
ಬೆಂಗಳೂರು, ಆಗಸ್ಟ್ 25: ಸಿಲಿಕಾನ್ ಸಿಟಿಯ ಹೃದಯ ಭಾಗದಲ್ಲಿರುವ ಜೆ.ಸಿ ರಸ್ತೆಯಲ್ಲಿ (J C road) ಕಳೆದ ಕೆಲ ತಿಂಗಳಿನಿಂದ ರಸ್ತೆ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ನಿತ್ಯ ಸಂಚರಿಸುವ ವಾಹನ ಸವಾರರು ಪರದಾಡುವಂತಾಗಿದೆ. ಇದೀಗ ಜೆ.ಸಿ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ (White tapping work) ನಡೆಯುತ್ತಿದ್ದು, ಇಂದಿನಿಂದ (ಆ. 25) ಆಗಸ್ಟ್ 30ರ ವರೆಗೆ ಈ ರಸ್ತೆಯಲ್ಲಿ ಭಾರಿ ಗಾತ್ರದ ವಾಹನಗಳು ಸೇರಿದಂತೆ ಬಸ್ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಈ ಕುರಿತಾಗಿ ಬೆಂಗಳೂರು ಪಶ್ಚಿಮ ವಲಯ ಸಂಚಾರಿ ಪೊಲೀಸರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ವೈಟ್ ಟಾಪಿಂಗ್ ಕಾಮಗಾರಿ ಹಿನ್ನಲೆ ಜೆ.ಸಿ ರಸ್ತೆಯಲ್ಲಿ ಭಾರಿ ಗಾತ್ರದ ವಾಹನಗಳು ಸೇರಿದಂತೆ ಬಸ್ ಸಂಚಾರಕ್ಕೆ ನಿರ್ಬಂಧ ಹೇರಿದ್ದು, ಜೊತೆಗೆ ಪರ್ಯಾಯ ಮಾರ್ಗಗಳನ್ನು ತಿಳಿಸಲಾಗಿದೆ.
“Traffic Advisory” #ಸಂಚಾರಸಲಹೆ White tapping work is going on J C road @citymarkettrps@CPBlr@Jointcptraffic @BlrCityPolice @blrcitytraffic pic.twitter.com/l1ojNq3NiV
— DCP TRAFFIC WEST (@DCPTrWestBCP) August 24, 2025
ಇದನ್ನೂ ಓದಿ: ಬೆಂಗಳೂರಿನಲ್ಲಿ ವಿಳಂಬ ಕಾಮಗಾರಿಗಳಿಂದ ಅವಾಂತರ: ಸರ್ಕಾರಕ್ಕೆ ಹೋಟೆಲ್ ಉದ್ಯಮಿಗಳಿಂದ ಪತ್ರ, 50% ತೆರಿಗೆ ವಿನಾಯಿತಿಗೆ ಆಗ್ರಹ
ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಜೆ.ಸಿ ರಸ್ತೆಯಲ್ಲಿ ಅತಿಹೆಚ್ಚು ವಾಹನಗಳ ಸಂಚಾರದಿಂದಾಗಿ ಕಾಮಗಾರಿಯಲ್ಲಿ ವಿಳಂಬವಾಗುತ್ತಿದೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಸದ್ಯ ರಸ್ತೆಯ ಅವ್ಯವಸ್ಥೆಯಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ಆಮೆಗತಿಯ ಈ ಕಾಮಗಾರಿಯನ್ನು ವೇಗವಾಗಿ ಮಾಡುವಂತೆ ಬಿಬಿಎಂಪಿಗೆ ಜನರು ಒತ್ತಾಯಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:24 am, Mon, 25 August 25