ಕರ್ನಾಟಕದ ಈ ರೈಲುಗಳು ಎರಡು ದಿನ ರದ್ದು ಮತ್ತು ಮಾರ್ಗ ಬದಲಾವಣೆ
ನೈಋತ್ಯ ರೈಲ್ವೆಯು ಎರಡು ದಿನಗಳ ಕಾಲ ಬೆಂಗಳೂರಿನಲ್ಲಿನ ಬೈಯ್ಯಪ್ಪನಹಳ್ಳಿ ಯಾರ್ಡ್‌ನಲ್ಲಿ ಸುರಕ್ಷತೆ ಸಂಬಂಧಿತ ಮತ್ತು ಸಿಗ್ನಲ್ ನಿರ್ವಹಣಾ ಕಾರ್ಯವನ್ನು ಕೈಗೊಳ್ಳಲಿದೆ. ಹೀಗಾಗಿ ಹಲವು ರೈಲುಗಳ ಸಂಚಾರ ರದ್ದಾಗಲಿದೆ ಮತ್ತು ಭಾಗಶಃ ರದ್ದಾಗಲಿದೆ. ಕೆಲವು ರೈಲುಗಳ ಮಾರ್ಗಗಳನ್ನು ಬದಲಾಯಿಸಲಾಗಿದೆ.
ಎಸ್ಎಮ್ವಿಟಿ ಬೆಂಗಳೂರು ರೈಲು ನಿಲ್ದಾಣ
ಬೆಂಗಳೂರು, ನವೆಂಬರ್ 26: ಕರ್ನಾಟಕ ಕೆಲ ರೈಲುಗಳ (Train) ಸಂಚಾರ ಬುಧವಾರ ಮತ್ತು ಗುರುವಾರ ರದ್ದಾಗಲಿವೆ. ಸಾಮಾಜಿಕ ಮಾಧ್ಯಮ ಎಕ್ಸ್ ಮುಖಾಂತರ ನೈಋತ್ಯ ರೈಲ್ವೆ (SWR) ತಿಳಿಸಿದೆ. ನೈಋತ್ಯ ರೈಲ್ವೆಯ ಬೆಂಗಳೂರು (Bengaluru) ವಿಭಾಗವು ನವೆಂಬರ್ 27 ಮತ್ತು 28 ರಂದು ಬೈಯ್ಯಪ್ಪನಹಳ್ಳಿ ಯಾರ್ಡ್‌ನಲ್ಲಿ ಸುರಕ್ಷತೆ ಸಂಬಂಧಿತ ಮತ್ತು ಸಿಗ್ನಲ್ ನಿರ್ವಹಣಾ ಕಾರ್ಯವನ್ನು ಕೈಗೊಳ್ಳಲಿದೆ. ಹೀಗಾಗಿ ಕೆಲ ರೈಲುಗಳ ಸಂಚಾರ ರದ್ದು, ಭಾಗಶಃ ರದ್ದು ಮತ್ತು ಮಾರ್ಗ ಬದಲಾವಣೆ ಮಾಡಿದೆ.
ರೈಲುಗಳ ರದ್ದು
- ರೈಲು ಸಂಖ್ಯೆ 06538 ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ ಮೆಮು ವಿಶೇಷ, ಚಿಕ್ಕಬಳ್ಳಾಪುರ-ಬೆಂಗಳೂರು ಮೆಮು (ರೈಲು ಸಂಖ್ಯೆ 06532) ವಿಶೇಷ, ಮತ್ತು ಬಂಗಾರಪೇಟೆ-ಎಸ್ಎಮ್ವಿಟಿ ಬೆಂಗಳೂರು ಮೆಮು (ರೈಲು ಸಂಖ್ಯೆ 06527) ವಿಶೇಷ ರೈಲುಗಳು ನವೆಂಬರ್ 27 ರಂದು ರದ್ದಾಗಲಿದೆ.
- ರೈಲು ಸಂಖ್ಯೆ 06528 ಎಮ್ವಿಟಿ ಬೆಂಗಳೂರು-ಬಂಗಾರಪೇಟೆ ಮೆಮು ವಿಶೇಷ ರೈಲು ನವೆಂಬರ್ 28 ರದ್ದಾಗಲಿದೆ.
