ಬೆಂಗಳೂರಲ್ಲಿ ಚಳಿ ಎಫೆಕ್ಟ್​​: ಮಕ್ಕಳು ಮತ್ತು ವೃದ್ಧರಲ್ಲಿ ಹೆಚ್ಚಿದ ಆರೋಗ್ಯ ಸಮಸ್ಯೆ

Updated By: ಪ್ರಸನ್ನ ಹೆಗಡೆ

Updated on: Dec 07, 2025 | 2:16 PM

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಚಳಿ ಮತ್ತು ಶೀತ ಗಾಳಿಯಿಂದ ಉಸಿರಾಟದ ಸಮಸ್ಯೆಗಳು ಹೆಚ್ಚಾಗಿವೆ. ಹವಾಮಾನ ಬದಲಾವಣೆಯಿಂದ ಪುಟಾಣಿ ಮಕ್ಕಳು ಮತ್ತು ವೃದ್ಧರು ಹೆಚ್ಚಾಗಿ ಕೆಮ್ಮು, ನೆಗಡಿ, ಜ್ವರ, ಉಬ್ಬಸದಂತಹ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಚಳಿಗಾಲದಲ್ಲಿ ನಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ವೈದ್ಯರು ನೀಡಿರುವ ಸಲಹೆ, ಸೂಚನೆ ಇಲ್ಲಿವೆ.

ಬೆಂಗಳೂರು, ಡಿಸೆಂಬರ್​​ 07: ನಗರದಲ್ಲಿ ಚಳಿಯ ಪ್ರಮಾಣ ಹೆಚ್ಚಾಗುತ್ತಿದ್ದು, ಇದರೊಂದಿಗೆ ಶೀತ ಗಾಳಿ ಮತ್ತು ಬಿಸಿಲಿನ ಏರಿಳಿತಗಳು ನಾಗರಿಕರಲ್ಲಿ ಹಲವು ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತಿವೆ. ಹವಾಮಾನದ ಈ ಬದಲಾವಣೆಯಿಂದ ಸಿಟಿ ಮಂದಿಯಲ್ಲಿ ಉಸಿರಾಟದ ತೊಂದರೆಯಂತಹ ಸಮಸ್ಯೆಗಳು ಹೆಚ್ಚಾಗಿವೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ರಿಯಾಕ್ಟಿವ್ ಏರ್‌ವೇಸ್ ಡಿಸ್‌ಫಂಕ್ಷನ್ ಸಿಂಡ್ರೋಮ್ ಸಾಮಾನ್ಯವಾಗಿದೆ. ಉಬ್ಬಸ, ಸುಸ್ತು, ಜ್ವರ, ನೆಗಡಿ ಮತ್ತು ಕೆಮ್ಮು ಹೆಚ್ಚಳವಾಗುತ್ತಿದೆ. ಮುಂದಿನ ದಿನಗಳಲ್ಲಿ ಚಳಿ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದ್ದು, ಜನರು ಬೆಚ್ಚನೆಯ ಉಡುಪು ಧರಿಸುವುದು ಮತ್ತು ಬಿಸಿಯಾದ ಆಹಾರ ಸೇವಿಸುವುದು ಮುಖ್ಯ. ಶ್ವಾಸಕೋಶದ ಸಮಸ್ಯೆಗಳಿರುವ ಚಿಕ್ಕ ಮಕ್ಕಳು ಮತ್ತು ವಯಸ್ಕರು ಹೆಚ್ಚು ಜಾಗರೂಕರಾಗಿರಬೇಕು. ವೈರಲ್ ಸೋಂಕುಗಳನ್ನು ತಪ್ಪಿಸಲು ಅನಗತ್ಯವಾಗಿ ಹೊರಗೆ ಹೋಗುವುದನ್ನು ಕಡಿಮೆ ಮಾಡಬೇಕು ಎಂದು ವೈದ್ಯರು ಸೂಚಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

Published on: Dec 07, 2025 07:42 AM