ಲಾಡಳಿತದ ವತಿಯಿಂದ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಿದ್ದು, ಜನವರಿ 29ರ ವರೆಗೂ ನಡೆಯಲಿದೆ.
ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಅವರು ಫಲಪುಷ್ಪ ಪ್ರದರ್ಶನ ಉದ್ಘಾಟಿಸಿದರು.
ತೋಟಗಾರಿಕೆ ಇಲಾಖೆ ವತಿಯಿಂದ ಬೆಳೆಸಿರುವ ವಿವಿಧ ಜಾತಿಯ ಸುಮಾರು 10,000 ಸಾವಿರ ಹೂವಿನ ಗಿಡಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಈ ಭಾಗದ ರೈತರು ಬೆಳೆಸಿರುವ ವಿವಿಧ ಜಾತಿಯ ಹಣ್ಣು ಮತ್ತು ತರಕಾರಿಗಳನ್ನು ಪ್ರದರ್ಶನಕ್ಕೆ ಇಟ್ಟಿರುವುದು ವಿಶೇಷ.
ಫಲಪುಷ್ಪ ಪ್ರದರ್ಶನದ ವೀಕ್ಷಣೆಗ ವಯಸ್ಕರಿಗೆ 20 ರೂ. ಮತ್ತು ಮಕ್ಕಳಿಗೆ 10 ರೂ ಟಿಕೆಟ್ ಇಡಲಾಗಿದ್ದು, ವಿವಿಧ ಹೂಗಳನ್ನು ನೋಡಿ ಜನರು ಕಣ್ತುಂಬಿಕೊಂಡರು.
Published On - 7:48 pm, Thu, 26 January 23