ಆನೇಕಲ್ ಹೆಬ್ಬಗೋಡಿ ವ್ಯಾಪ್ತಿಯಲ್ಲಿ ಯುವಕರು ಬುಲ್ಲೆಟ್ ಬೈಕುಗಳನ್ನು ಖರೀದಿ ಮಾಡಲು ಒಲ್ಲೆ ಅನ್ನುತ್ತಿದ್ದಾರೆ! ಯಾಕೆ ಗೊತ್ತಾ?
Bullet Bike Theft: ಹೆಬ್ಬಗೋಡಿ ವ್ಯಾಪ್ತಿಯಲ್ಲಿ ಹಲವಾರು ತಿಂಗಳುಗಳಿಂದ ಬೈಕ್ ಕಳ್ಳತನ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು ರಾತ್ರಿ ವೇಳೆ ಪೊಲೀಸರ ರೌಂಡಿಂಗ್ ಹೆಚ್ಚು ಮಾಡಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ. ಅಲ್ಲದೇ ಖರೀದಿಸಿದ ಬುಲೆಟ್ ವಾಹನ ಎಲ್ಲಿ ಕಳುವು ಆಗಿ ಬಿಡುತ್ತೋ ಅಂತ ಇಲ್ಲಿನ ಜನ ತಮ್ಮ ಪ್ಲ್ಯಾನನ್ನೇ ಚೇಂಜ್ ಮಾಡಿಕೊಂಡಿದ್ದಾರೆ!
ಬಹುತೇಕ… ಯುವಕರು ಕಷ್ಟಪಟ್ಟು ತಮ್ಮಿಷ್ಟದ ಬುಲ್ಲೆಟ್ ಬೈಕ್ ಖರೀದಿ ಮಾಡಿರುತ್ತಾರೆ. ಆದರೆ ಕಳ್ಳರು ಮಾತ್ರ ಮನೆ ಮುಂದೆ ನಿಲ್ಲಿಸುವ ಬುಲ್ಲೆಟ್ ಬೈಕ್ ವಾಹನದ ಹ್ಯಾಂಡಲ್ ಅನ್ನುಸಲೀಸಾಗಿ ಮುರಿದು ಬೈಕ್ ಕದ್ದೋಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅಂಥಾದ್ದೇ ಒಂದು ಘಟನೆ ಇಲ್ಲಿ ನಡೆದದ್ದು ಕಳ್ಳರ ಕಿತಾಪತಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳ್ಳರ ಹಾವಳಿಗೆ ದಿಕ್ಕು ಕಾಣದಾದ ಹೆಬ್ಬಗೋಡಿ ನಿವಾಸಿಗಳು ಹೈರಾಣಗೊಂಡಿದ್ದಾರೆ. ಹೌದು .. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ವ್ಯಾಪ್ತಿಯಲ್ಲಿ ಬೈಕ್ ಕಳ್ಳರ ಉಪಟಳ ಮಿತಿ ಮೀರಿದ್ದು ಜನ ತಮ್ಮ ಬೈಕ್ ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ಚಿಂತೆಯಲ್ಲಿದ್ದಾರೆ. ಮನೆಯ ಕಾಂಪೌಂಡ್ ಒಳಗೆ ಹ್ಯಾಂಡಲ್ ಲಾಕ್ ಮಾಡಿ ನಿಲ್ಲಿಸಿರುವ ಬೈಕ್ ಬೆಳಗಾಗೋದ್ರೊಳಗೆ ಮಾಯ ಆಗ್ತಿವೆ. ಹೀಗಾಗಿ ಖತರ್ನಾಕ್ ಬೈಕ್ ಕಳ್ಳರನ್ನು ಹಿಡಿದು ನಮಗೆ ನ್ಯಾಯ ಕೊಡಿಸಿ ಅಂತಾ ಬುಲ್ಲೆಟ್ ಮಾಲೀಕರು ಹೆಬ್ಬಗೋಡಿ ಪೊಲೀಸ್ ಠಾಣಾ (Hebbagodi, Anekal) ಮೆಟ್ಟಿಲೇರಿದ್ದಾರೆ. ಬೊಮ್ಮಸಂದ್ರದ ಮನೆ ಮುಂದೆ ಪಾರ್ಕಿಂಗ್ ಮಾಡಿದ್ದ ಬುಲ್ಲೆಟ್ ಅನ್ನು ಎಗರಿಸಿರುವ ಕಳ್ಳರು ಹ್ಯಾಂಡಲ್ ಲಾಕ್ ಮುರಿದು ಬೈಕ್ ಜತೆ ಎಸ್ಕೇಪ್ ಆಗಿರುವ ಚಿತ್ರಣ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ (Bullet Bike Theft).
