Bengaluru News ಕಟ್ಟಿಂಗ್​ಗೆ ಹೋಗುತ್ತೀನೆಂದು ಬಟ್ಟೆ ಸಮೇತ ಮನೆ ಬಿಟ್ಟ ಬಾಲಕ; ಜ್ಯೋತಿಷಿ ಹೇಳಿದ ಸ್ಥಳದಲ್ಲಿ ಪೋಷಕರ, ಪೊಲೀಸರ ಹುಡುಕಾಟ

|

Updated on: Jun 06, 2023 | 7:15 AM

ಆದಿತ್ಯಾ ಅಮ್ಮನ ಫೋನ್​ನಲ್ಲಿ ಮಲ್ಪೆ, ಮೈಸೂರಿನ ಕೆಲ ಭಾಗಗಳ ಬಗ್ಗೆ ಸರ್ಚ್ ಮಾಡಿ ಊರು ಬಿಟ್ಟಿದ್ದಾನೆ. ಮೇ 29ರಂದು ಕಟ್ಟಿಂಗ್ ಶಾಪ್​ಗೆಂದು ಮನೆಯಿಂದ ತೆರಳಿದ್ದ ಆದಿತ್ಯಾ ಬಟ್ಟೆ ಸಮೇತ ಮನೆ ಬಿಟ್ಟಿದ್ದಾನೆ.

Bengaluru News ಕಟ್ಟಿಂಗ್​ಗೆ ಹೋಗುತ್ತೀನೆಂದು ಬಟ್ಟೆ ಸಮೇತ ಮನೆ ಬಿಟ್ಟ ಬಾಲಕ; ಜ್ಯೋತಿಷಿ ಹೇಳಿದ ಸ್ಥಳದಲ್ಲಿ ಪೋಷಕರ, ಪೊಲೀಸರ ಹುಡುಕಾಟ
ಬ್ಯಾಗ್ ಸಮೇತ ಮನೆ ಬಿಟ್ಟು ಹೋಗುತ್ತಿರುವ ಆದಿತ್ಯನ ಸಿಸಿಟಿವಿ ದೃಶ್ಯ
Follow us on

ಬೆಂಗಳೂರು: ಆರ್.ಟಿ.ನಗರ ಪೊಲೀಸ್ ಠಾಣಾ(RT Nagar Police station) ವ್ಯಾಪ್ತಿಯಲ್ಲಿ 9ನೇ ತರಗತಿ ಓದುತ್ತಿದ್ದ ಆದಿತ್ಯಾ ಎಂಬ ಬಾಲಕ ನಾಪತ್ತೆಯಾಗಿದ್ದಾನೆ(Boy Missing). ತನ್ನ ತಾಯಿಯ ಮೊಬೈಲ್​ನಲ್ಲಿ ಕೆಲವು ಪ್ರವಾಸಿ ತಾಣಗಳ(Tourist Place) ಬಗ್ಗೆ ಸರ್ಚ್ ಮಾಡಿ ಮಾಹಿತಿ ಸಂಗ್ರಹಿಸಿ ಬ್ಯಾಗ್​ನಲ್ಲಿ ಬಟ್ಟೆ ತುಂಬಿಕೊಂಡು ಮನೆ ಬಿಟ್ಟಿದ್ದು ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಾಗೂ ಮನಗ ಬಗ್ಗೆ ಜ್ಯೋತಿಷ್ಯ ಕೇಳಿ ಗುರೂಜಿ ಸಲಹೆಯಂತೆ ಹುಡುಕಾಟ ನಡೆಸುತ್ತಿದ್ದಾರೆ. ಒಂದು ಕಡೆ ಪೊಲೀಸ್ ಮತ್ತೊಂದೆಡೆ ಪೋಷಕರು 9 ವರ್ಷದ ಬಾಲಕನಿಗಾಗಿ ಹಗಲು-ರಾತ್ರಿ ಹುಡುಕಾಟ ನಡೆಸುತ್ತಿದ್ದು ಬಾಲಕ ಮಾತ್ರ ಇನ್ನೂ ಸಿಕ್ಕಿಲ್ಲ.

