
ಬೆಂಗಳೂರು ಮೂಲದ ಸಿಇಒ ಮತ್ತು ಸ್ಟಾರ್ಟ್‌ಅಪ್ ಸಂಸ್ಥಾಪಕರಾದ ಬಿ.ಜಿ. ಮಹೇಶ್ (BG Mahesh) ಅವರು ಹಂಚಿಕೊಂಡ ಈ ಅನುಭವವು ಭಾರತದ ‘ಕ್ವಿಕ್ ಕಾಮರ್ಸ್’ (Quick Commerce) ಕ್ಷೇತ್ರವು ಎಷ್ಟು ವೇಗವಾಗಿ ಮತ್ತು ಜವಾಬ್ದಾರಿಯುತವಾಗಿ ಬೆಳೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಬಿ.ಜಿ. ಮಹೇಶ್ ಅವರ ಕುಟುಂಬದ ಸದಸ್ಯರೊಬ್ಬರು ಮಧ್ಯರಾತ್ರಿ ಸುಮಾರು 12 ಗಂಟೆಗೆ ಬ್ಲಿಂಕಿಟ್ (Blinkit) ಮೂಲಕ ಸಾಮಾನ್ಯ ಔಷಧಿ (OTC Medicine) ಆರ್ಡರ್ ಮಾಡಿದ್ದರು. ಆದರೆ, ಔಷಧಿ ಕೈ ಸೇರುವ ಮೊದಲೇ ಒಬ್ಬ ವೈದ್ಯರು ಕರೆ ಮಾಡಿ, ರೋಗಿಯ ವಯಸ್ಸು ಮತ್ತು ರೋಗಲಕ್ಷಣಗಳ ಬಗ್ಗೆ ವಿಚಾರಿಸಿದರು. “ವಿಶ್ವದ ಬೇರೆಲ್ಲೂ ಇಂತಹ ಸೇವೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ” ಎಂದು ಮಹೇಶ್ ಬ್ಲಿಂಕಿಟ್ ಅನ್ನು ಶ್ಲಾಘಿಸಿದ್ದಾರೆ.
ನಟ್ಟಿಗರೊಬ್ಬರು ತಮ್ಮ ಜೀವನದಲ್ಲಾದ ಘಟನೆಯ ಬಗ್ಗೆ ಹಂಚಿಕೊಂಡಿದ್ದಾರೆ. ರಾತ್ರಿ 2 ಗಂಟೆಗೆ ಜ್ವರದ ಮಾತ್ರೆ ಆರ್ಡರ್ ಮಾಡಿದಾಗ ವೈದ್ಯರು ಕರೆ ಮಾಡಿ ಅಲರ್ಜಿಗಳ ಬಗ್ಗೆ ವಿಚಾರಿಸಿದ್ದು ಅವರಿಗೆ ಭರವಸೆ ಮೂಡಿಸಿತ್ತು. ಭಾರತದ ಈ ವ್ಯವಸ್ಥೆಯನ್ನು ಅಮೆರಿಕಾದಲ್ಲಿನ ಪರಿಸ್ಥಿತಿಗೆ ಹೋಲಿಸಿದ ವ್ಯಕ್ತಿಯೊಬ್ಬರು, ಡೆಲಿವರಿ ಮಾಡುವವರು ಔಷಧಿ ಬೆಲೆಗಿಂತ 10 ಪಟ್ಟು ಹೆಚ್ಚು ಟಿಪ್ಸ್ ಕೇಳುತ್ತಾರೆ ಮತ್ತು ಅಲ್ಲಿನ ಸೇವೆ ಇಷ್ಟು ವೇಗವಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಬ್ಲಿಂಕಿಟ್ ಕೇವಲ ವಸ್ತುಗಳನ್ನು ಮಾತ್ರ ತಲುಪಿಸುತ್ತಿಲ್ಲ. ತುರ್ತು ದಾಖಲೆಗಳು, ಆಂಬುಲೆನ್ಸ್ ಮತ್ತು ವೈದ್ಯಕೀಯ ನೆರವಿನ ಮೂಲಕ ಜನರ ಜೀವನವನ್ನೇ ಬದಲಿಸಿದೆ ಎಂಬುದು ಅನೇಕರ ಅಭಿಪ್ರಾಯ.
