ವಾಟ್ಸಪ್ ಗ್ರೂಪ್ನಲ್ಲಿ ರಾಜಕೀಯ ಮಾಡಿದವರಿಗೆ ಚುನಾವಣಾ ಆಯೋಗ ಶಾಕ್, ಅಡ್ಮಿನ್‌ಗಳೇ ಎಚ್ಚರ
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಎಲ್ಲೆಡೆ ನೀತಿ ಸಂಹಿತೆ ಜಾರಿಯಲ್ಲಿದೆ. ಹಾಗಾಗಿ ರಾಜಕೀಯ ಸಂದೇಶಗಳನ್ನು ರವಾಸಿಸು ವಾಟ್ಸಾಪ್ ಗ್ರೂಪ್ ಅಡ್ಮಿನ್ ವಿರುದ್ಧ ಕಠಿಣ ಕ್ರಮಕೊಳ್ಳಲಾಗುವುದು ಎಂದು ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.
ಹುಬ್ಬಳ್ಳಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ದಿನಗಣನೆ ಬಾಕಿ ಉಳಿದಿದೆ. ರಾಜ್ಯದಲ್ಲಿ ಎಲ್ಲೆಡೆ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಹಿನ್ನೆಲೆ ರಾಜಕೀಯ ಸಂದೇಶಗಳನ್ನು ರವಾನಿಸುವ ವಾಟ್ಸಾಪ್ ಗ್ರೂಪ್ ಅಡ್ಮಿನ್ ವಿರುದ್ಧ ಕಠಿಣ ಕ್ರಮಕೊಳ್ಳಲಾಗುವುದು ಎಂದು ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ. ಇತ್ತೀಚೆಗೆ ಕೊಡಗಿನಲ್ಲಿ ಗ್ರೂಪ್ ಅಡ್ಮಿನ್ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಹಲವು ಅಡ್ಮಿನ್‌ಗಳು ಆತಂಕಕ್ಕೆ ಒಳಗಾಗಿದ್ದು, ಇಂತಹ ಸಂದೇಶಗಳಿಂದ ದೂರವಿರುವಂತೆ ಆಯಾ ಗುಂಪಿನ ಸದಸ್ಯರಿಗೆ ಅಡ್ಮಿನ್‌ಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ. ಸಾಕಷ್ಟು ವಾಟ್ಸಾಪ್ ಗ್ರೂಪ್ ಅಡ್ಮಿನ್‌ಗಳು ಸಂದೇಶ ರವಾನೆ ಅಧಿಕಾರವನ್ನು ತಮ್ಮಷ್ಟಕ್ಕೆ ಮಿತಿಗೊಳಿಸಿಕೊಂಡಿದ್ದಾರೆ. ಆದರೂ ಕೆಲ ಸ್ಥಳಿಯ ನಿವಾಸಿಗಳು, ಉದ್ಯಮಿಗಳು, ಕಾರ್ಯಕರ್ತರು ಮತ್ತು ಬರಹಗಾರರಂತಹ ಮುಕ್ತ ವಾಟ್ಸಾಪ್ ಗ್ರೂಪ್ಗಳಿಂದ ಬರುವಂತಹ ಸಂದೇಶಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ.
ಇಂಥಹ ಸಂದೇಶಗಳನ್ನು ರವಾನಿಸುತ್ತಿದ್ದ ಕೆಲ ಸದಸ್ಯರನ್ನು ವಾಟ್ಸಾಪ್ ಗ್ರೂಪ್ ಅಡ್ಮಿನ್‌ಗಳು ಈಗಾಗಲೇ ತೆಗೆದುಹಾಕಿದ್ದಾರೆ. ಈ ಕುರಿತಾಗಿ ವ್ಯವಹಾರ, ಸಾಮಾಜಿಕ ಚಟುವಟಿಕೆ, ಸಮಾನ ಮನಸ್ಕ ಜನರು, ಕುಟುಂಬ ಮತ್ತು ಸ್ನೇಹಿತರು ಹೀಗೆ 4-5 ಗುಂಪುಗಳನ್ನು ನಿರ್ವಹಿಸುತ್ತಿರುವ ಹುಬ್ಬಳ್ಳಿ ಮೂಲದ ಲಿಂಗರಾಜ್ ಎಂಬುವವರು ಟೈಮ್ಸ್ ಆಫ್ ಇಂಡಿಯಾಗೆ ಮಾಹಿತಿ ನೀಡಿದ್ದಾರೆ.
