
ಬೆಂಗಳೂರು, ಜ.23: ಜನದಟ್ಟಣೆಗೆ ವಿಶ್ವಪ್ರಸಿದ್ಧಯನ್ನು ಪಡೆದಿರುವ ಬೆಂಗಳೂರು ಟ್ರಾಫಿಕ್ (Bengaluru traffic health) ಅನೇಕರಿಗೆ ಕಿರಿಕಿರಿಯನ್ನು ಉಂಟು ಮಾಡಿದ್ರೆ, ಈ ವ್ಯಕ್ತಿಯನ್ನು ಮಾತ್ರ ಆರೋಗ್ಯವಂತನಾಗಿ ಮಾಡಿದೆ ಎಂದು ಹೇಳಿದ್ದಾರೆ. ಜೀವನದಲ್ಲಿ ಆಗುವ ನಕಾರಾತ್ಮಕ ವಿಚಾರಗಳ ಬಗ್ಗೆ ತುಂಬಾ ತಲೆಬಿಸಿ ಮಾಡಿಕೊಳ್ಳಬಾರದು. ಅಂತಹ ವಿಷಯಗಳಿಂದ ಹೊಸ ದಾರಿಯನ್ನು ಕಂಡುಕೊಳ್ಳಬೇಕು ಎಂಬುದಕ್ಕೆ ಈ ವ್ಯಕ್ತಿ ಉದಾಹರಣೆ ನೋಡಿ. ಟ್ರಾಫಿಕ್ ತನ್ನನ್ನು ಆರೋಗ್ಯವಂತನನ್ನಾಗಿ ಮಾಡಿದೆ ಎಂದು ಈ ವ್ಯಕ್ತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಟೆಕ್ ಉದ್ಯೋಗಿ ಆಗಿರುವ ಇವರು, ವೈಟ್‌ಫೀಲ್ಡ್‌ನಿಂದ ಕೋರಮಂಗಲಕ್ಕೆ ದಿನನಿತ್ಯ 90 ನಿಮಿಷಗಳ ಕಾಲ ಟ್ರಾಫಿಕ್ ಮಧ್ಯೆ ಪ್ರಯಣ ಮಾಡುತ್ತಾರೆ. ಇದರಿಂದ ಬೇಸತ್ತು ಟ್ರಾಫಿಕ್ ವಿರುದ್ಧ ಹೋರಾಟ ನಿಲ್ಲಿಸಿ ತಮ್ಮ ಜೀವನಶೈಲಿಯನ್ನೇ ಬದಲಾಯಿಸಿದ್ದಾರೆ. ಈ ಬಗ್ಗೆ ರೆಡ್ಡಿಟ್‌ನಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಇದೊಂದು ಒಳ್ಳೆಯ ದಾರಿ ಎಂದು ನೆಟ್ಟಿಗರು ಹೇಳಿದ್ದಾರೆ.
ಬೆಂಗಳೂರಿನ ಟ್ರಾಫಿಕ್ ನನ್ನನ್ನು ನಿಜವಾಗಿಯೂ ಆರೋಗ್ಯವಂತರನ್ನಾಗಿ ಮಾಡಿದೆ ಎಂದು ತಾವು ಹಂಚಿಕೊಂಡಿರುವ ಪೋಸ್ಟ್ನಲ್ಲಿ ಹೇಳಿದ್ದಾರೆ. “ನಾನು ವೈಟ್‌ಫೀಲ್ಡ್‌ನಿಂದ ಕೋರಮಂಗಲಕ್ಕೆ ಪ್ರತಿದಿನ ಪ್ರಯಾಣಿಸುತ್ತೇನೆ. ಈ ಮಾರ್ಗದಲ್ಲಿ ಹೋಗಬೇಕಾದರೆ 90 ನಿಮಿಷ ಬೇಕಾಗುತ್ತಿತ್ತು. ಇದರಿಂದ ನಿರಂತರ ಒತ್ತಡ, ಊಟ ಕೂಡ ಸರಿಯಾಗಿ ಮಾಡುತ್ತಿರಲಿಲ್ಲ, ವ್ಯಾಯಾಮಕ್ಕೂ ಕೂಡ ಸಮಯವೇ ಇರಲಿಲ್ಲ. ಈ ಅನಾರೋಗ್ಯಕರ ಜೀವನಶೈಲಿಯಿಂದ ಬೇಸತ್ತು. ವಾರದಲ್ಲಿ ಮೂರು ದಿನ ಮನೆಯಿಂದಲೇ ಕೆಲಸ (WFH) ಮಾಡಲು ನಿರ್ಧರಿಸಿದೆ. ಡೆಲಿವರಿ ಆರ್ಡರ್ ಮಾಡುವ ಬದಲು ಹತ್ತಿರದ ರೆಸ್ಟೋರೆಂಟ್‌ಗಳಿಗೆ ನಡೆದುಕೊಂಡು ಹೋಗಿ ಊಟ ಮಾಡಲಾರಂಭಿಸಿದೆ. ಜೊತೆಗೆ, ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಮನೆಯ ಸಮೀಪದ ಜಿಮ್‌ಗೆ ಹೋಗುವ ಅಭ್ಯಾಸವನ್ನು ಕೂಡ ಬೆಳೆಸಿಕೊಂಡೆ. ಈ ರೀತಿಯ ಜೀವನಶೈಲಿಯಿಂದ ನನ್ನ ಆರೋಗ್ಯದಲ್ಲಿ ಬದಲಾವಣೆ ಆಗಿದೆ. ಆದರೆ ಟ್ರಾಫಿಕ್ ಸುಧಾರಿಸಲಿಲ್ಲ, ಅದರ ವಿರುದ್ಧ ಹೋರಾಡುವುದನ್ನು ನಿಲ್ಲಿಸಿ, ನಮ್ಮ ಆರೋಗ್ಯದ ಬಗ್ಗೆ ಗಮನ ನೀಡಿದೆ. ನನ್ನ ಈ ಜೀವನಶೈಲಿಯಿಂದ ಹೃದಯ ಬಡಿತ 82ರಿಂದ 64ಕ್ಕೆ ಇಳಿದಿದೆ. ಯಾವುದೇ ವಿಶೇಷ ಪ್ರಯತ್ನವಿಲ್ಲದೆ 8 ಕೆಜಿ ತೂಕವೂ ಕಡಿಮೆ ಮಾಡಿಕೊಂಡಿದ್ದೇನೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಗರೇ 3 ದಿನದ ರಜೆಯಲ್ಲಿ ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು: KSTDCನಿಂದ ವಿಶೇಷ ಪ್ಯಾಕೇಜ್
ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಈ ಬಗ್ಗೆ ಹಲವು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ನಿಮ್ಮ ಈ ಬದಲಾವಣೆಗೆ ಟ್ರಾಫಿಕ್ ಕಾರಣವಲ್ಲ, ವರ್ಕ್ ಫ್ರಮ್ ಹೋಮ್ ಮತ್ತು ಜೀವನಶೈಲಿ ಬದಲಾವಣೆಯೇ ಆರೋಗ್ಯ ಸುಧಾರಣೆಗೆ ಕಾರಣ ಎಂದು ಹೇಳಿದ್ದಾರೆ. ಟ್ರಾಫಿಕ್ ನಿಮ್ಮನ್ನು ಆರೋಗ್ಯವಂತರನ್ನಾಗಿ ಮಾಡಲಿಲ್ಲ ವರ್ಕ್ ಫ್ರಮ್ ಹೋಮ್ ನಿಮ್ಮ ಆರೋಗ್ಯವನ್ನು ಬದಲಾವಣೆ ಮಾಡಿದೆ. ನಿಮ್ಮ ಆಹಾರ ಪದ್ಧತಿ, ಹಾಗೂ ಜಿಮ್ ಮಾಡಲು ಸಮಯ ಸಿಕ್ಕಿದೆ. ಆ ಕಾರಣ ಈ ಬದಲಾವಣೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ನಾನು ನನ್ನ ಬೈಕ್ ಮಾರಿದ್ದೇನೆ. ಈಗ ಎಲ್ಲೆಡೆ ನಡೆದುಕೊಂಡೇ ಹೋಗುತ್ತೇನೆ. ನನ್ನ ಕೊಲೆಸ್ಟ್ರಾಲ್ ಮಟ್ಟಗಳು ಸಹಜ ಸ್ಥಿತಿಗೆ ಬಂದಿವೆ ಎಂದು ಮತ್ತೊಬ್ಬರು ಹೇಳಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