AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ: ಓರ್ವ ಸಾವು

ಕ್ಷುಲ್ಲಕ ಕಾರಣಕ್ಕೆ ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮತ್ತೊರ್ವ ಗಾಯಗೊಂಡಿರುವ ಘಟನೆ ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ: ಓರ್ವ ಸಾವು
ಪ್ರಾತಿನಿಧಿಕ ಚಿತ್ರ
Follow us
ವಿವೇಕ ಬಿರಾದಾರ
|

Updated on:Apr 11, 2023 | 11:26 AM

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮತ್ತೊರ್ವ ಗಾಯಗೊಂಡಿರುವ ಘಟನೆ ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮುನಿರಾಜು(68) ಮೃತದುರ್ದೈವಿ, ಮುರುಳಿ ಎಂಬಾತನ ಸ್ಥಿತಿ ಗಂಭೀರವಾಗಿದೆ. ಪ್ರಮೋದ್, ರವಿಕುಮಾರ್, ಪಲ್ಲವಿ ಎಂಬುವರು ಕೃತ್ಯ ಎಸಗಿದ ಆರೋಪಿಗಳು. ಆರೋಪಿ ಪ್ರಮೋದ್ ಮುನಿರಾಜು ಮನೆ ಬಳಿ ನಾಯಿ ಕರೆದುಕೊಂಡು ಬರುತ್ತಿದ್ದರು. ಇದಕ್ಕೆ ಮುನಿರಾಜು ಹಸ್ತಕ್ಷೇಪ ವ್ಯಕ್ತಪಡಿಸಿದ್ದು, ನಾಯಿ ಕರೆತಂದು ಗಲೀಜು ಮಾಡಿಸ್ತಿಯಾ ಎಂದು ಪ್ರಶ್ನಿಸಿದ್ದರು. ಈ ವಿಚಾರ ಪೊಲೀಸ್​ ಠಾಣೆ ಮೆಟ್ಟಿಲೇರಿತ್ತು. ಆಗ ಪೊಲೀಸರು ಇಬ್ಬರ ಬಳಿಯೂ ಮುಚ್ಚಳಿಕೆ ಬರೆಸಿಕೊಂಡು ಕಳಿಸಿದ್ದರು.

ಮರುದಿನ ಪ್ರಮೋದ್ ಮತ್ತು ರವಿಕುಮಾರ್ ಮತ್ತೆ ಮುನಿರಾಜ್​ ಜೊತೆ ಇದೇ ವಿಚಾರಕ್ಕೆ ಗಲಾಟೆ ಮಾಡಿದ್ದರು. ಗಲಾಟೆ ವೇಳೆ ಪ್ರಮೋದ್​, ರವಿಕುಮಾರ್ ದೊಣ್ಣೆಯಿಂದ ಮುನಿರಾಜ್ ಮತ್ತು ಅವರ ಜೊತೆ ಇದ್ದ ಮುರುಳಿ ಎಂಬುವರಿಗೆ ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಮುನಿರಾಜು ಸಾವನ್ನಪ್ಪಿದ್ದು, ಮುರಳಿಗೆ ಗಂಭೀರ ಗಾಯಗಳಾಗಿವೆ. ಇನ್ನು ಕೊಲೆಗೆ ಪ್ರಮೋದ್ ಪತ್ನಿ ಪಲ್ಲವಿ ಸಹ ಸಾಥ್ ನೀಡಿರುವ ಆರೋಪ ಕೇಳಿಬಂದಿದೆ. ಸದ್ಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಿಯರ್​ ಬಾಟಲ್​ನಿಂದ ಹೊಡೆದು ರೌಡಿಶೀಟರ್​ ಬರ್ಬರ ಹತ್ಯೆ; ಡಿಸಿಪಿ ಹೇಳಿದ್ದೇನು

