ದೊಡ್ಡಬಳ್ಳಾಪುರ: ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿ ಅನುಮಾನಾಸ್ಪದ ರೀತಿಯಲ್ಲಿ ಸಾವು; ಮಗಳದ್ದು ಕೊಲೆ ಎಂದ ಕುಟುಂಬಸ್ಥರು

ಅವರಿಬ್ಬರದ್ದು ಇನ್ನು ಚಿಕ್ಕ ವಯಸ್ಸು ಕಾಲೇಜಿಗೆ ಹೋಗುವಾಗಲೆ ಲವ್ವಿಡವ್ವಿಯಾಗಿದ್ದು ಮನೆಯವರ ವಿರೋಧದ ನಡುವೆ ಪ್ರೀತಿಸಿ ಮದುವೆ ಸಹ ಆಗಿದ್ರು. ಇನ್ನು ಇಬ್ಬರದ್ದು ಒಂದೇ ಜಾತಿ ಎಂದು ಮನೆಯವರು ಸಹ ಒಪ್ಪಿದ್ದು ಎಲ್ಲವೂ ಅಂದುಕೊಂಡಂತೆ ಚೆನ್ನಾಗೆ ಸಾಗಿತ್ತು. ಆದರೆ ಈ ನಡುವೆ ಕಳೆದ ರಾತ್ರಿ ರೂಂ ಒಳಗಡೆ ಹೋದ ಗೃಹಿಣಿ ಬೆಳಗಾಗುವುಷ್ಟರಲ್ಲಿ ಹೆಣವಾಗಿ ಸಿಕ್ಕಿದ್ದು ಒಬ್ಬರು ಆತ್ಮಹತ್ಯೆ ಅಂದರೆ, ಮತ್ತೊಬ್ಬರು ಕೊಲೆ ಎನ್ನುತ್ತಿದ್ದಾರೆ.

ದೊಡ್ಡಬಳ್ಳಾಪುರ: ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿ ಅನುಮಾನಾಸ್ಪದ ರೀತಿಯಲ್ಲಿ ಸಾವು; ಮಗಳದ್ದು ಕೊಲೆ ಎಂದ ಕುಟುಂಬಸ್ಥರು
ಮೃತ ಯುವತಿ
Follow us
ಕಿರಣ್ ಹನುಮಂತ್​ ಮಾದಾರ್
|

Updated on: Apr 09, 2023 | 1:41 PM

ಬೆಂಗಳೂರು ಗ್ರಾಮಾಂತರ: ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಸಂಬಂಧಿಕರು ನೀರವ ಮೌನಕ್ಕೆ ಜಾರಿದ್ದಾರೆ. ಗಂಡನ ಜೊತೆ ನೂರು ಕಾಲ ಬಾಳಬೇಕು ಎಂದು ಸಾಕಷ್ಟು ಕನಸುಗಳನ್ನ ಹೊತ್ತು ಪ್ರೀತಿಸಿದವನ ಜೊತೆ ಬಂದಿದ್ದ ಸುಂದರಿ, ಮದುವೆಯಾಗಿ ಮೂರು ವರ್ಷ ಕಳೆಯುವಷ್ಟರಲ್ಲೆ ದುರಂತ ಅಂತ್ಯ ಕಂಡಿದ್ದಾಳೆ. ಇಷ್ಟಪಟ್ಟವನ‌ ಜೊತೆ ಚೆನ್ನಾಗಿ ಬದುಕಿ ಬಾಳುತ್ತಾಳೆ ಅಂದುಕೊಂಡಿದ್ದ ಮಗಳು ಅಡ್ಡಲಾಗಿ ಮಲಗಿರೂದನ್ನ ಕಂಡು ತಲೆ ಮೇಲೆ ಬಂಡೆ ಬಿದ್ದಂತೆ ಹೆತ್ತವರು ನೀರವ ಮೌನಕ್ಕೆ ಶರಣಾಗಿದ್ದಾರೆ. ಹೌದು ಇಲ್ಲಿ ಈ ರೀತಿ ಚಕ್ಕ ವಯಸ್ಸಿಗೆ ಸಾವಿನ ಮನೆ‌ ಸೇರಿರುವ ಈಕೆಯ ಹೆಸರು ಮೇಘನಾ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕಲ್ಲುಂಟೆ ಗ್ರಾಮದ‌ ನಿವಾಸಿ. ಒಬ್ಬಳೆ ಮಗಳಾಗಿದ್ದ ಕಾರಣ ಮನೆಯವರು ಮುದ್ದಾಗಿ‌ ಸಾಕಿದ್ದು ಬಿಇ ವಿದ್ಯಾಭ್ಯಾಸವನ್ನು ಮಾಡಿಸಿದ್ರು. ಆದ್ರೆ ಕಾಲೇಜಿಗೆ ಹೋಗುವ ವೇಳೆ ಪಕ್ಕದ‌ ಊರಿನ ನಾಗೇಶ್ ಎನ್ನುವ ಯುವಕನ ‌ಜೊತೆ ಈಕೆಗೆ ಪ್ರೆಮಾಂಕುರವಾಗಿದೆ. ಈ ವಿಚಾರ ಮನೆಯವರೆಗೂ ತಿಳಿದಿದೆ. ಹೀಗಾಗಿ ಮನೆಯವರು ಯುವತಿಗೆ ಬೇರೆ ಮದುವೆ ಮಾಡಲು ಮುಂದಾಗ್ತಿದ್ದಂತೆ ಇಬ್ಬರು ಮನೆ ಬಿಟ್ಟು ಹೋಗಿ ಮದುವೆಯಾಗಿ ಬಂದಿದ್ದರು.

