ಬೆಂಗಳೂರಿನಲ್ಲಿ ಬಿಯರ್​ ಬಾಟಲ್​ನಿಂದ ಹೊಡೆದು ರೌಡಿಶೀಟರ್​ ಬರ್ಬರ ಹತ್ಯೆ; ಡಿಸಿಪಿ ಹೇಳಿದ್ದೇನು

ನಗರದ ಉತ್ತರಹಳ್ಳಿಯ ಸ್ಪೈಸ್ ಬಾರ್​ನಲ್ಲಿ, ಬಿಯರ್​ ಬಾಟಲ್​ನಿಂದ ಹೊಡೆದು ರೌಡಿಶೀಟರ್ ಶಿವರಾಜ್ ಎಂಬಾತ​ನನ್ನ ಕೊಲೆ ಮಾಡಲಾಗಿದೆ. ಈ ಕುರಿತು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಬಿಯರ್​ ಬಾಟಲ್​ನಿಂದ ಹೊಡೆದು ರೌಡಿಶೀಟರ್​ ಬರ್ಬರ ಹತ್ಯೆ; ಡಿಸಿಪಿ ಹೇಳಿದ್ದೇನು
ಮೃತ ರೌಡಿಶೀಟರ್​
Follow us
ಕಿರಣ್ ಹನುಮಂತ್​ ಮಾದಾರ್
| Updated By: ರಮೇಶ್ ಬಿ. ಜವಳಗೇರಾ

Updated on:Apr 10, 2023 | 12:15 PM

ಬೆಂಗಳೂರು: ನಗರದ ಉತ್ತರಹಳ್ಳಿಯ ಸ್ಪೈಸ್ ಬಾರ್​ನಲ್ಲಿ, ಬಿಯರ್​ ಬಾಟಲ್​ನಿಂದ ಹೊಡೆದು ರೌಡಿಶೀಟರ್ ಶಿವರಾಜ್ ಎಂಬಾತ​ನನ್ನ ಕೊಲೆ ಮಾಡಲಾಗಿದೆ. ಹೌದು ನಿನ್ನೆ(ಏ.9) ರಾತ್ರಿ ಕಂಠಪೂರ್ತಿ ಎಣ್ಣೆ ಕುಡಿದು ಇಬ್ಬರು ರೌಡಿಶೀಟರ್​​ಗಳಾದ ಮಂಜ ಅಲಿಯಾಸ್ ಪೋಲಾರ್​​​ ಹಾಗೂ ಶಿವರಾಜ್ ನಡುವೆ ಗಲಾಟೆಯಾಗಿದ್ದು, ರೌಡಿಶೀಟರ್ ಮಂಜ ಎಂಬುವವನು ಬಿಯರ್ ಬಾಟಲ್​ನಿಂದ ಶಿವರಾಜ್​ ತಲೆಗೆ ಹೊಡೆದು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಬಳಿಕ ಶಿವರಾಜ್​ನನ್ನ ಆಸ್ಪತ್ರೆಗೆ ಸೇರಿಸುವ ಮಾರ್ಗ ಮಧ್ಯೆ ಸಾವನಪ್ಪಿದ್ದು, ಈ ಕುರಿತು ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ರೌಡಿಶೀಟರ್​ ಹತ್ಯೆ ಕುರಿತು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಸ್ಪಷ್ಟನೆ

