ಟ್ರೇಡ್​ ಮಾರ್ಕ್​ ಕಾನೂನು ಸಮರದಲ್ಲಿ ಶಿವಮೊಗ್ಗ ಹೋಟೆಲ್ ವಿರುದ್ಧ ಗೆದ್ದ ಬೆಂಗಳೂರಿನ ವಿದ್ಯಾರ್ಥಿ ಭವನ

|

Updated on: Apr 11, 2023 | 9:21 AM

ಟ್ರೇಡ್​ ಮಾರ್ಕ್​ ಸಂಬಂಧ ಕಾನೂನು ಹೋರಾಟದಲ್ಲಿ ಶಿವಮೊಗ್ಗದ ರೆಸ್ಟೋರೆಂಟ್​ ವಿರುದ್ಧ ಬೆಂಗಳೂರಿನ ಖ್ಯಾತ ರೆಸ್ಟೋರೆಂಟ್ ವಿದ್ಯಾರ್ಥಿ ಭವನ ಗೆಲುವು ಸಾಧಿಸಿದೆ.

ಟ್ರೇಡ್​ ಮಾರ್ಕ್​ ಕಾನೂನು ಸಮರದಲ್ಲಿ  ಶಿವಮೊಗ್ಗ ಹೋಟೆಲ್ ವಿರುದ್ಧ ಗೆದ್ದ ಬೆಂಗಳೂರಿನ ವಿದ್ಯಾರ್ಥಿ ಭವನ
Follow us on

ಬೆಂಗಳೂರು: ಸಿಲಿಕಾನ್​ ಸಿಟಿ ಬೆಂಗಳೂರಿನ(Bengaluru) ಗಾಂಧೀ ಬಜಾರ್​ನಲ್ಲಿರುವ ವಿದ್ಯಾರ್ಥಿ ಭವನ (Vidyarthi Bhavan) ಸುಮಾರು 70 ವರ್ಷದಿಂದ ತನ್ನ ಜನಪ್ರಿಯತೆ ಮತ್ತು ಗುಣಮಟ್ಟವನ್ನು ಹಾಗೇ ಉಳಿಸಿಕೊಂಡು ಬಂದಿರುವ ಜನಪ್ರಿಯ ಹೋಟೆಲ್. ಈ ಹೋಟೆಲ್​ ತನ್ನದೇ ಟ್ರೇಡ್‌ಮಾರ್ಕ್ ಹೊಂದಿದೆ. ಈ ಟ್ರೇಡ್​ ಮಾರ್ಕ್​ ಸಂಬಂಧ ಕಾನೂನು ಹೋರಾಟದಲ್ಲಿ ಶಿವಮೊಗ್ಗದ ರೆಸ್ಟೋರೆಂಟ್​ ವಿರುದ್ಧ ಗೆದ್ದಿದೆ.  ವಿದ್ಯಾರ್ಥಿ ಭವನದ ಟ್ರೇಡ್ ಮಾರ್ಕ್ ಶಿವಮೊಗ್ಗದ ರೆಸ್ಟೋರೆಂಟ್​ ನಕಲು ಮಾಡಿ ಬಳಸುತ್ತಿರುವುದಕ್ಕೆ ಬೆಂಗಳೂರಿನ ಹೆಚ್ಚುವಟಿ ಸಿಟಿ ಸಿವಿಲ್ ನ್ಯಾಯಾಲವು ಶಾಶ್ವತ ಪ್ರತಿಬಂಧಕಾಜ್ಞೆ ನೀಡಿದೆ. ವಿದ್ಯಾರ್ಥಿ ಭವನದ ಪಾಲುದಾರರಾದ ಎಸ್​.ಅರುಣ್ ಕುಮಾರ್ ಅಡಿಗ ಅವರು ದಾಖಲಿಸಿದ್ದ ದೂರು ದಾಖಲಿಸಿದ್ದರು. ಪ್ರತಿವಾದಿಗಳು ವಿದ್ಯಾರ್ಥಿ ಭವನ ಹೆಸರು ಬಳಕೆ ಮಾಡಿದ್ದು, ಅದನ್ನು ಕೊಂಚ ಬದಲಾವಣೆ ಮಾಡಿದ್ದರೂ ಅದು ನಮ್ಮ ಟ್ರೇಡ್​ ಮಾರ್ಕ್​ ಹೆಸರಿಗೆ ಹತ್ತಿರವಾಗಿದೆ. ಅಕ್ಷರಲ್ಲಿ ವಿ ಬಿ ವಿಧಾಥ್ರಿ ಭವನ್ ಹೆಸರಿನಲ್ಲಿ ಉದ್ಯಮ ನಡೆಸುತ್ತಿದ್ದಾರೆ. ವಿಧಾಥ್ರಿ ಮತ್ತು ವಿದ್ಯಾರ್ಥಿ ಒಂದೇ ರೀತಿ ಕಾಣುತ್ತಿದ್ದು, ಅದರಲ್ಲಿ ಭಿನ್ನತೆ ಕಾಣುತ್ತಿಲ್ಲ ಎಂದು ನ್ಯಾಯಾಲವು ಆದೇಶದಲ್ಲಿ ತಿಳಿಸಿದೆ.

ಇದನ್ನೂ ಓದಿ; ಬೆಂಗಳೂರಿನ MTR ಹೋಟೆಲ್​ ಟಿಫಿನ್ ದರ ಪಟ್ಟಿ ವೈರಲ್​: ಅಬ್ಬಬ್ಬಾ.. ದೋಸೆ, ಟೀ-ಕಾಫಿ ಬೆಲೆ ಇಷ್ಟೊಂದಾ!

