ಬೆಂಗಳೂರಿನಲ್ಲಿ ಹೆಲ್ಮೆಟ್ ಧರಿಸದೆ ಬೈಕ್ ಓಡಿಸ್ತೀರಾ? ಕ್ಯಾಮೆರಾ ಇರುವ ಪ್ರತಿ ಸಿಗ್ನಲ್​​ನಲ್ಲೂ ದಂಡ ಕಟ್ಟಲು ಸಿದ್ಧರಾಗಿ !

Bangalore New Traffic Rules: ನಿಮ್ಮ ಬಳಿ ದ್ವಿಚಕ್ರ ವಾಹನ ಇದ್ದು ಬೆಂಗಳೂರಿನಲ್ಲಿದ್ದರೆ ಅಥವಾ ಬೆಂಗಳೂರಿನಲ್ಲಿ ನೆಲೆಸಿರುವವರಾಗಿದ್ದರೆ ಈ ಸುದ್ದಿ ಓದಲೇ ಬೇಕು. ಒಂದು ದಿನದಲ್ಲಿ ನೀವು ಹೆಲ್ಮೆಟ್ ಇಲ್ಲದೆ ಎಷ್ಟು ಸಿಗ್ನಲ್ ಕ್ರಾಸ್ ಮಾಡ್ತೀರೋ ಅಷ್ಟು ಬಾರಿ ದಂಡ ಪಾವತಿಸಲೇಬೇಕು. ಹೊಸ ನಿಯಮ ಜಾರಿ ಮಾಡಲಾಗಿದೆ.

ಬೆಂಗಳೂರಿನಲ್ಲಿ ಹೆಲ್ಮೆಟ್ ಧರಿಸದೆ ಬೈಕ್ ಓಡಿಸ್ತೀರಾ? ಕ್ಯಾಮೆರಾ ಇರುವ ಪ್ರತಿ ಸಿಗ್ನಲ್​​ನಲ್ಲೂ ದಂಡ ಕಟ್ಟಲು ಸಿದ್ಧರಾಗಿ !
ಸಾಂದರ್ಭಿಕ ಚಿತ್ರ
Follow us
TV9 Web
| Updated By: Rakesh Nayak Manchi

Updated on:Feb 02, 2023 | 11:09 PM

ಬೆಂಗಳೂರು: ನಗರದಲ್ಲಿ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಹೋಗುವವರ (Traffic rule violations in Bengaluru) ಸಂಖ್ಯೆ ಕಡಿಮೆಯಾಗಿಲ್ಲ. ಅದರಲ್ಲೂ ದ್ವಿಚಕ್ರ ವಾಹನ ಸವಾರರು, ಆಕಡೆ ಈಕಡೆ ನೋಡಿ ಪೊಲೀಸರು ಇಲ್ಲಾ ಎಂದು ಖಚಿತವಾಗುತ್ತಿದ್ದಂತೆ ಹೆಲ್ಮೆಟ್ (New Helmet Rules) ಇಲ್ಲದೆ ನೇರವಾಗಿ ಹೋಗುತ್ತಾರೆ. ಆದರೆ ಇನ್ನು ಮುಂದೆ ನೀವು ಹೀಗೆ ಹೋದರೆ ಒಂದೇ ದಿನ ಅನೇಕ ಬಾರಿ ದಂಡ ಕಟ್ಟಬೇಕಾಗಬಹುದು. ನೀವು ಬೆಂಗಳೂರಿನಲ್ಲಿ ಹೆಲ್ಮೆಟ್ ಧರಿಸದೆ ಬೈಕ್ ಓಡಿಸುತ್ತಿದ್ದೀರಿ ಎಂದಾದರೆ ಕ್ಯಾಮೆರಾ ಇರುವ ಪ್ರತಿ ಸಿಗ್ನಲ್​ನಲ್ಲೂ ದಂಡ ಕಟ್ಟಲು ಸಿದ್ಧರಾಗಿ. ಇದನ್ನು ಸರಳವಾಗಿ ಹೇಳುವುದಾದರೆ, ನೀವು ಹೆಲ್ಮೆಟ್ ಇಲ್ಲದೆ ಕ್ಯಾಮೆರಾ ಇರುವ ಮೂರು ಸಿಗ್ನಲ್​ಗಳನ್ನು ಕ್ರಾಸ್ ಮಾಡಿದರೆ ಮೂರು ಬಾರಿ ಪ್ರತ್ಯೇಕ ದಂಡ ಕಟ್ಟಬೇಕು. ಒಟ್ಟಾರೆಯಾಗಿ ಬೆಂಗಳೂರಿನಲ್ಲಿ ಒಟ್ಟು 50 ಜಂಕ್ಷನ್​ಗಳಲ್ಲಿ 280 ಎಎನ್​ಪಿಆರ್​ ಕ್ಯಾಮೆರಾಗಳನ್ನು (ANPR Camera) ಅಳವಡಿಸಲಾಗಿದೆ. ನೆನಪಿರಲಿ, ಹೆಲ್ಮೆಟ್ ರಹಿತ ಚಾಲನೆಯ ದಂಡದ ಮೊತ್ತ 500 ರೂಪಾಯಿ. ಒಂದು ದಿನದಲ್ಲಿ ನೀವು ಮೂರು ಬಾರಿ ಸಿಗ್ನಲ್ ಕ್ರಾಸ್ ಆದರೆ ಒಂದೂವರೆ ಸಾವಿರ ರೂಪಾಯಿ ದಂಡ ಪಾವತಿಸಬೇಕು.