ಬೆಂಗಳೂರು: ರೌಡಿಶೀಟರ್​ ಬರ್ಬರ ಹತ್ಯೆ ಕುರಿತು ಮಾತನಾಡಿದ ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ‘ನಿನ್ನೆ (ಏ.9) ಕೊಲೆ ಪ್ರಕರಣ ದಾಖಲಾಗಿದೆ. ರಾತ್ರಿ10.30ಕ್ಕೆ ಸ್ಪೈಸ್ ಬಾರ್​ನಲ್ಲಿ ಗಲಾಟೆಯಾಗಿದ್ದು, 12.00 ಗಂಟೆಗೆ ಕೊಲೆಯಾದ ಬಗ್ಗೆ ಮಾಹಿತಿ ಬಂದಿದೆ. ಕೊಲೆಯಾದ ಶಿವರಾಜ್ ಸಿಕೆ ಅಚ್ಚುಕಟ್ಟು ಠಾಣೆಯ ರೌಡಿಶೀಟರ್ ಆಗಿದ್ದು, ವೃತ್ತಿಯಲ್ಲಿ ಪೇಂಟರ್​ ಆಗಿ ಕೆಲಸ ಮಾಡುತ್ತಿದ್ದ. ಇನ್ನು ಆತನನ್ನ ಬಿಯರ್ ಬಾಟಲ್ ಹಾಗೂ ಕಲ್ಲಿನಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಮಂಜು ಸೇರಿದಂತೆ ಮೂರು ಜನ ಆರೋಪಿಗಳ ಬಗ್ಗೆ ಉಲ್ಲೇಖ ಮಾಡಲಾಗಿದ್ದು, ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ ಎಂದರು.

ಇದನ್ನೂ ಓದಿ:ದೊಡ್ಡಬಳ್ಳಾಪುರ: ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿ ಅನುಮಾನಾಸ್ಪದ ರೀತಿಯಲ್ಲಿ ಸಾವು; ಮಗಳದ್ದು ಕೊಲೆ ಎಂದ ಕುಟುಂಬಸ್ಥರು

ಇನ್ನು ಮಂಜು ಮತ್ತು ಮೃತ ಶಿವರಾಜ್​ ಜೊತೆ ಈ ಹಿಂದೆ ಸಣ್ಣಪುಟ್ಟ ಗಲಾಟೆ ಇತ್ತು ಎನ್ನಲಾಗಿದೆ. ನಿನ್ನೆ ರಾತ್ರಿ ರೌಡಿ ಶೀಟರ್ ಶಿವರಾಜ್ ತನ್ನ ಮೂವರು ಗೆಳೆಯರ ಜೊತೆಗೆ ಇಟ್ಟಮಾಡು ರೋಡ್​ನಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್​ಗೆ ಹೋಗಿದ್ದ. ಕುಡಿದ ನಂತರ ಸಿಕೆ ಅಚ್ಚುಕಟ್ಟು ಮಂಜನ ಜೊತೆಗೆ ಗಲಾಟೆ ಆಗಿದೆ. ಮಾತು ಮಾತಿಗೆ ಶುರುವಾದ ಗಲಾಟೆಯಲ್ಲಿ ಅರೋಪಿ ಮಂಜುಗೆ ಶಿವರಾಜ್ ಅಂಡ್ ಟೀಮ್ ಹಲ್ಲೆ ಮಾಡಿದ್ದು, ಹೊಡೆದು ಬಾರ್ ನಿಂದ ಹೊರಕ್ಕೆ ಕಳುಸಿದ್ದಾರೆ.

ಬಾರ್​​ನಿಂದ ಹೊರ ಬಂದು ನಿಂತ ಮಂಜು ಜೊತೆ ಮತ್ತೆ ಗಲಾಟೆ ಶುರುವಾಗಿದೆ. ಬಳಿಕ ಮಂಜನ ಜೊತೆಗೆ ಮತ್ತು ನಾಲ್ಕರಿಂದ ಐದು ಜನರು ಸೇರಿಕೊಂಡಿದ್ದಾರೆ. ಮೊದಲಿಗೆ ಬಿಯರ್ ಬಾಟಲ್​ನಿಂದ ಹೊಡೆದಾಡಿದ್ದಾರೆ. ನಂತರ ರಸ್ತೆ ಬದಿಯ ಕಲ್ಲಿನಿಂದ ತಲೆಗೆ ಹೊಡೆದಿದ್ದಾರೆ. ಪರಿಣಾಮ ರಸ್ತೆ ಬದಿಯಲ್ಲಿ ಶಿವರಾಜ್ ಬಿದ್ದಿದ್ದಾನೆ. ಘಟನೆ ಸಂಭಂದ ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದೇವೆ ಎಂದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:07 pm, Mon, 10 April 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್