ಕೆಫೆಯಲ್ಲಿ ಹೆಚ್ಚು ಸಮಯ ಕಳೆಯುವಂತಿಲ್ಲ: ಪ್ರತಿ ಹೆಚ್ಚುವರಿ ಗಂಟೆಗೆ 1,000 ರೂ. ದಂಡ
ಬೆಂಗಳೂರಿನ ಕೆಫೆಯೊಂದು ದೀರ್ಘಾವಧಿ ಕುಳಿತುಕೊಳ್ಳುವ ಗ್ರಾಹಕರಿಗೆ ಗಂಟೆಗೆ ₹1,000 ಶುಲ್ಕ ವಿಧಿಸಿ ಸುದ್ದಿಯಾಗಿದೆ. ಇದರಿಂದ ವ್ಯಾಪಾರಕ್ಕೆ ನಷ್ಟವಾಗುತ್ತಿದೆ ಎಂಬುದು ಮಾಲೀಕರ ವಾದ. ಇದು ಉಚಿತ ಸಹ-ಕೆಲಸದ ಸ್ಥಳವಲ್ಲ, ಖಾಸಗಿ ಆಸ್ತಿ ಎಂಬುದು ಹಲವರ ಅಭಿಪ್ರಾಯ. ಆದರೆ, ಕೆಫೆಗಳು ಹಲವರಿಗೆ ಅವಶ್ಯಕ, ಈ ಶುಲ್ಕ ಹೆಚ್ಚು ಎಂದು ಕೆಲವರು ಆಕ್ಷೇಪಿಸಿದ್ದಾರೆ. ಈ ನಿರ್ಧಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆಂಗಳೂರು, ಜ.27: ಬೆಂಗಳೂರಿನ ಪ್ರಸಿದ್ಧ ಕೆಫೆಯೊಂದರಲ್ಲಿ ಹೆಚ್ಚು ಕಾಲ ಕಳೆಯುವವರಿಗೆ ಶಾಕ್ ನೀಡಿದೆ. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತನ್ನ ಕೆಫೆಯ ಮುಂದೆ ಅಂಟಿಸಿರುವ ನೋಟಿಸ್ ನೋಡಿ ಎಲ್ಲರಿಗೂ ಅಚ್ಚರಿಯನ್ನು ತಂದಿದೆ. ಬೆಂಗಳೂರಿನ ಪ್ರಸಿದ್ಧ ಈಟರಿಯೊಂದು (Eatery/Cafe) ತನ್ನ ಆವರಣದಲ್ಲಿ “ದೀರ್ಘಾವಧಿಯ ಸಭೆಗಳನ್ನು” (Long Meetings) ನಿಷೇಧಿಸಿ ಅಧಿಕೃತ ನೋಟಿಸ್ ಅಂಟಿಸಿದೆ. ನಿಗದಿಪಡಿಸಿದ ಸಮಯಕ್ಕಿಂತ ಹೆಚ್ಚು ಕಾಲ ಸಭೆ ಅಥವಾ ಲ್ಯಾಪ್‌ಟಾಪ್ ಕೆಲಸವನ್ನು ಮುಂದುವರಿಸಿದರೆ, ಪ್ರತಿ ಹೆಚ್ಚುವರಿ ಗಂಟೆಗೆ ₹1,000 ದಂಡ ಅಥವಾ ‘ಸೇವಾ ಶುಲ್ಕ’ ಪಾವತಿಸಬೇಕಾಗುತ್ತದೆ ಎಂದು ನೋಟಿಸ್ ಹಾಕಿದೆ. ಸಣ್ಣ ಕೆಫೆಗಳಲ್ಲಿ ಜನರು ಕೇವಲ ಒಂದು ಕಪ್ ಕಾಫಿ ಆರ್ಡರ್ ಮಾಡಿ ಗಂಟೆಗಟ್ಟಲೆ ಲ್ಯಾಪ್‌ಟಾಪ್ ಹಿಡಿದು ಕುಳಿತುಕೊಳ್ಳುವುದರಿಂದ, ಹೊಸದಾಗಿ ಬರುವ ಗ್ರಾಹಕರಿಗೆ ಸೀಟು ಸಿಗುತ್ತಿಲ್ಲ. ಇದರಿಂದ ವ್ಯಾಪಾರಕ್ಕೆ ನಷ್ಟವಾಗುತ್ತಿದೆ ಎಂದು ಮಾಲೀಕರು ಅಳಲು ತೋಡಿಕೊಂಡಿದ್ದಾರೆ.