ಭಾಗಶಃ ರದ್ದು
- ರೈಲು ಸಂಖ್ಯೆ 16521 ಬಂಗಾರಪೇಟೆ-ಕೆಎಸ್ಆರ್ ಬೆಂಗಳೂರು ಕಾಯ್ದಿರಿಸದ ಮೆಮು ಎಕ್ಸ್‌ಪ್ರೆಸ್ ನವೆಂಬರ್ 27 ರಂದು ಕೃಷ್ಣರಾಜಪುರಂ ಮತ್ತು ಕೆಎಸ್ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ.
ರೈಲು ಸಂಖ್ಯೆ 16530 ಕಾರೈಕಲ್-ಎಸ್ಎಮ್ವಿಟಿ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ ಬೆಳಂದೂರು ರಸ್ತೆ ಮತ್ತು ಎಸ್ಎಮ್ವಿಟಿ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ.
- ರೈಲು ಸಂಖ್ಯೆ 06270 ಎಸ್ಎಮ್ವಿಟಿ ಬೆಂಗಳೂರು-ಮೈಸೂರು ಡೈಲಿ ಪ್ಯಾಸೆಂಜರ್ ವಿಶೇಷ ರೈಲು ಎಸ್ಎಮ್ವಿಟಿ ಬೆಂಗಳೂರು ಮತ್ತು ಕೆಎಸ್ಆರ್ ಬೆಂಗಳೂರು ನಡುವೆ ಭಾಗಶಃ ರದ್ದಾಗಲಿದೆ. ಮತ್ತು ಇದು ಎಸ್ಎಮ್ವಿಟಿ ಬದಲಿಗೆ ಕೆಎಸ್ಆರ್ ಬೆಂಗಳೂರಿನಿಂದ 30 ನಿಮಿಷ ತಡವಾಗಿ ಹೊರಡಲಿದೆ.
ಇದನ್ನೂ ಓದಿ: ಹುಬ್ಬಳ್ಳಿಯಿಂದ ಶಬರಿಮಲೆಗೆ ವಿಶೇಷ ರೈಲು: ವೇಳಾಪಟ್ಟಿ ಮತ್ತು ನಿಲ್ದಾಣಗಳ ಮಾಹಿತಿ ಇಲ್ಲಿದೆ
ಮಾರ್ಗ ಬದಲಾವಣೆ
- ರೈಲು ಸಂಖ್ಯೆ 11021 ದಾದರ್-ತಿರುನೆಲ್ವೇಲಿ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್, ನವೆಂಬರ್ 26 ರಂದು ಚಿಕ್ಕಬಾಣಾವರ, ಬಾಣಸವಾಡಿ, ಬೈಯ್ಯಪ್ಪನಹಳ್ಳಿ, ಕರ್ಮೇಲರಂ ಮತ್ತು ಹೊಸೂರು ಮೂಲಕ ಸಂಚರಿಸುತ್ತದೆ. ಎಸ್ಎಮ್ವಿಟಿ ಬೆಂಗಳೂರಿನಲ್ಲಿ ನಿಲ್ಲುವುದಿಲ್ಲ. ಅಂದು ಈ ರೈಲು ಬಾಣಸವಾಡಿ ನಿಲ್ದಾಣದಲ್ಲಿ ನಿಲುಗಡೆಯಾಗುತ್ತದೆ. (ರಾತ್ರಿ 08:50ಕ್ಕೆ ನಿಲ್ದಾಣಕ್ಕೆ ಆಗಮಿಸಿ ಮತ್ತು ರಾತ್ರಿ08:52ಕ್ಕೆ ನಿರ್ಗಮಿಸುತ್ತದೆ) ಮಾರ್ಗ ಬದಲಿಸಲಾಗಿದೆ.