A family member had to order a medicine (over-the-counter) from Blinkit at midnight. Even before we received the medicine, a doctor called to ask how old the patient was, what symptoms the patient had, etc. Well done Blinkit
We cannot expect this kind of service anywhere else in…
— BG Mahesh (@bgmahesh) January 25, 2026
ಬೆಂಗಳೂರಿನ ಆಯ್ದ ಭಾಗಗಳಲ್ಲಿ ಪ್ರಿಸ್ಕ್ರಿಪ್ಷನ್ ಮತ್ತು ಓಟಿಸಿ ಔಷಧಿಗಳನ್ನು 10 ನಿಮಿಷದಲ್ಲಿ ವಿತರಣೆ ಮಾಡುತ್ತದೆ. ಔಷಧಿ ಕಳುಹಿಸುವ ಮೊದಲು ಅರ್ಹ ವೈದ್ಯರಿಂದ ತಕ್ಷಣದ ಸಮಾಲೋಚನೆ ಅಥವಾ ಪ್ರಿಸ್ಕ್ರಿಪ್ಷನ್ ಪರಿಶೀಲನೆ ಮಾಡುತ್ತದೆ. ಗುರುಗ್ರಾಮದಂತಹ ನಗರಗಳಲ್ಲಿ ಬ್ಲಿಂಕಿಟ್ 10 ನಿಮಿಷಗಳಲ್ಲಿ ಆಂಬುಲೆನ್ಸ್ ತಲುಪಿಸುವ ಸೇವೆಯನ್ನು ಆರಂಭಿಸಿದೆ. 2026 ರಲ್ಲಿ ಆರೋಗ್ಯ ತಂತ್ರಜ್ಞಾನ ವಲಯದಲ್ಲಿ ಬ್ಲಿಂಕಿಟ್‌ನ ವಿಸ್ತರಣೆ ಮಾಡಿಕೊಂಡಿದೆ. ಬೆಂಗಳೂರಿನ ಆಯ್ದ ಪ್ರದೇಶಗಳಲ್ಲಿ ಬ್ಲಿಂಕಿಟ್ ಪ್ರಿಸ್ಕ್ರಿಪ್ಷನ್ ಮತ್ತು OTC ಔಷಧಿಗಳೆರಡಕ್ಕೂ 10 ನಿಮಿಷಗಳ ವಿತರಣೆಯನ್ನು ಪ್ರಾಯೋಗಿಕವಾಗಿ ನಡೆಸುತ್ತಿದೆ.
ಇದನ್ನೂ ಓದಿ: ಕೆಫೆಯಲ್ಲಿ ಹೆಚ್ಚು ಸಮಯ ಕಳೆಯುವಂತಿಲ್ಲ: ಪ್ರತಿ ಹೆಚ್ಚುವರಿ ಗಂಟೆಗೆ 1,000 ರೂ. ದಂಡ
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಬ್ಲಿಂಕಿಟ್ ಈಗ ಪ್ರಿಸ್ಕ್ರಿಪ್ಷನ್ ಬೇಕಾದ ಔಷಧಿಗಳು ಮತ್ತು ಸಾಮಾನ್ಯ (OTC) ಔಷಧಿಗಳನ್ನು ಕೇವಲ 10 ನಿಮಿಷಗಳಲ್ಲಿ ಮನೆಗೆ ತಲುಪಿಸುತ್ತಿದೆ. ಇದು ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ವರದಾನವಾಗಿದೆ. ಬಿ.ಜಿ. ಮಹೇಶ್ ಅವರು ಹಂಚಿಕೊಂಡ ಅನುಭವದಂತೆ, ನೀವು ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷಧಿ ಆರ್ಡರ್ ಮಾಡಿದರೆ ಅಥವಾ ಪ್ರಿಸ್ಕ್ರಿಪ್ಷನ್ ಹಳೆಯದಾಗಿದ್ದರೆ, ಅದಕ್ಕೂ ಕೂಡ ವೈದ್ಯ ಬಳಿ ಚರ್ಚಿಸಿ ಔಷಧಿ ನೀಡುತ್ತದೆ. ಈಗ ಬ್ಲಿಂಕಿಟ್‌ನಲ್ಲಿ ರಕ್ತದೊತ್ತಡ ಮಾಪಕ (BP Monitor), ಗ್ಲುಕೋಮೀಟರ್ ಮಾತ್ರವಲ್ಲದೆ, ತಕ್ಷಣವೇ ಫಲಿತಾಂಶ ನೀಡುವ ರಕ್ತ ಪರೀಕ್ಷೆಯ ಕಿಟ್‌ಗಳು ಕೂಡ ಲಭ್ಯವಿವೆ. ಅಲ್ಲದೆ, ಮನೆಗೇ ಬಂದು ರಕ್ತದ ಮಾದರಿ ಸಂಗ್ರಹಿಸುವ ಸೇವೆಯನ್ನೂ ಬ್ಲಿಂಕಿಟ್ ಮಾಡುತ್ತದೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