ಹೆಬ್ಬಗೋಡಿಯ ವಿದ್ಯಾನಗರದಲ್ಲಿನ ಮನೆಯೊಂದಕ್ಕೆ ಮಧ್ಯೆ ರಾತ್ರಿ ನುಗ್ಗಿದ ಮೂವರು ಕಳ್ಳರ ದಂಡು, ಹ್ಯಾಂಡಲ್ ಲಾಕ್ ಮುರಿದು ಬುಲ್ಲೆಟ್ ಎಗರಿಸಿದ್ದಾರೆ. ಅದರ ಜತೆ ಎಫ್ ಜೆಡ್ ಬೈಕನ್ನೂ ತೆಗೆದುಕೊಂಡು ಹೋಗಿದ್ದಾರೆ. ಆದರೆ ಆ ಬೈಕ್ ಸ್ಟಾರ್ಟ್ ಆಗದ ಕಾರಣ ತುಸು ದೂರ ತಳ್ಳಿಕೊಂಡು ಹೋಗಿ ಅದನ್ನು ಅಲ್ಲಿಯೇ ಬಿಟ್ಟು ಮಾಯವಾಗಿದ್ದಾರೆ.
Also Read:
ಮದುವೆ ನಿಶ್ಚಯವಾಗಿದ್ದ ಯುವಕನ ಬರ್ಬರ ಹತ್ಯೆ, ಅನೈತಿಕ ಸಂಬಂಧದ ವಾಸನೆ, ಫೋನ್ ಬಂತು ಅಂತಾ ಮನೆಯಿಂದ ಹೊರಹೋಗಿದ್ದ!
ಹೆಬ್ಬಗೋಡಿ ವ್ಯಾಪ್ತಿಯಲ್ಲಿ ಹಲವಾರು ತಿಂಗಳುಗಳಿಂದ ಬೈಕ್ ಕಳ್ಳತನ ಪ್ರಕರಣಗಳು ಅತಿ ಹೆಚ್ಚು ಬೆಳಕಿಗೆ ಬರುತ್ತಿದ್ದು ರಾತ್ರಿ ವೇಳೆ ಪೊಲೀಸರ ರೌಂಡಿಂಗ್ ಹೆಚ್ಚು ಮಾಡಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ. ಅಲ್ಲದೇ ಬುಲ್ಲೆಟ್ ಬೈಕ್ ಖರೀದಿ ಮಾಡಬೇಕು ಅಂತ ಎಷ್ಟೋ ಆಸೆ ಇಟ್ಟುಕೊಂಡವರೂ ಕೂಡ ಎಲ್ಲಿ ಖರೀದಿಸಿದ ಬುಲೆಟ್ ಕಳುವು ಆಗಿ ಬಿಡುತ್ತೋ ಅಂತ ತಮ್ಮ ಪ್ಲ್ಯಾನನ್ನೇ ಚೇಂಜ್ ಮಾಡಿಕೊಂಡಿದ್ದಾರೆ! ಸಧ್ಯ ಪ್ರಕರಣ ದಾಖಲು ಮಾಡಿಕೊಂಡಿರುವ ಆನೇಕಲ್ ಪೊಲೀಸರು ಕಳ್ಳರ ಪತ್ತೆಗೆ ಪ್ಲ್ಯಾನ್ ಮಾಡಿದ್ದಾರೆ.
ವರದಿ: ಸೈಯ್ಯದ್ ನಿಜಾಮುದ್ದೀನ್, ಟಿವಿ9, ಆನೇಕಲ್
ಇನ್ನಷ್ಟು ಅಪಘಾತ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