ಹೆಚ್ಚು ಮೈಲೇಜ್ ನೀಡುವ ಬೈಕ್​​ಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ

ಮಂಡ್ಯ: ಅತಿ ಹೆಚ್ಚು ಮೈಲೇಜ್ ನೀಡುವ ಬೈಕ್​​ಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ನಾಗಮಂಗಲ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಲೋಕೇಶ್ ಬಂಧಿತ ಆರೋಪಿ. ಸದ್ಯ ಪೊಲೀಸರು ಆರೋಪಿಯಿಂದ 10 ಲಕ್ಷ ಮೌಲ್ಯದ 22 ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ಲೋಕೆಶ್​ ಕದ್ದ ಬೈಕನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದನು. ನಂತರ ಬೈಕ್ ಮಾರಿದ ಹಣದಿಂದ ಮೋಜು ಮಸ್ತಿ ಮಾಡುತ್ತಿದ್ದನು. ಆರೋಪಿ ವಿಚಾರಣೆ ವೇಳೆ ನಾಗಮಂಗಲ, ಬಿಂಡಿಗನವಿಲೆ, ಕಿಕ್ಕೇರಿ, ಬೆಳ್ಳೂರು, ಕಾಮಾಕ್ಷಿ ಪಾಳ್ಯ, ರಾಜಗೋಪಾಲನಗರ, ಬ್ಯಾಡರಹಳ್ಳಿ ಸೇರಿದಂತೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ವೆಸಗಿರುವುದಾಗಿ ಹೇಳಿದ್ದಾನೆ.

ವಿವಿಪುರಂನಲ್ಲಿ ಕೋಟ್ಯಂತರ ಮೌಲ್ಯದ ಡ್ರಗ್ಸ್​ ಪತ್ತೆ

ಬೆಂಗಳೂರು: ವಿವಿಪುರಂನಲ್ಲಿ ಕೋಟ್ಯಂತರ ಮೌಲ್ಯದ ಡ್ರಗ್ಸ್​ ಪತ್ತೆ ಚುನಾವಣೆ ಹೊಸ್ತಿಲಿನಲ್ಲಿ ಹಲವು ಅನುಮಾನಗಳನ್ನ ಹುಟ್ಟು ಹಾಕಿದೆ. ಬರೀ ವಿವಿಐಪಿಗಳೆ ಬಳಸುವ ಬರೋಬ್ಬರಿ ನಾಲ್ಕು ಕೋಟಿ ಮೌಲ್ಯದ 1 ಕೇಜಿ 40 ಗ್ರಾಂ ಬ್ರೌನ್ ಎಂಡಿಎಂಎ ಪತ್ತೆಯಾಗಿವೆ. ಈ ಹಿನ್ನೆಲೆ ನಗರದಲ್ಲಿ ಭಾರೀ ಪ್ರಮಾಣದ ವಿವಿಐಪಿಗಳು ಡ್ರಗ್ಸ್ ಬಳಸುತ್ತಿರುವ ಶಂಕೆ ವ್ಯಕ್ತವಾಗಿದೆ.

ಕಳೆದ ಕೆಲವುದಿನಗಳ ಹಿಂದೆ ವಿವಿಪುರಂ ಹಾಗೂ ಜಯನಗರ ನಗರ ಪೊಲೀಸರು ಐವರು ವಿದೇಶಿ ಡ್ರಗ್ ಪೆಡ್ಲರ್​ಗಳ ಬಂಧಿಸಿದ್ದರು. ಈ ವೇಳೆ ಬರೋಬ್ಬರಿ 8 ಕೋಟಿ 20 ಲಕ್ಷ ಮೌಲ್ಯದ ವಿವಿಧ ರೀತಿಯ ಡ್ರಗ್ಸ್ ಪೊಲೀಸರು ವಶಪಡಿಸಿಕೊಂಡಿದ್ದರು. ಇದರಲ್ಲಿ ನಾಲ್ಕು ಕೋಟಿ ಮೌಲ್ಯದ ಬ್ರೌನ್ ಎಂಡಿಎಂಎ ಪತ್ತೆಯಾಗಿತ್ತು. ಹೀಗಾಗಿ ಇದನ್ನ ನಗರದಲ್ಲಿ ಬಳಸುತ್ತಿದ್ದ ವಿವಿಐಪಿಗಳು, ಸೆಲಬ್ರೆಟಿಗಳು ಯಾರು ಎಂದು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:25 am, Tue, 11 April 23