ಕೊಡಗಿನ ಪ್ರಕರಣದಿಂದ ಎಚ್ಚೆತ್ತ ವಾಟ್ಸಾಪ್ ಗ್ರೂಪ್ ಅಡ್ಮಿನ್ಸ್
ಕೊಡಗಿನ ಪ್ರಕರಣವನ್ನು ನೋಡಿದ ಬಳಿಕ ರಾಜಕೀಯ ಸಂಬಂಧಿತ ಸಂದೇಶಗಳನ್ನು ರವಾನೆ ಮಾಡದಂತೆ ನಮ್ಮ ಗುಂಪಿನ ಸದಸ್ಯರಿಗೆ ಸೂಚಿಸಿದ್ದೇವೆ. ಅಡ್ಮಿನ್‌ಗಳಿಗೆ ಮಾತ್ರ ಸಂದೇಶಗಳನ್ನು ಕಳುಹಿಸಲು ಅನುಮತಿಸುವ ಕೆಲವು ಗುಂಪುಗಳ ಸೆಟ್ಟಿಂಗ್‌ಗಳನ್ನು ಸಹ ನಾವು ಬದಲಾಯಿಸಿದ್ದೇವೆ. ಒಬ್ಬರ ಅಭಿವ್ಯಕ್ತಿಯನ್ನು ನಿಗ್ರಹಿಸುತ್ತಿದ್ದೇವೆ ಎಂದು ನಾವು ಭಾವಿಸಿದ್ದೇವೆ, ಆದರೆ ಅನೇಕ ಜನರು ನೀತಿ ಸಂಹಿತೆಯ ನಿಯಮಗಳನ್ನು ಪಾಲಿಸದ ಕಾರಣ ಅಸಹಾಯಕರಾಗಿದ್ದೇವೆ. ಕೆಲವರು ಯೋಚಿಸದೆ ಸಂದೇಶಗಳನ್ನು ಫಾರ್ವರ್ಡ್ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಇಂದು ಸಿಎಂ 2 ಪ್ರತ್ಯೇಕ ಸುದ್ದಿಗೋಷ್ಠಿ: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಬೊಮ್ಮಾಯಿ ನಡೆ
ತಮ್ಮ ಕಾಲೋನಿಯಲ್ಲಿರುವ ಲಿಂಗರಾಜ್ ನಗರ ಫ್ರೆಂಡ್ಸ್ ಗುಂಪಿನ ಅಡ್ಮಿನ್ ಆಗಿರುವ ಎಲ್‌ಐಸಿ ಅಧಿಕಾರಿ ಎಂಕೆ ಪಾಟೀಲ್ ಮಾತನಾಡಿ, ಅಡ್ಮಿನ್‌ಗಳು ಕಂಪನಿಗೆ ಸಂಬಂಧಿಸಿದ ಗುಂಪುಗಳಾಗಿರಬಹುದು ಅಥವಾ ಇಲಾಖೆಗಳು, ಅದೇ ವೃತ್ತಿಗಳು ಮತ್ತು ಕಂಪನಿಗಳಂತಹ ಉದ್ಯೋಗಿಗಳ ಗುಂಪಿನಲ್ಲಿರುವ ಸಂದೇಶಗಳನ್ನು ನಿಯಂತ್ರಿಸಬಹುದಾಗಿ ಎಂದು ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ್ ಸಜ್ಜನ್ ಮಾತನಾಡಿ, ಸದಸ್ಯರೆಲ್ಲರೂ ಸರ್ಕಾರಿ ಶಿಕ್ಷಕರಾಗಿರುವುದರಿಂದ ಅವರು ಅಂತಹ ಸಮಸ್ಯೆಗಳನ್ನು ಎದುರಿಸುತ್ತಿಲ್ಲ. ಮತ್ತು ಕೆಲವರು ಪರಿಸ್ಥತಿಯನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಇತರೆ ಕೆಲ ಗ್ರೂಪ್ಪಿನ ಸದಸ್ಯರು ಇದ್ದಕ್ಕಿದ್ದಂತೆ ರಾಜಕೀಯ ಸಂದೇಶಗಳನ್ನು ಕಳುಹಿಸುತ್ತಿದ್ದು, ತಲೆನೋವಾಗಿದೆ ಹಾಗಾಗಿ ಅಂತಹ ಗ್ರೂಪ್ಗಳಿಂದ ನಾವು ಹೊರಬರುತ್ತಿದ್ದೇವೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:03 am, Wed, 5 April 23