- Kannada News Photo gallery Budget 2023 Halwa Ceremony Finance Minister Nirmala Sitharaman distributed halwa to members of Budget Press along with other staff of the ministry
Budget 2023: ಅಂತಿಮ ಹಂತದಲ್ಲಿ ಬಜೆಟ್ ಸಿದ್ಧತೆ; ಹಲ್ವಾ ಸಮಾರಂಭ ನಡೆಸಿ ಸಿಬ್ಬಂದಿಗೆ ಸಿಹಿ ಹಂಚಿದ ನಿರ್ಮಲಾ ಸೀತಾರಾಮನ್
ಕೇಂದ್ರ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿದ್ದು, ಸಾಂಪ್ರದಾಯಿಕ ಹಲ್ವಾ ಸಮಾರಂಭ (Halwa Ceremony) ಗುರುವಾರ ನಡೆಯಿತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೆಹಲಿಯ ನಾರ್ಥ್ ಬ್ಲಾಕ್ನಲ್ಲಿರುವ ಹಣಕಾಸು ಸಚಿವಾಲಯದ ಮುಖ್ಯ ಕಚೇರಿಯಲ್ಲಿ ಸಿಬ್ಬಂದಿಗೆ ಹಲ್ವಾ ಹಂಚುವ ಮೂಲಕ ಅಂತಿಮ ಹಂತದ ಬಜೆಟ್ ಸಿದ್ಧತೆಗೆ ಚಾಲನೆ ನೀಡಿದರು.
Updated on: Jan 26, 2023 | 5:00 PM

ಕೇಂದ್ರ ಬಜೆಟ್ ಪ್ರಯುಕ್ತ ದೆಹಲಿಯ ನಾರ್ಥ್ ಬ್ಲಾಕ್ನಲ್ಲಿರುವ ಹಣಕಾಸು ಸಚಿವಾಲಯದ ಮುಖ್ಯ ಕಚೇರಿಯಲ್ಲಿ ಹಲ್ವಾ ಸಮಾರಂಭ ನಡೆಯಿತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಿಬ್ಬಂದಿಗೆ ಹಲ್ವಾ ಹಂಚುವ ಮೂಲಕ ಅಂತಿಮ ಹಂತದ ಬಜೆಟ್ ಸಿದ್ಧತೆಗೆ ಚಾಲನೆ ನೀಡಿದರು.

ಬಜೆಟ್ ಮಂಡನೆ ದಿನದ ವರೆಗೂ ಅಧಿಕಾರಿಗಳು ಕಚೇರಿಯಲ್ಲೇ ಇರಬೇಕಾಗುತ್ತದೆ. ಅಂದರೆ ಸಿಬ್ಬಂದಿಯು ಸಂಪೂರ್ಣವಾಗಿ ಲಾಕ್ ಇನ್ ಆಗಿ ಬಜೆಟ್ ಪ್ರತಿಗಳ ತಯಾರಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. ಬಜೆಟ್ ಮಾಹಿತಿಯ ಗೋಪ್ಯತೆ ಕಾಪಾಡಿಕೊಳ್ಳುವುದಕ್ಕಾಗಿ ಈ ನಿಯಮ ಅನುಸರಿಸಲಾಗುತ್ತದೆ.

ಅಂತಿಮ ಹಂತದ ಬಜೆಟ್ ಸಿದ್ಧತೆ ಆರಂಭವಾಗಿದೆ. ಇದಕ್ಕೆ, ಹಲ್ವಾ ಸಮಾರಂಭ ನಡೆಸುವ ಮೂಲಕ ಹಣಕಾಸು ಸಚಿವರು ಚಾಲನೆ ನೀಡಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವರ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಹಲ್ವಾ ಸಮಾರಂಭದಲ್ಲಿ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು, ಸಹಾಯಕ ಸಚಿವರು, ಕಾರ್ಯದರ್ಶಿಗಳು ಹಾಗೂ ಇತರ ಸಿಬ್ಬಂದಿ ಪಾಲ್ಗೊಂಡರು.

ಈ ಬಾರಿಯೂ ಕಾಗದರಹಿತ ಮಾದರಿಯಲ್ಲಿ ಬಜೆಟ್ ಮಂಡನೆಯಾಗಲಿದೆ. ಇದರೊಂದಿಗೆ ಸತತ ಮೂರನೇ ಬಾರಿಗೆ ಕಾಗದ ರಹಿತ ಬಜೆಟ್ ಮಂಡನೆ ಮಾಡಲಾಗುತ್ತಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಬಜೆಟ್ ಪ್ರತಿಗಳು ದೊರೆಯಲಿವೆ. ಆ್ಯಂಡ್ರಾಯ್ಡ್ ಮತ್ತು ಆ್ಯಪಲ್ ಒಎಸ್ಗಳಲ್ಲಿ ‘ಯೂನಿಯನ್ ಬಜೆಟ್ ಮೊಬೈಲ್ ಆ್ಯಪ್’ ಲಭ್ಯವಿದ್ದು, ಹಣಕಾಸು ಸಚಿವರು ಬಜೆಟ್ ಮಂಡನೆ ಮಾಡಿದ ಬಳಿಕ ಬಜೆಟ್ ಪ್ರತಿ ದೊರೆಯಲಿದೆ ಎಂದು ಸಚಿವಾಲಯ ತಿಳಿಸಿದೆ.

ಹಲ್ವಾ ಸಮಾರಂಭ ದಶಕಗಳಿಂದಲೂ ಆಚರಣೆಯಲ್ಲಿದೆ. ಬಜೆಟ್ ಅನ್ನು ಬಹುತೇಕ ಅಂತಿಮ ರೂಪಿಗೆ ಕೊಂಡೊಯ್ಯಲಾಗುತ್ತಿರುವ ಸಂದರ್ಭದ ಖುಷಿಯನ್ನು ಹೀಗೆ ಸಿಹಿ ತಿನಿಸುವ ಮೂಲಕ ಹಂಚಿಕೊಳ್ಳಲಾಗುತ್ತದೆ. ಜತೆಗೆ, ಸಿಬ್ಬಂದಿ ವರ್ಗದ ಲಾಕ್ ಇನ್ ಅವಧಿಯ ಏಕತಾನತೆ ಕಳೆಯುವುದಕ್ಕಾಗಿ ಹೀಗೊಂದು ಸಂಭ್ರಮ ಆಚರಿಸಲಾಗುತ್ತಿದೆ ಎನ್ನಲಾಗಿದೆ. 2021ರಲ್ಲಿ ಕೋವಿಡ್ ಸಾಂಕ್ರಾಮಿಕದ ಕಾರಣ ಹಲ್ವಾ ಕಾರ್ಯಕ್ರಮವನ್ನು ಮೊದಲ ಬಾರಿಗೆ ಕೈಬಿಡಲಾಗಿತ್ತು.



