ಆದಿತ್ಯಾ ಅಮ್ಮನ ಫೋನ್​ನಲ್ಲಿ ಮಲ್ಪೆ, ಮೈಸೂರಿನ ಕೆಲ ಭಾಗಗಳ ಬಗ್ಗೆ ಸರ್ಚ್ ಮಾಡಿ ಊರು ಬಿಟ್ಟಿದ್ದಾನೆ. ಮೇ 29ರಂದು ಕಟ್ಟಿಂಗ್ ಶಾಪ್​ಗೆಂದು ಮನೆಯಿಂದ ತೆರಳಿದ್ದ ಆದಿತ್ಯಾ ಬಟ್ಟೆ ಸಮೇತ ಮನೆ ಬಿಟ್ಟಿದ್ದಾನೆ. ಇದರಿಂದ ಗಾಬರಿಗೊಳಗಾದ ಪೋಷಕರು ಜ್ಯೋತಿಷ್ಯರ ಮೊರೆ ಹೋಗಿದ್ದಾರೆ. ಜ್ಯೋತಿಷ್ಯರ ಮಾತು ಕೇಳಿ ಕರಾವಳಿ ಭಾಗದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಬಾಲಕ ಮನೆ ಬಿಟ್ಟು ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಆರ್.ಟಿ.ನಗರ ಸೇರಿ ಮಲ್ಪೆ ಭಾಗದ ಠಾಣೆಗೆ ಪೊಲೀಸರಿಂದ ಮಾಹಿತಿ ನೀಡಲಾಗಿದೆ. ಸದ್ಯ ಬಾಲಕ ಮೈಸೂರು ಭಾಗದಲ್ಲಿ ಇದ್ದಾನೆಂದು ಮಾಹಿತಿ ಸಿಕ್ಕಿದೆ. ಆದರೆ ಇನ್ನೂ ಕೂಡ ನಿಖರತೆ ಇಲ್ಲ. ಹಗಲು ರಾತ್ರಿ ಪೊಲೀಸರ ಜೊತೆ ಪೋಷಕರು ಮಗನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಸಂಬಂಧ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹಗಲು ರಾತ್ರಿ ಹುಡುಕಾಡಿದರು ಪತ್ತೆಯಾಗುತ್ತಿಲ್ಲ ಮೂವರು ಮಕ್ಕಳ ಸುಳಿವು: ಬೆಂಗಳೂರಿನಲ್ಲೊಂದು ವಿಚಿತ್ರ ಮಿಸ್ಸಿಂಗ್ ಸ್ಟೋರಿ!

ನಿಂತಿದ್ದ ಲಾರಿಗೆ ಕ್ರೂಷರ್ ವಾಹನ ಡಿಕ್ಕಿ ಐವರು ಭಕ್ತರ ಸಾವು

ಯಾದಗಿರಿ: ನಿಂತಿದ್ದ ಲಾರಿಗೆ ಕ್ರೂಷರ್​ ವಾಹನ (Crusher vehicle) ಡಿಕ್ಕಿಯಾಗಿ ಐವರು ಭಕ್ತರು (Devotees) ಸಾವನ್ನಪ್ಪಿರುವ ಘಟನೆ ಯಾದಗಿರಿ (Yadgiri) ತಾಲೂಕಿನ ಬಳಿಚಕ್ರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 150 ಎ‌ ನಲ್ಲಿ ನಡೆದಿದೆ. ಘಟನೆಯಲ್ಲಿ 13 ಜನರಿಗೆ ಗಾಯಗಳಾಗಿದ್ದು, ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮುನೀರ್(40), ನಯಾಮತ್ (40), ಮುದಶಿರ್ (12), ರಮೀಜಾ ಬೇಗಂ (50), ಸುಮ್ಮಿ (12) ಮೃತ ದುರ್ದೈವಿಗಳು. ಘಟನೆಯಲ್ಲಿ ಓರ್ವ ಬಾಲಕಿ, ಓರ್ವ ಬಾಲಕ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಭಕ್ತರು ಆಂಧ್ರಪ್ರದೇಶದ (Andhra Pradesh) ನಂದ್ಯಾಲ್ ಜಿಲ್ಲೆಯವರಾಗಿದ್ದು, ಕಲಬುರಗಿಯ ಖಾಜಾ ಬಂದೇನವಾಜ ದರ್ಗಾದ ಉರುಸ್ ಜಾತ್ರೆಗೆ ಆಗಮಿಸುತ್ತಿದ್ದರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಸೈದಾಪುರ ಪೊಲೀಸರು ಭೇಟಿ ನೀಡಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