Bengaluru Traffic: ಬೆಂಗಳೂರಿನ ಟ್ರಾಫಿಕ್​​​ಗೆ ಒಂದೂವರೆ ವರ್ಷದ ಕಂದಮ್ಮ ಬಲಿ

| Updated By: ಆಯೇಷಾ ಬಾನು

Updated on: Feb 03, 2023 | 8:09 AM

ಅಪಘಾತದಲ್ಲಿ ಗಾಯಗೊಂಡಿದ್ದ ಒಂದೂವರೆ ವರ್ಷದ ಮಗು ಹುದಾ ಕೌಸರ್​​ ನೆಲಮಂಗಲ ಬಳಿ ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿಕೊಂಡು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಹೋಗಲಾಗದೆ ಚಿಕಿತ್ಸೆ ಪಡೆಯಲಾಗದೆ ಮೃತಪಟ್ಟಿದೆ.

Bengaluru Traffic: ಬೆಂಗಳೂರಿನ ಟ್ರಾಫಿಕ್​​​ಗೆ ಒಂದೂವರೆ ವರ್ಷದ ಕಂದಮ್ಮ ಬಲಿ
ಟ್ರಾಫಿಕ್ ಪೊಲೀಸರಿಗೆ ಚಾಲಕ ಮನವಿ
Follow us on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ(Bengaluru Traffic) ಇಂದು ನೆನ್ನೆಯದಲ್ಲ. ಪ್ರತಿಯೊಬ್ಬರೂ ಬೆಂಗಳೂರಿನ ಟ್ರಾಫಿಕ್​ನಿಂದ ಹೈರಾಣಾಗಿದ್ದಾರೆ. ಆದ್ರೆ ಬೆಂಗಳೂರಿನ ಟ್ರಾಫಿಕ್​​​ಗೆ ಒಂದೂವರೆ ವರ್ಷದ ಕಂದಮ್ಮ ಬಲಿಯಾದ ಮನಕಲಕುವ ಘಟನೆಯೊಂದು ನಡೆದಿದೆ.

ಅಪಘಾತದಲ್ಲಿ ಗಾಯಗೊಂಡಿದ್ದ ಒಂದೂವರೆ ವರ್ಷದ ಮಗು ಹುದಾ ಕೌಸರ್​​ ನೆಲಮಂಗಲ ಬಳಿ ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿಕೊಂಡು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಹೋಗಲಾಗದೆ ಚಿಕಿತ್ಸೆ ಪಡೆಯಲಾಗದೆ ಮೃತಪಟ್ಟಿದೆ. ಅಹಮದ್​​, ರುಕ್ಸಾನಾ ದಂಪತಿಯ ಪುತ್ರಿ ಹುದಾ ಕೌಸರ್, ನಿನ್ನೆ ತುಮಕೂರು ಜಿಲ್ಲೆ ತಿಪಟೂರಿನ ಕೈಮರಾ ಬಳಿ ಬುಲೆರೋ ವಾಹನ ಹಾಗು ಬೈಕ್ ನಡುವೆ ನಡೆದ ಅಪಘಾತದಲ್ಲಿ ಭೀಕರವಾಗಿ ಗಾಯಗೊಂಡಿದ್ದಳು. ಈ ವೇಳೆ ತಂದೆ ಅಹಮದ್​​, ತಾಯಿ ರುಕ್ಸಾನಾಗೆ ತಿಪಟೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಹಾಸನ ಹಿಮ್ಸ್​​ಗೆ ರವಾನಿಸಲಾಗಿತ್ತು. ಬಳಿಕ ಹಿಮ್ಸ್​​​ನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಗುವನ್ನ ಬೆಂಗಳೂರಿಗೆ ರವಾನಿಸಲು ಆ್ಯಂಬುಲೆನ್ಸ್ ಮೂಲಕ ಹೋಗುವಾಗ ನೆಲಮಂಗಲ ಬಳಿ ಟ್ರಾಫಿಕ್​ ಜಾಮ್​ ಸಮಸ್ಯೆ ಎದುರಾಗಿದೆ. ಟ್ರಾಫಿಕ್​ನಿಂದ ಆಸ್ಪತ್ರೆಗೆ ತೆರಳಲಾಗದೆ ಒಂದೂವರೆ ವರ್ಷದ ಹುದಾ ಮೃತಪಟ್ಟಿದ್ದಾಳೆ.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ತಲೆಬಿಸಿ ಕಡಿಮೆ ಮಾಡಲು ಸೃಷ್ಟಿಸಿರುವ ವಿಶೇಷ ಕಮಿಷನರ್ ಹುದ್ದೆಗೆ ಎಂಎ ಸಲೀಂ ನೇಮಕ: 11 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ವಿವಿಧ ಸಂಘಟನೆಗಳ ನೆರವಿನೊಂಗೆ ಜಿರೋ ಟ್ರಾಫಿಕ್ ಮೂಲಕ ನೆಲಮಂಗಲವರೆಗೂ ಆ್ಯಂಬುಲೆನ್ಸ್ ಬೇಗ ಬಂದಿತ್ತು. ಆ್ಯಂಬುಲೆನ್ಸ್​ ಚಾಲಕ ಮಧು ಪರಿಶ್ರಮದಿಂದ ಕೇವಲ ಒಂದೂವರೆ ಗಂಟೆಗೆಲ್ಲಾ ನೆಲಮಂಗಲ ತಲುಪಿದ್ದರು. ಆದರೆ ನೆಲಮಂಗಲದಿಂದ ಟ್ರಾಫಿಕ್ ನಡುವೆ ಸಿಲುಕಿ ದಾರಿಮಧ್ಯೆಯೇ ಬಿಟ್ಟ ಕಂದಮ್ಮ ಪ್ರಾಣ ಬಿಟ್ಟಿದೆ. ಮಗುವನ್ನು ಕಳೆದುಕೊಂಡು ನಡು ರಸ್ತೆಯಲ್ಲೇ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ತುರ್ತು ಸಂದರ್ಭಗಳಲ್ಲಿ ಪೊಲೀಸರು ಟ್ರಾಫಿಕ್ ಸರಿ ಮಾಡಲು ನೆರವಾಗಲಿ ಎಂದು ಆ್ಯಂಬುಲೆನ್ಸ್​ ಚಾಲಕ ಮನವಿ ಮಾಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:09 am, Fri, 3 February 23