
ಬೆಂಗಳೂರು, ಮೇ 02: ಫ್ಲೈಓವರ್ ಕೇಬಲ್ ಅಳವಡಿಕೆ ದುರಸ್ತಿ ಕಾಮಗಾರಿ ಹಾಗೂ ಅಂತಿಮ ಲೋಡ್ ಟೆಸ್ಟಿಂಗ್ ಹಿನ್ನೆಲೆ ಬೆಂಗಳೂರಿನ (Bengaluru) ಪೀಣ್ಯ ಎಲಿವೇಟೆಡ್ ಫ್ಲೈಓವರ್ 4 ದಿನ ಬಂದ್ ಆಗಲಿದೆ. ಮೇ 5ರ ಬೆಳಗ್ಗೆ 5ರಿಂದ ಮೇ 8ರ ಬೆಳಗ್ಗೆ 11ರವರೆಗೆ ಪ್ಲೈಓವರ್ ಕ್ಲೋಸ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಹೀಗಾಗಿ ಫ್ಲೈಓವರ್ನ 2 ಬದಿಯಲ್ಲಿ ವಾಹನ ಸಂಚಾರಗಳಿಗೆ ನಿರ್ಬಂಧ ವಿಧಿಸಲಾಗಿದ್ದು ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಕೆ ಮಾಡುವಂತೆ ಬೆಂಗಳೂರು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ. ಸುರಕ್ಷತೆ ಮತ್ತು ಸುಗಮ ಸಂಚಾರದ ಹಿತದೃಷ್ಟಿಯಿಂದ ಸೂಚನೆಯನ್ನು ವಾಹನ ಸವಾರರು ಕಟ್ಟುನಿಟ್ಟಾಗಿ ಪಾಲಿಸುವಂತೆ ವಿನಂತಿಯನ್ನೂ ಮಾಡಿದ್ದಾರೆ.
ಕೆನ್ನಮೆಟಲ್ ಫ್ಯಾಕ್ಟರಿಹತ್ತಿರ ಫೈಓವರ್ನ ಫೈಓವರ್ ಕೆಳಭಾಗದ ಎನ್.ಹೆಚ್-4 ಮತ್ತು ಸರ್ವಿಸ್ ರಸ್ತೆ ಮೂಲಕ 8ನೇ ಮೈಲಿ ದಾಸರಹಳ್ಳಿ ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್-ಎಸ್.ಆರ್.ಎಸ್ ಜಂಕ್ಷನ್ – ಗೊರಗುಂಟೆಪಾಳ್ಯ- ಜಾಲಹಳ್ಳಿ ಕ್ರಾಸ್ ಮಾರ್ಗ
ಫೈಓವರ್ ಕೆಳಭಾಗದ ಎನ್.ಹೆಚ್.-4 ಮತ್ತು ಸರ್ವಿಸ್ ರಸ್ತೆ ಮೂಲಕ ಎಸ್.ಆರ್.ಎಸ್ ಜಂಕ್ಷನ್- ಪೊಲೀಸ್ ಠಾಣೆ ಜಂಕ್ಷನ್ -ಜಾಲಹಳ್ಳಿ ಕ್ರಾಸ್ ದಾಸರಹಳ್ಳಿ -8ನೇ ಮೈಲಿ-ರ್ಲೆಜಿ ಟೋಲ್
ಈ ಮೊದಲು ಫ್ಲೈಓವರ್ ಕೇಬಲ್ ಅಳವಡಿಕೆ ದುರಸ್ತಿ ಕಾಮಗಾರಿ ಹಾಗೂ ಅಂತಿಮ ಲೋಡ್ ಟೆಸ್ಟಿಂಗ್ ಹಿನ್ನೆಲೆ ಪೀಣ್ಯ ಎಲಿವೇಟೆಡ್ ಫ್ಲೈಓವರ್ ಏಪ್ರಿಲ್ 13ರಿಂದ 5 ದಿನ ಬಂದ್ ಆಗಲಿದೆ ಎಂದು ತಿಳಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಪ್ರಕ್ರಿಯೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದೂಡಿದ ಪರಿಣಾಮ ಪ್ಲೈಓವರ್ ಮೇಲೆ ವಾಹನಗಳ ಸಂಚಾರಕ್ಕೆ ಎಂದಿನಂತೆ ಅನವುಮಾಡಿಕೊಡಲಾಗಿತ್ತು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಇಂದೂ ಇರಲಿದೆ ವರುಣಾರ್ಭಟ! ಕರಾವಳಿಯಲ್ಲಿ ಹೀಟ್ ವೇವ್ ಜೊತೆ ಮಳೆಯ ಸಾಧ್ಯತೆ
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:09 am, Sat, 2 May 26