ಓಣಂ ಹಬ್ಬದ ಕೊನೇ ಕ್ಷಣದಲ್ಲಿ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಿಂದ ಸೀರೆ ಆರ್ಡರ್ ಮಾಡಿದ ಮಹಿಳೆ, ಎಕ್ಸ್​ನಲ್ಲಿ ಭಾರೀ ಚರ್ಚೆ

|

Updated on: Sep 17, 2024 | 11:35 AM

ಬೆಂಗಳೂರಿನ ಮಹಿಳೆಯೊಬ್ಬರು ಕೊನೇ ಕ್ಷಣದಲ್ಲಿ ಓಣಂ ಹಬ್ಬಕ್ಕೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಿಂದ ಸೀರೆಯನ್ನು ಆರ್ಡರ್ ಮಾಡಿ ಸೀರೆ ಖರೀದಿಸಿದ್ದಾರೆ. ಈ ಬಗ್ಗೆ X ಬಳಕೆದಾರರಾದ, ನೀರ್ಜಾ ಶಾ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಇದು ಸಾವಿರಾರು ನೆಟ್ಟಿಗರ ಗಮನ ಸೆಳೆದಿದೆ.

ಓಣಂ ಹಬ್ಬದ ಕೊನೇ ಕ್ಷಣದಲ್ಲಿ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಿಂದ ಸೀರೆ ಆರ್ಡರ್ ಮಾಡಿದ ಮಹಿಳೆ, ಎಕ್ಸ್​ನಲ್ಲಿ ಭಾರೀ ಚರ್ಚೆ
ಸ್ವಿಗ್ಗಿ
Follow us on

ಬೆಂಗಳೂರು, ಸೆ.17: ಇಡೀ ದೇಶದಾದ್ಯಂತ ಓಣಂ ಹಬ್ಬವನ್ನು (Onam) ಸಂಭ್ರಮದಿಂದ ಆಚರಿಸಲಾಗಿದೆ. ಮನೆಯಲ್ಲಿ ಹಬ್ಬ ಆಚರಿಸಲು ಎಲ್ಲಾ ರೀತಿಯಲ್ಲೂ ತಯಾರಿ ನಡೆಸಿ ಕೊನೆಯ ಕ್ಷಣದಲ್ಲಿ ಶಾಪಿಂಗ್ ಮಾಡುವುದು ಭಾರತೀಯರಲ್ಲಿ ಸಾಮಾನ್ಯ. ಇದೇ ರೀತಿ ಬೆಂಗಳೂರಿನ ಮಹಿಳೆಯೊಬ್ಬರು ಕೊನೇ ಕ್ಷಣದಲ್ಲಿ ಓಣಂ ಹಬ್ಬಕ್ಕೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಿಂದ ಸೀರೆಯನ್ನು ಆರ್ಡರ್ ಮಾಡಿ ಸೀರೆ ಖರೀದಿಸಿದ್ದಾರೆ. ಈ ಬಗ್ಗೆ X ಬಳಕೆದಾರರಾದ, ನೀರ್ಜಾ ಶಾ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಇದು ಸಾವಿರಾರು ನೆಟ್ಟಿಗರ ಗಮನ ಸೆಳೆದಿದೆ.

ನೀರ್ಜಾ ಶಾ ಅವರ ಟ್ವೀಟ್ ಹೀಗಿದೆ

”ಓಣಂ ಹಬ್ಬಕ್ಕಾಗಿ ಕಡೇ ಕ್ಷಣದಲ್ಲಿ @SwiggyInstamart ನಲ್ಲಿ ಮಧ್ಯರಾತ್ರಿ 12 ಗಂಟೆಗೆ ಸೀರೆಯನ್ನು ಆರ್ಡರ್ ಮಾಡಿದೆ. I love Bangalore istg.” ಎಂದು ನೀರ್ಜಾ ಶಾ ಅವರು ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಈ ಪೋಸ್ಟ್ ಅನ್ನು ಸೆಪ್ಟೆಂಬರ್ 15 ರಂದು ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದ ನಂತರ, ಇದು 34,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಸುಮಾರು 400 ಲೈಕ್‌ಗಳನ್ನು ಮತ್ತು ಹಲವಾರು ಕಾಮೆಂಟ್‌ಗಳನ್ನು ಪಡೆದಿದೆ. ಇನ್ನು ಈ ಬಗ್ಗೆ ಆಹಾರ-ವಿತರಣಾ ಅಪ್ಲಿಕೇಶನ್ ಆಗಿರುವ ಸ್ವಿಗ್ಗಿ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ X ಗೆ ಮೂಲಕ ಪ್ರತಿಕ್ರಿಯೆ ನೀಡಿದೆ. ”ನಮಗೂ ಸ್ವಲ್ಪ ಓಣಂ ಹಬ್ಬದ ಊಟ ಕಳುಹಿಸಿ” ಎಂದಿದೆ.

ಇದನ್ನೂ ಓದಿ: Onam 2024 : ಓಣಂ ಹಬ್ಬವನ್ನು ಸುಗ್ಗಿ ಹಬ್ಬವೆಂದು ಕರೆಯುವುದು ಏಕೆ? ಏನಿದರ ವಿಶೇಷತೆ

ಮತ್ತೊಂದೆಡೆ ಈ ಪೋಸ್ಟ್​ಗೆ ಅನೇಕ ಟ್ವಿಟರ್ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ. ”ಸ್ನೇಹಿತರಿಗಾಗಿ ನ್ಯೂಯಾರ್ಕ್‌ಗೆ ತೆಗೆದುಕೊಂಡು ಹೋಗಲು ನಾನು ವಿಮಾನಯಾನ ಕೈಗೊಳ್ಳುವ ಕೆಲವೇ ಗಂಟೆಗಳ ಮೊದಲು ಪ್ರೆಶರ್ ಕುಕ್ಕರ್‌ ಆರ್ಡರ್ ಮಾಡಿದ್ದೆ’ ಎಂದು ಬಳಕೆದಾರರೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಮತ್ತೋರ್ವ ಬಳಕೆದಾರ, ನಿಮ್ಮ ಸೀರೆಗೆ ಫಾಲ್ ಮತ್ತು ಎಡ್ಜಿಂಗ್ ಮಾಡಲಾಗಿದೆಯಾ? ಎಂದು ಪ್ರಶ್ನಿಸಿದ್ದಾರೆ. ಮತ್ತೋರ್ವರು, ”ಹಾಯ್, ನಾವು ಇದರ ಬಗ್ಗೆ ಡಿಎಂಎಸ್ ಮೂಲಕ ಮಾತನಾಡಬಹುದೇ? ನಾವು ಈ ಬಗ್ಗೆ ಚಾಟ್ ಮಾಡಲು ಇಷ್ಟಪಡುತ್ತೇವೆ ಎಂದಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