ಈ ಹಿಂದೆ ಹೆಲ್ಮೆಟ್ ಇಲ್ಲದೇ ವಾಹನ ಚಲಾಯಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಾಗ ಒಂದು ಬಾರಿ ದಂಡ ಪಾವತಿಸಿದರೆ ಇಡೀ ದಿನಕ್ಕೆ ಸಾಕಿತ್ತು. ಆದರೆ ಇನ್ನು ಸ್ಥಿತಿ ಹಾಗಿರುವುದಿಲ್ಲ. ಈಗ ದ್ವಿಚಕ್ರ ವಾಹನದ ನಂಬರ್​ ಪ್ಲೇಟ್ ಸ್ಕ್ಯಾನ್ ಮಾಡುವ ಅತ್ಯಾಧುನಿಕ ಕ್ಯಾಮರಾಗಳು ಒಂದಷ್ಟು ಸಿಗ್ನಲ್​ಗಳಿಗೆ ಅಳವಡಿಸಿದ್ದಾರೆ. ಒಂದೊಮ್ಮೆ ನೀವು ಪೊಲೀಸರ ಕಣ್ಣು ತಪ್ಪಿಸಿ ಹೋದರೂ ಕೆಲವೊಂದು ಸಿಗ್ನಲ್​ಗಳಲ್ಲಿ ಇರುವ ಕ್ಯಾಮೆರಾ ಕಣ್ಣಿನಿಂದ ಮಾತ್ರ ತಪ್ಪಿಸಲು ಸಾಧ್ಯವಿಲ್ಲ. ದಂಡ ಕಟ್ಟಿಟ್ಟ ಬುತ್ತಿಯಾಗಿರಲಿದೆ.

ಇದನ್ನೂ ಓದಿ: Discount Offer: ಟ್ರಾಫಿಕ್ ಫೈನ್ ಕಟ್ಟುವವರಿಗೆ ಶೇಕಡಾ 50ರಷ್ಟು ರಿಯಾಯಿತಿ, ಅಂತಿಮ ದಿನಾಂಕ ಇಲ್ಲಿದೆ

ಈ ಬಗ್ಗೆ ವಿಶೇಷ ಸಂಚಾರ ಪೊಲೀಸ್ ಆಯುಕ್ತ ಎಂ.ಎ.ಸಲೀಂ ಮಾತನಾಡಿ, ಪ್ರತಿ ಪ್ರಕರಣವನ್ನು ಹೊಸ ಸಂಚಾರಿ ನಿಮಯ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಹೆಲ್ಮೆಟ್ ಇಲ್ಲದ ಸವಾರರು ಪ್ರತಿ ಎಎನ್​ಪಿಆರ್ ಕ್ಯಾಮೆರಾ ಇರುವ ಜಂಕ್ಷನ್ ಅನ್ನು ಹಾದು ಹೋದಾಗ ಅವರಿಗೆ ತಲಾ 500 ರೂ. ದಂಡ ವಿಧಿಸಲಾಗುತ್ತದೆ. ಎಎನ್​ಪಿಆರ್ ಕ್ಯಾಮೆರಾಗಳು ಅರ್ಧ ಹೆಲ್ಮೆಟ್ ಅಥವಾ ಕಳಪೆ ಗುಣಮಟ್ಟದ ಹೆಲ್ಮೆಟ್​ಗಳನ್ನು ಗುರುತಿಸುತ್ತವೆ. ಈ ಕ್ಯಾಮೆರಾಗಳ ಸಾಫ್ಟ್​ವೇರ್ ಅನ್ನು ಹೆಲ್ಮೆಟ್ ಇಲ್ಲದ ಸವಾರರು ಎಂದು ಗುರುತಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ಹೆಲ್ಮೆಟ್ ಧರಿಸದಿದ್ದಕ್ಕಾಗಿ ಸ್ವಯಂಚಾಲಿತವಾಗಿ ಚಲನ್ ಸಂಗ್ರಹಿಸುತ್ತದೆ ಎಂದಿದ್ದಾರೆ.

ಟ್ರಾಫಿಕ್ ದಂಡ ಪಾವತಿಸದವರಿಗೆ ರಿಯಾಯಿತಿ

ಸಂಚಾರ ನಿಯಮ ಉಲ್ಲಂಘನೆ ಮಾಡಿ ದಂಡ ಕಟ್ಟಲು ಬಾಕಿ ಇರುವವರು ಮತ್ತು ಪ್ರಕರಣ ಕೋರ್ಟ್​ನಲ್ಲಿ ಇದ್ದರೆ ಅಂತಹವರಿಗೆ ಸಾರಿಗೆ ಇಲಾಖೆ ಭರ್ಜರಿ ರಿಯಾಯಿತಿ ನೀಡುತ್ತಿದೆ. ಫೆಬ್ರವರಿ 11ರಂದು ಲೋಕ ಅದಾಲತ್ ನಡೆಯಲಿರುವ ಹಿನ್ನಲೆ ದಂಡ ಪಾವತಿಯಲ್ಲಿ ರಿಯಾಯಿತಿ ನೀಡುವಂತೆ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ವೀರಪ್ಪ ಅವರು ಮನವಿ ಮಾಡಿದ್ದರು. ಅದರಂತೆ ಶೇಕಡಾ 50ರಷ್ಟು ರಿಯಾಯಿತಿ ನೀಡಿ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿಯಿಂದ ಆದೇಶ ಹೊರಡಿಸಲಾಗಿದೆ. ಫೆ.11 ರ ಒಳಗಾಗಿ ಫೈನ್ ಕಟ್ಟುವವರು ಕಟ್ಟಬಹುದಾಗಿದೆ. ಫೆಬ್ರವರಿ 11ರನಂತರ ಸಂಪೂರ್ಣ ದಂಡದ ಮೊತ್ತ ಪಾವತಿಸಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:53 pm, Thu, 2 February 23