- ರೈಲು ಸಂಖ್ಯೆ 11302 ಕೆಎಸ್ಆರ್ ಬೆಂಗಳೂರು-ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್, ಮುಂಬೈ ಡೈಲಿ ಎಕ್ಸ್‌ಪ್ರೆಸ್, ನವೆಂಬರ್ 27 ಕೆಎಸ್ಆರ್ ಬೆಂಗಳೂರು, ಯಶವಂತಪುರ ಮತ್ತು ಯಲಹಂಕ ಮೂಲಕ ಸಂಚರಿಸುತ್ತದೆ.
- ರೈಲು ಸಂಖ್ಯೆ 16236 ಮೈಸೂರು-ತುಟಿಕೋರಿನ್ ಡೈಲಿ ಎಕ್ಸ್‌ಪ್ರೆಸ್, ನವೆಂಬರ್ 27 ರಂದು ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ಬಾಣಸವಾಡಿ ಮತ್ತು ಕರ್ಮೇಲಾರಂ ನಿಲ್ದಾಣಗಳ ಮೂಲಕ ಸಂಚರಿಸುತ್ತದೆ.
ರೈಲು ಸಂಖ್ಯೆ 06269 ಮೈಸೂರು-ಎಸ್ಎಮ್ವಿಟಿ ಬೆಂಗಳೂರು ಡೈಲಿ ಪ್ಯಾಸೆಂಜರ್ ವಿಶೇಷ, ನವೆಂಬರ್ 27 ರಂದು ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ಹೆಬ್ಬಾಳ, ಬಾಣಸವಾಡಿ, ಮತ್ತು ಎಸ್ಎಮ್ವಿಟಿ ಮೂಲಕ ಸಂಚರಿಸುತ್ತದೆ.
- ರೈಲು ಸಂಖ್ಯೆ 15227 ಎಸ್ಎಮ್ವಿಟಿ ಬೆಂಗಳೂರು-ಮುಜಫರ್‌ಪುರ ವೀಕ್ಲಿ ಎಕ್ಸ್‌ಪ್ರೆಸ್, ನವೆಂಬರ್ 28 ರಂದು ಪ್ರಾರಂಭವಾಗುವ ಪ್ರಯಾಣವನ್ನು ಎಸ್ಎಮ್ವಿಟಿ ಬೆಂಗಳೂರಿನಿಂದ 225 ನಿಮಿಷಗಳವರೆಗೆ ಮರುಹೊಂದಿಸಲಾಗುತ್ತದೆ.
ಟ್ವಿಟರ್ ಪೋಸ್ಟ್
ರೈಲುಗಳ ನಿಯಂತ್ರಣ
- ರೈಲು ಸಂಖ್ಯೆ 12835 ಹಟಿಯಾ-ಎಸ್ಎಮ್ವಿಟಿ ಬೆಂಗಳೂರು ಬೈ-ವೀಕ್ಲಿ ಎಕ್ಸ್‌ಪ್ರೆಸ್, ನವೆಂಬರ್ 26 ರಂದು ಮಾರ್ಗದಲ್ಲಿ 60 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
- ರೈಲು ಸಂಖ್ಯೆ 16021 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ಬೈ-ವೀಕ್ಲಿ ಎಕ್ಸ್‌ಪ್ರೆಸ್, ನವೆಂಬರ್ 27 ರಂದು ಮಾರ್ಗದಲ್ಲಿ 60 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
- ರೈಲು ಸಂಖ್ಯೆ 16594 ನಾಂದೇಡ್-ಕೆಎಸ್ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್, 16220 ತಿರುಪತಿ-ಚಾಮರಾಜನಗರ ಡೈಲಿ ಎಕ್ಸ್‌ಪ್ರೆಸ್, 12683 ಎರ್ನಾಕುಲಂ-ಎಸ್‌ಎಂವಿಟಿ ಬೆಂಗಳೂರು ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್, ಮತ್ತು 12657 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್-ಕೆಎಸ್‌ಆರ್ ಬೆಂಗಳೂರು ಡೈಲಿ ಸೂಪರ್‌ಫಾಸ್ಟ್ ನವೆಂಬರ್ 27 ರಂದು 30 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:35 am, Tue, 26 November 24