‘ಬೆಂಗಳೂರು ಫುಡ್‌ ಟ್ರೆಂಡ್‌ ಇನ್‌ ಶಿವಮೊಗ್ಗ’ ಎಂಬ ಹೆಸರು ಮತ್ತು ಟ್ರೇಡ್ ಮಾರ್ಕ್ ಬಳಸಿದ ಕುರಿತು ಶಿವಮೊಗ್ಗದ ಹೋಟೆಲ್ ವಿರುದ್ಧ ವಿದ್ಯಾರ್ಥಿ ಭವನ ಕೋರ್ಟ್ ಮೆಟ್ಟಿಲೇರಿತ್ತು. ಶಿವಮೊಗ್ಗದಲ್ಲಿ ಬೆಂಗಳೂರು ಫುಡ್ ಟ್ರೆಂಡ್” ಎಂಬ ಒಂದೇ ರೀತಿಯ ಹೆಸರು ಮತ್ತು ಟ್ಯಾಗ್‌ಲೈನ್‌ ಬಳಸಿಕೊಂಡು ಗ್ರಾಹಕರನ್ನು ದಾರಿ ತಪ್ಪಿಸುವ ಮೂಲಕ ಶಿವಮೊಗ್ಗ ರೆಸ್ಟೋರೆಂಟ್ ತಮ್ಮ ಟ್ರೇಡ್ ಮಾರ್ಕ್ ಅನ್ನು ಉಲ್ಲಂಘಿಸಿದೆ ಎಂದು ವಿದ್ಯಾರ್ಥಿ ಭವನವು ಆರೋಪಿಸಿತ್ತು. ಈ ಹಿನ್ನೆಲೆ ಪ್ರಕರಣ ದಾಖಲಾಗಿತ್ತು. ತಾವು ಶಿವಮೊಗ್ಗದಲ್ಲಿ ಯಾವುದೇ ರೆಸ್ಟೋರೆಂಟ್ ವ್ಯವಹಾರವನ್ನು ಹೊಂದಿಲ್ಲ. ವಿದ್ಯಾರ್ಥಿ ಭವನವು ಒಂದು ಟ್ರೆಂಡ್ ಮಾರ್ಕ್ ಸಸ್ಯಾಹಾರಿ ರೆಸ್ಟೋರೆಂಟ್ ಆಗಿದ್ದು, ಇದು 80 ವರ್ಷಗಳಿಂದ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. ರೆಸ್ಟೋರೆಂಟ್ ತನ್ನ ರುಚಿಕರವಾದ ಮಸಾಲೆ ದೋಸೆಗೆ ಹೋಟೆಲ್ ಹೆಸರುವಾಸಿಯಾಗಿದೆ ಎಂದು ವಿದ್ಯಾರ್ಥಿ ಭವನದ ಪರ ಅರ್ಜಿದಾರ ತಿಳಿಸಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಅತ್ಯುತ್ತಮ ರೆಸ್ಟೋರೆಂಟ್‌ಗಳು ನೂರಾರಿವೆ. ರುಚಿಕರವಾದ ದೋಸೆ, ಇಡ್ಲಿ, ವಡೆ ಮತ್ತು ಭಾತ್‌ಗಳಿಗೆ ಜನಪ್ರಿಯವಾದ ಅನೇಕ ರೆಸ್ಟೋರೆಂಟ್‌ಗಳಿವೆ. ಆದರೂ ಈ ವಿದ್ಯಾರ್ಥಿ ಭವನದಲ್ಲಿ ಟಿಂಡಿ ತಿನ್ನಲು ಪ್ರತಿದಿನ ಜನರು ಸರತಿ ಸಾಲಿನಲ್ಲಿ ನಿಂತಿರುತ್ತಾರೆ. ವಿದ್ಯಾರ್ಥಿ ಭವನ ಶುರುವಾಗಿದ್ದು1943ರಲ್ಲಿ ಉಡುಪಿ ಜಿಲ್ಲೆಯ ಸಾಲಿಗ್ರಾಮ ಮೂಲದ ವೆಂಕಟರಾಮ ಉರಾಳರು ಇದರ ಸ್ಥಾಪಕರು. ನ್ಯಾಶನಲ್ ಕಾಲೇಜು ಮತ್ತು ಹತ್ತಿರದ ಶಾಲೆಗಳ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಹೋಟೆಲ್​ ಆರಂಭಿಸಲಾಗಿತ್ತು. ಬಳಿಕ ವೆಂಕಟರಾಮ ಉರಾಳರು, ತಮ್ಮ ಸ್ನೇಹಿತರೊಬ್ಬರ ಸಲಹೆಯಂತೆ ಈ ಹೋಟೇಲಿಗೆ ವಿದ್ಯಾರ್ಥಿ ಭವನ ಎಂದು ಹೆಸರಿಟ್ಟಿದ್ದರು. ಕಾಲ ಕಳೆದಂತೆ, ಹೋಟೇಲಿನ ಖಾದ್ಯಗಳ ರುಚಿ ಇತರ ಗ್ರಾಹಕರನ್ನು ಸೆಳೆಯಲಾರಂಭಿಸಿತು. ವಿದ್ಯಾರ್ಥಿಗಳಲ್ಲದೆ, ಖ್ಯಾತ ಸಾಹಿತಿಗಳು, ಸಿನೆಮಾ ನಟರು, ರಾಜಕೀಯ ಧುರೀಣರು ಸಹ ಈ ಹೋಟೆಲಿಗೆ ಭೇಟಿ‌ ನೀಡಲು ಆರಂಭಿಸಿದರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 9:01 am, Tue, 11 April 23