Vegetable Price: ಬೆಂಗಳೂರಿನಲ್ಲಿ ಗಗನಕ್ಕೇರಿದ ತರಕಾರಿ ದರ, ದುಪ್ಪಟ್ಟಾಯ್ತು ಟೊಮೆಟೊ ಬೆಲೆ

ಬೆಂಗಳೂರಿನಲ್ಲಿ ತರಕಾರಿ ಹಾಗೂ ಸೊಪ್ಪಿನ ಬೆಲೆಗಳು ಗಣನೀಯವಾಗಿ ಏರಿಕೆಯಾಗಿವೆ. ಟೊಮೆಟೊ ಬೆಲೆ ಕೆ.ಜಿಗೆ 25 ರೂ.ನಿಂದ 54 ರೂ.ಗೆ ಹಾಗೂ ಬೀನ್ಸ್ ಬೆಲೆ 70 ರೂ.ನಿಂದ 96 ರೂ.ಗೆ ಹೆಚ್ಚಾಗಿದೆ. ಅಕಾಲಿಕ ಮಳೆ ಮತ್ತು ಅಧಿಕ ತಾಪಮಾನದಿಂದ ಬೆಳೆ ಹಾನಿಯಾಗಿರುವುದು, ಪೂರೈಕೆ ಕೊರತೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

Vegetable Price: ಬೆಂಗಳೂರಿನಲ್ಲಿ ಗಗನಕ್ಕೇರಿದ ತರಕಾರಿ ದರ, ದುಪ್ಪಟ್ಟಾಯ್ತು ಟೊಮೆಟೊ ಬೆಲೆ
ಸಾಂದರ್ಭಿಕ ಚಿತ್ರ
Image Credit source: PTI
Edited By:

Updated on: Oct 07, 2026 | 8:52 AM

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ತರಕಾರಿ ಬೆಲೆ ದಿಢೀರ್ ಏರಿಕೆ
  • ಟೊಮೆಟೊ ಬೆಲೆ ಕೆಜಿಗೆ 54 ರೂಪಾಯಿ
  • ಸೊಪ್ಪಿನ ಬೆಲೆ ದುಪ್ಪಟ್ಟಾಗಿ ಗ್ರಾಹಕರಿಗೆ ಹೊರೆ

ಬೆಂಗಳೂರು, ಅಕ್ಟೋಬರ್ 7: ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ತರಕಾರಿ ಹಾಗೂ ಸೊಪ್ಪಿನ ಬೆಲೆಗಳು ಗಣನೀಯವಾಗಿ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಹೊರೆ ಹೆಚ್ಚಾಗಿದೆ. ಟೊಮೆಟೊ, ಬೀನ್ಸ್ ಸೇರಿದಂತೆ ಹಲವು ತರಕಾರಿಗಳ ಬೆಲೆ ದಿಢೀರ್ ಏರಿಕೆಯಾಗಿದೆ. ಪರಿಣಾಮವಾಗಿ ಕೆಲವು ಚಿಲ್ಲರೆ ವ್ಯಾಪಾರಿಗಳು ತರಕಾರಿಗಳನ್ನು ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯೂ ಮಾರುಕಟ್ಟೆ ಮೂಲಗಳಿಂದ ಲಭ್ಯವಾಗಿದೆ.

ದುಪ್ಪಟ್ಟಾದ ಟೊಮೆಟೊ ಬೆಲೆ: ಬೀನ್ಸ್ ಕೂಡ ದುಬಾರಿ

ಕಳೆದ ವಾರ ಕೆ.ಜಿ.ಗೆ 25 ರೂ. ಇದ್ದ ಟೊಮೆಟೊ ಬೆಲೆ ಇದೀಗ 54 ರೂ.ಗೆ ಏರಿಕೆಯಾಗಿದೆ. ಬೀನ್ಸ್ ಬೆಲೆ 70 ರೂ.ನಿಂದ 96 ರೂ.ಗೆ ಹೆಚ್ಚಾಗಿದೆ. ಬಿಳಿ ಬದನೆಕಾಯಿ, ಕ್ಯಾಪ್ಸಿಕಂ, ಗೋರಿಕಾಯಿ, ಸೌತೆಕಾಯಿ, ಮೂಲಂಗಿ ಹಾಗೂ ಬೀಟ್‌ರೂಟ್ ಬೆಲೆಯಲ್ಲೂ ಏರಿಕೆಯಾಗಿದೆ.

ತರಕಾರಿ ಬೆಲೆ ಏರಿಕೆಗೆ ಕಾರಣವೇನು?

ಅಕಾಲಿಕ ಮಳೆ ಹಾಗೂ ಅಧಿಕ ತಾಪಮಾನದಿಂದ ಬೆಳೆಗಳಿಗೆ ಹಾನಿಯಾಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಹಲವು ಪ್ರದೇಶಗಳಲ್ಲಿ ಬೆಳೆ ಕೊಳೆತುಹೋಗಿದ್ದು, ಮಾರುಕಟ್ಟೆಗೆ ತರಕಾರಿ ಪೂರೈಕೆ ಕಡಿಮೆಯಾಗಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೊಪ್ಪು ತರಕಾರಿಯೂ ತುಟ್ಟಿ

ಸೊಪ್ಪಿನ ಬೆಲೆಯೂ ಇದೇ ಕಾರಣದಿಂದ ಹೆಚ್ಚಾಗಿದೆ. ಪಾಲಕ್, ಕೊತ್ತಂಬರಿ ಸೊಪ್ಪು, ಪುದೀನಾ, ಸಬ್ಬಕ್ಕಿ ಸೊಪ್ಪು, ಗೊಂಗೂರ ಸೇರಿದಂತೆ ಹಲವು ಸೊಪ್ಪುಗಳ ಬೆಲೆ ದುಪ್ಪಟ್ಟಾಗಿದೆ. 8ರಿಂದ 10 ರೂ.ಗೆ ಸಿಗುತ್ತಿದ್ದ ಒಂದು ಕಟ್ಟು ಸೊಪ್ಪಿನ ಬೆಲೆ ಇದೀಗ 25ರಿಂದ 30 ರೂ.ಗೆ ಏರಿಕೆಯಾಗಿದೆ. ಪಾಲಕ್ ಸೊಪ್ಪಿನ ಬೆಲೆ ಕೂಡ ಒಂದು ಕಟ್ಟಿಗೆ 10 ರೂ.ನಿಂದ 25 ರೂ.ಗೆ ಹೆಚ್ಚಾಗಿದೆ.

ಇದನ್ನೂ ಓದಿ: ದಸರಾ, ದೀಪಾವಳಿ ಹೊತ್ತಲ್ಲೇ ಜನರಿಗೆ ಬೆಲೆ ಏರಿಕೆ ಶಾಕ್: ಪ್ರತಿ ಲೀ ಹಾಲಿನ ದರ 8 ರೂ. ಹೆಚ್ಚಳ

ಇನ್ನು ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಮಳೆಯ ಮುನ್ಸೂಚನೆಯೂ ಇರುವುದರಿಂದ ತರಕಾರಿ ಬೆಲೆಗಳು ಇನ್ನೂ ಕೆಲಕಾಲ ಏರಿಕೆಯಾಗಿಯೇ ಇರಬಹುದು ಎಂದು ಎಪಿಎಂಸಿ ವರ್ತಕರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:42 am, Wed, 7 October 26

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us