ಬೆಂಗಳೂರು ಜಲ ಮಂಡಳಿ
ಬೆಂಗಳೂರು, ಮಾರ್ಚ್ 09: ಬೆಂಗಳೂರು ನಗರ ಮತ್ತು ಹೊರವಲಯದಲ್ಲಿ ನೀರಿನ ಬಿಕ್ಕಟ್ಟು (Bengaluru Water Crisis) ತೀವ್ರಗೊಂಡಿದೆ. ಇನ್ನೇನು ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಈ ವರ್ಷ ಕುಡಿಯುವ ನೀರಿಗೂ ಹಲವೆಡೆ ಸಮಸ್ಯೆ ಎದುರಾಗಿದೆ. ಈ ನೀರಿನ ಸಮಸ್ಯೆಯನ್ನು ಬಗೆಹರಿಸಲು ಜಲಮಂಡಳಿ (Bangaluru Water Supply and Sewerage Board) ಕೆರೆಗಳ (Lake) ಮೊರೆ ಹೋಗಿದೆ. ಐಐಎಸ್ಸಿ ಸಹಯೋಗದಲ್ಲಿ ಬೆಂಗಳೂರಿನ ಎಂಟು ಕೆರೆಗಳಲ್ಲಿ ಫಿಲ್ಟರ್ ಬೋರ್ ವೆಲ್ ಅಳವಡಿಸಲು ತಯಾರಿ ನಡೆಸಿದೆ. ಅದರಂತೆ ಮೊದಲಿಗೆ ನಾಯಂಡಹಳ್ಳಿ ಕೆರೆ, ಚಿಕ್ಕ ಬಾಣವಾರ ಕೆರೆ, ವರ್ತೂರು ಕೆರೆ ಸೇರಿದಂತೆ ಎಂಟು ಕೆರಳ ನೀರನ್ನು 10 ರಿಂದ 15 ದಿನಗಳಲ್ಲಿ ಸಂಗ್ರಹಿಸಲಾಗುತ್ತಾದೆ. ಬಳಿಕ ತಜ್ಞರು ನೀರಿನ ಗುಣಮಟ್ಟ ಪರಿಶೀಲಿಸಲಿದ್ದಾರೆ.
ತಜ್ಞರ ಪರೀಕ್ಷೆಯಲ್ಲಿ ನೀರು ಕುಡಿಯಲು ಯೋಗ್ಯವೆಂದು ವರದಿ ಬಂದರೇ, ಬಳಿಕ ಬೋರ್ವೆಲ್ ಕೊರೆಯಲಾಗುತ್ತದೆ. ನಂತರ ನೀರು ಶುದ್ಧೀಕರಣ ಮಾಡಿ, ಬಳಿಕ ಮನೆ ಮನೆಗೆ ಸರಬರಾಜು ಮಾಡಲಾಗುತ್ತದೆ ಎಂದು ಜಲಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಟ್ಯಾಂಕರ್ ನೀರಿಗೆ ದರ ನಿಗದಿಪಡಿಸಿ ಜಿಲ್ಲಾಡಳಿತ ಆದೇಶ
ಟ್ಯಾಂಕರ್ ಮಾಲೀಕರ ಜೊತೆ ಮೂರ್ನಾಲ್ಕು ಬಾರಿ ಸಭೆ ನಡೆಸಿದ ನಂತರ ಜಿಲ್ಲಾಡಳಿತ ಬೆಲೆ ನಿಗದಿ ಮಾಡಿ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಮುಖ್ಯಮಂತ್ರಿಗಳ ಗೃಹಕಚೇರಿಗೂ ತಟ್ಟಿದ ನೀರಿನ ಬಿಸಿ; ಟ್ಯಾಂಕರ್ನಲ್ಲಿ ನೀರು ಪೂರೈಕೆ
ಟ್ಯಾಂಕರ್ ನೀರಿನ ದರ ವಿವರ ಇಲ್ಲಿದೆ
- 6 ಸಾವಿರ ಲೀಟರ್ ಟ್ಯಾಂಕರ್ಗೆ 600 ರೂ. ದರ ನಿಗದಿ. ಇದು 5 ಕಿಲೋ ಮೀಟರ್ ಒಳಗಡೆಗೆ ಮಾತ್ರ ಅನ್ವಯವಾಗಲಿದೆ.
- 6 ಸಾವಿರ ಲೀಟರ್ ಟ್ಯಾಂಕರ್ ಗೆ 750 ರೂ. ದರ ನಿಗದಿ. ಇದು 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅನ್ವಯವಾಗಲಿದೆ.
- 8 ಸಾವಿರ ಲೀಟರ್ ಟ್ಯಾಂಕರ್ಗೆ 700 ರೂ. ದರ ನಿಗದಿ ಮಾಡಲಾಗಿದ್ದು, ಇದು 5 ಕಿಲೋ ಮೀಟರ್ ಒಳಗೆ ಅನ್ವಯವಾಗಲಿದೆ.
- 8 ಸಾವಿರ ಲೀಟರ್ಗೆ 850 ರೂ. ದರ ನಿಗದಿ ಮಾಡಲಾಗಿದ್ದು, 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಈ ದರ ಪಡೆಯಬಹುದಾಗಿದೆ.
- 5 ಕಿಲೋ ಮೀಟರ್ ವ್ಯಾಪ್ತಿಗೆ 1,200 ಲೀಟರ್ ಟ್ಯಾಂಕರ್ಗೆ 1000 ರೂ. ದರ ನಿಗದಿ ಮಾಡಲಾಗಿದೆ.
- 1200 ಲೀಟರ್ ಟ್ಯಾಂಕರ್ಗೆ 1200 ರೂ. ದರ ಫಿಕ್ಸ್ ಮಾಡಲಾಗಿದ್ದು 10 ಕಿಲೋ ಮೀಟರ್ ವ್ಯಾಪ್ತಿಗೆ ಅನ್ವಯವಾಗಲಿದೆ.
- ಜಿಎಸ್ಟಿ ಸೇರಿಸಿ ಈ ದರ ಫಿಕ್ಸ್ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ತಿಂಗಳ ಬಾಡಿಗೆ ಒಪ್ಪಿಕೊಳ್ಳುವವರಿಗೆ 5 ಕಿಲೋ ಮೀಟರ್ಗೆ 510 ರೂ. ನಿಗದಿಪಡಲಾಗಿದೆ. 10 ಕಿಲೋ ಮೀಟರ್ ಹೋದರೆ 650 ರೂ. ದರ ಫಿಕ್ಸ್ ಮಾಡಲಾಗಿದೆ.
- ಜಿಎಸ್ಟಿ ಸೇರಿಸಿ ಈ ದರ ಫಿಕ್ಸ್ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ತಿಂಗಳ ಬಾಡಿಗೆ ಒಪ್ಪಿಕೊಳ್ಳುವವರಿಗೆ 5 ಕಿಲೋ ಮೀಟರ್ಗೆ 510 ರೂ. ನಿಗದಿಪಡಲಾಗಿದೆ. 10 ಕಿಲೋ ಮೀಟರ್ ಹೋದರೆ 650 ರೂ. ದರ ಫಿಕ್ಸ್ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