ನಟ ಸುದೀಪ್ ಬಿಜೆಪಿ ಪರ ಪ್ರಚಾರಕ್ಕೆ ಕಾಂಗ್ರೆಸ್ ಲೇವಡಿ ಬಗ್ಗೆ ಬಿಎಸ್ ಯಡಿಯೂರಪ್ಪ ಹೇಳಿದ್ದಿಷ್ಟು

|

Updated on: Apr 06, 2023 | 10:40 AM

ಚಿತ್ರದಲ್ಲಿ ಫೇಮಸ್ ಆಗಿರುವಂತಹ ವ್ಯಕ್ತಿ ಬಿಜೆಪಿಗೆ ಸಪೋರ್ಟ್ ಮಾಡ್ತೀನಿ ಎಂದು ಹೇಳಿದ್ದಾರೆ ಅದನ್ನ ನಾವು ಸ್ವಾಗತ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ(B. S. Yediyurappa) ಹೇಳಿದರು.

ನಟ ಸುದೀಪ್ ಬಿಜೆಪಿ ಪರ ಪ್ರಚಾರಕ್ಕೆ ಕಾಂಗ್ರೆಸ್ ಲೇವಡಿ ಬಗ್ಗೆ ಬಿಎಸ್ ಯಡಿಯೂರಪ್ಪ ಹೇಳಿದ್ದಿಷ್ಟು
ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ
Follow us on

ಬೆಂಗಳೂರು: ಚಲನಚಿತ್ರದಲ್ಲಿ ಫೇಮಸ್ ಆಗಿರುವಂತಹ ವ್ಯಕ್ತಿ ಬಿಜೆಪಿಗೆ ಸಪೋರ್ಟ್ ಮಾಡ್ತೀನಿ ಎಂದು ಹೇಳಿದ್ದಾರೆ ಅದನ್ನ ನಾವು ಸ್ವಾಗತ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ(B. S. Yediyurappa) ಹೇಳಿದರು. ನಟ  ಸುದೀಪ್ (Kichcha Sudeep) ಬಿಜೆಪಿ ಪರ ಪ್ರಚಾರ ಕುರಿತು ಕಾಂಗ್ರೆಸ್ ಲೇವಡಿ ಮಾಡಿದ ವಿಚಾರವಾಗಿ ಮಾದ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ‘ಕಾಂಗ್ರೆಸ್​ನವರಿಗೆ ತಲೆ ಕೆಟ್ಟು ಏನು ಬೇಕಾದರೂ ಮಾತಾಡುತ್ತಾರೆ, ಬಿಜೆಪಿಯವರಿಗೆ ಸಪೋರ್ಟ್ ಸಿಕ್ತಿರೋದನ್ನು ಕಾಂಗ್ರೆಸ್​ನವರಿಗೆ ಸಹಿಸೋಕೆ ಆಗುತ್ತಿಲ್ಲ ಎಂದರು.

ಇನ್ನು ಇದೇ ಸಂದರ್ಭದಲ್ಲಿ ವರುಣ ಕ್ಷೇತ್ರದಿಂದ ಸಚಿವ ವಿ.ಸೋಮಣ್ಣ ಸ್ಪರ್ಧೆ ವಿಚಾರವಾಗಿ ಮಾತನಾಡಿ‘ ಈ ಕುರಿತು ಹೈಕಮಾಂಡ್ ಏನು ಹೇಳುತ್ತದೆಯೋ ಅದೇ ಫೈನಲ್ ಆಗಲಿದೆ. ನಾಳೆ(ಏ.7) ಅಭ್ಯರ್ಥಿಗಳ ಪಟ್ಟಿ ಹೈಕಮಾಂಡ್​​ಗೆ ಕಳಿಸಿಕೊಡಲಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ:ವಾಟ್ಸಪ್​ ಗ್ರೂಪ್​ನಲ್ಲಿ ರಾಜಕೀಯ ಮಾಡಿದವರಿಗೆ ಚುನಾವಣಾ ಆಯೋಗ ಶಾಕ್, ಅಡ್ಮಿನ್‌ಗಳೇ ಎಚ್ಚರ

ಸುದೀಪ್​ ಯಾವುದೇ ಪಕ್ಷ ಸೇರದಿದ್ದರೂ ನನ್ನ ಜೊತೆಗೆ ಬಿಜೆಪಿ ಪರವೂ ಪ್ರಚಾರ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 

ಬೆಂಗಳೂರು: ಹೌದು ನಿನ್ನೆ(ಏ.5) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕನ್ನಡದ ನಟ ಕಿಚ್ಚ ಸುದೀಪ್​ ಅವರು ಯಾವುದೇ ಪಕ್ಷಕ್ಕೆ ಸೇರದಿದ್ದರೂ ನನ್ನ ಜೊತೆಗೆ ಬಿಜೆಪಿ ಪರವೂ ಪ್ರಚಾರ ನಡೆಸಲಿದ್ದಾರೆ ಎಂದು ಹೇಳಿದ್ದರು. ಸುದೀಪ್ ಅವರು ರಾಜಕೀಯದಲ್ಲಿಲ್ಲ, ಚಲನಚಿತ್ರದಲ್ಲಿದ್ದಾರೆ. ಸುದೀಪ್​ ಚಲನಚಿತ್ರ ರಂಗದಲ್ಲಿ ಒಳ್ಳೆಯ ಸಾಧನೆ ಮಾಡಿದ್ದಾರೆ. ನಮ್ಮ ಪಕ್ಷಕ್ಕೆ ಸೇರದೆ ಇದ್ದರೂ ನಿನ್ನ ಪ್ರಚಾರದ ಅಗತ್ಯವಿದೆ ಎಂದಿದ್ದೇನೆ. ಹೀಗಾಗಿ ಅವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರದೆ​ ನನಗೆ ಬೆಂಬಲ ಕೊಡುತ್ತಿದ್ದಾರೆ. ನನ್ನ ಜೊತೆಗೆ ನಮ್ಮ ಪಕ್ಷಕ್ಕೂ ಪ್ರಚಾರ ಮಾಡುತ್ತಾರೆ ಎನ್ನುವ ಮೂಲಕ ಸುದೀಪ್​ ಬಿಜೆಪಿ ಪಕ್ಷ ಸೇರ್ಪಡೆ ಕುರಿತು ಸ್ಪಷ್ಟನೆ ನೀಡಿದ್ದರು.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