ಮೊದಲಿಗೆ ವಿರೋಧ ವ್ಯಕ್ತಪಡಿಸಿದ್ದ ಮೇಘನಾ ಕುಟುಂಬಸ್ಥರು ನಂತರ ಒಂದೇ ಜಾತಿಯವರಾಗಿದ್ದ ಕಾರಣ ಒಂದಾಗಿದ್ದು ಇಬ್ಬರು ಸುಖವಾಗಿ ಬಾಳಲಿ ಎಂದು ಚಿನ್ನಾಭರಣಗಳನ್ನ ನೀಡಿದ್ದು, ಇಬ್ಬರು ಅನ್ನೊನ್ಯತೆಗೆ ಒಂದು ಮಗು ಸಹ ಆಗಿದೆ. ಆದರೆ ಮದುವೆಯಾಗಿ ಎರಡು ವರ್ಷ ಕಳೆಯುವಷ್ಡರಲ್ಲೆ ಇಬ್ಬರ ನಡುವೆ ಕಲಹ ಶುರುವಾಗಿದ್ದು ಕಳೆದ ರಾತ್ರಿ ಮನೆಯಲ್ಲಿ ಗಂಡ ಹೆಂಡತಿ ನಡುವೆ ಜಗಳ ನಡೆದಿದೆ. ಈ ವೇಳೆ ಜಗಳ ಮಾಡಿಕೊಂಡು ಕೋಣೆ ಒಳಗಡೆ‌ ಹೋದ ಮೇಘನಾ ಬೆಳಾಗಗುವಷ್ಡರಲ್ಲಿ ಹೆಣವಾಗಿ ಪತ್ತೆಯಾಗಿದ್ದು ಗಂಡನ ಮನೆಯವರೆ ಮೇಘನಾಳನ್ನ ಏನೋ ಮಾಡಿದ್ದಾರೆ ಎಂದು ಮೇಘನಾ ಕುಟುಂಬಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ:ಕಲಬುರಗಿ: ಅನೈತಿಕ ಸಂಬಂಧದ ಶಂಕೆ, ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ

ಮದುವೆಯಾಗಿ ಮಗುವಾದ ನಂತರ ಮೇಘನಾ ಮತ್ತು ಗಂಡನ ನಡುವೆ ಕಲಹ ಶುರುವಾಗಿದ್ದು ಹಲವು ಭಾರಿ ಮನೆಯವರಿಗೆ ಮದುವೆ ವಿಚಾರದಲ್ಲಿ ನಿಮ್ಮ ಮಾತು ಕೇಳಬೇಕಿತ್ತು ಎಂದು ಹೇಳಿದ್ದಳಂತೆ. ಜತೆಗೆ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪಿದ್ದು, ಊರಿನವರು ಬೆಳಗ್ಗೆ ತರಾ ತುರಿಯಲ್ಲಿ ಮಣ್ಣು ಮಾಡಲು ನೋಡಿದ್ದಾರೆ. ಈ ವೇಳೆ ಪೊಲೀಸರು ಎಂಟ್ರಿಕೊಟ್ಟು ಮೃತದೇವನ್ನ ಶವಾಗಾರಕ್ಕೆ‌ ರವಾನಿಸಿ ಪರೀಕ್ಷೆ ಮಾಡಿಸಿದ್ದಾರೆ. ಇನ್ನು ಈ ಬಗ್ಗೆ ಗಂಡ ನಾಗೇಶನನ್ನ ಕೇಳಿದ್ರೆ ನಾವಿಬ್ಬರು ಪ್ರೀತಿಸಿ ಮದುವೆಯಾಗಿದ್ದು ಇಬ್ಬರು ಚೆನ್ನಾಗೆ ಸಂಸಾರ ಮಾಡ್ತಿದ್ವಿ. ರಾತ್ರಿ ಊಟ ಬಡಿಸುವ ವಿಚಾರಕ್ಕೆ ಸಣ್ಣ ಗಲಾಟೆಯಾಗಿ ನಾನು ಬೈದ್ದಿದ್ದ ಕಾರಣ ಆಕೆ‌ ಕೊಠಡಿ ಒಳಗಡೆ‌‌ ಹೋಗಿ ಬಾಗಿಲು ಹಾಕಿಕೊಂಡಿದ್ದಳು. ಹೀಗಾಗಿ ಮಧ್ಯರಾತ್ರಿ ಮಗು ಅಳುತ್ತಿದೆ ಎಂದು ಕೊಠಡಿ ಒಳಗೆ ಹೋಗಿ ನೋಡಿದಾಗ ಆಕೆ ನೇಣು ಹಾಕಿಕೊಂಡಿದ್ದಾಳು ಎಂದಿದ್ದಾನೆ.

ಒಟ್ಟಾರೆ ಗಂಡ ಹೆಂಡತಿ ಜಗಳ ಉಂಡು ಮಲಗುವವರೆಗೂ ಅನ್ನೂ ಮಾತಿದ್ರು ಉಂಡು ಮಲಗಿದ ಮೇಲೆ‌ ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿ ನೇಣಿಗೆ ಶರಣಾಗಿರುವುದು ನಿಜಕ್ಕೂ ದುರಂತ. ಇನ್ನು ಈ ಬಗ್ಗೆ ಹೊಸಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದು ಸಂಪೂರ್ಣ ತನಿಖೆ ನಂತರ ಮೇಘನಾಳದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಅನ್ನೂದು ಬೆಳಕಿಗೆ ಬರಬೇಕಿದೆ.

ವರದಿ: ನವೀನ್ ಟಿವಿ9 ದೇವನಹಳ್ಳಿ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್