ಕೆಫೆಗಳು ವ್ಯಾಪಾರ ಮಾಡಲು ಇರುವ ಜಾಗವೇ ಹೊರತು ಉಚಿತ ಕೋ-ವರ್ಕಿಂಗ್ ಸ್ಪೇಸ್ (Co-working space) ಅಲ್ಲ. ಮಾಲೀಕರ ನಿರ್ಧಾರ ಸರಿ ಇದೆ ಅನೇಕರ ಕಮೆಂಟ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮನೆಗಳು ಚಿಕ್ಕದಾಗಿರುತ್ತವೆ ಮತ್ತು ಆಫೀಸ್ ದೂರವಿರುತ್ತದೆ, ಹೀಗಾಗಿ ಕೆಫೆಗಳೇ ನಮಗೆ ಆಸರೆ. ಇಷ್ಟು ದುಬಾರಿ ಶುಲ್ಕ ವಿಧಿಸುವುದು ಸರಿಯಲ್ಲ ಇನ್ನು ಕೆಲವರು ಕಮೆಂಟ್ ಮಾಡಿದ್ದಾರೆ. ಬೆಂಗಳೂರನ್ನು ‘ಸ್ಟಾರ್ಟ್‌ಅಪ್ ಕ್ಯಾಪಿಟಲ್’ ಎಂದು ಕರೆಯಲಾಗುತ್ತದೆ. ಇಲ್ಲಿನ ಅನೇಕ ಐಡಿಯಾಗಳು ಕೆಫೆಗಳಲ್ಲಿ ಹುಟ್ಟಿಕೊಂಡಿವೆ. ಆದರೆ, ಇತ್ತೀಚೆಗೆ ಹೆಚ್ಚುತ್ತಿರುವ ಬಾಡಿಗೆ ಮತ್ತು ನಿರ್ವಹಣಾ ವೆಚ್ಚದಿಂದಾಗಿ ಮಾಲೀಕರು ಅನಿವಾರ್ಯವಾಗಿ ಇಂತಹ ಕಠಿಣ ಕ್ರಮಗಳಿಗೆ ಮುಂದಾಗುತ್ತಿದ್ದಾರೆ.
ಇದನ್ನೂ ಓದಿ: ನಗರದ 9 ಮೆಟ್ರೋ ನಿಲ್ದಾಣಗಳಲ್ಲಿ ಉಚಿತ ಸೈಕಲ್ ಪಾರ್ಕಿಂಗ್ ಸೌಲಭ್ಯ!
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
saw this notice posted at an eatery in BLR pic.twitter.com/nnEpjPjRjg
— Shobhit Bakliwal (@shobhitic) January 25, 2026
ಪೋಸ್ಟ್ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಂತರ ಆನ್‌ಲೈನ್‌ನಲ್ಲಿ ಸಾವಿರಾರು ಜನರನ್ನು ಆಕರ್ಷಿಸಿತು. ಈ ಪೋಸ್ಟ್ ಅಲ್ಪಾವಧಿಯಲ್ಲಿಯೇ 30,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ್ದು, ವ್ಯಾಪಕ ಪ್ರತಿಕ್ರಿಯೆಗಳನ್ನು ಗಳಿಸಿದೆ.ಒಂದು ಹೋಟೆಲ್ ಅಥವಾ ಕೆಫೆ ‘ಖಾಸಗಿ ಆಸ್ತಿ’ಯಾಗಿರುತ್ತದೆ. ಅಲ್ಲಿಗೆ ಪ್ರವೇಶ ನೀಡುವ ಅಥವಾ ಅಲ್ಲಿನ ನಿಯಮಗಳನ್ನು ರೂಪಿಸುವ ಹಕ್ಕು ಮಾಲೀಕರಿಗೆ ಇರುತ್ತದೆ. ಹಾಗಾಗಿ ಅವರು ಹೇಳಿದಂತೆ ಕೇಳಬೇಕಾಗುತ್ತದೆ. ಮಾಲೀಕರು ತಮ್ಮ ಆವರಣದಲ್ಲಿ ಗ್ರಾಹಕರು ಎಷ್ಟು ಸಮಯ ಇರಬೇಕು ಎಂಬ ನಿಯಮವನ್ನು ರೂಪಿಸಬಹುದು. ಎಂಬು ಕಾನೂನು ಕೂಡ ಇದೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
