Karnataka Assembly Elections 2023: ಬೆಂಗಳೂರಿನಲ್ಲಿ ಸದ್ದಿಲ್ಲದೇ ಶೋಧ ಕಾರ್ಯ ಆರಂಭ​​: ಅಭ್ಯರ್ಥಿಗಳಲ್ಲದೇ ಬೆಂಬಲಿಗರ ಮೇಲೂ ಪೊಲೀಸರ ಹದ್ದಿನ ಕಣ್ಣು

ವಿಧಾನಸಭಾ ಚುನಾವಣಾ ಹಿನ್ನೆಲೆ ರಾಜ್ಯದಲ್ಲೆಡೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚಲು ಕಟ್ಟುನಿಟ್ಟಿನ ಕ್ರಮವಹಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ತಂದ ವಸ್ತುಗಳ ಮೇಲೆ ಅಧಿಕಾರಿಗಳ ಕಣ್ಣು ಬಿದ್ದಿದೆ.

Karnataka Assembly Elections 2023: ಬೆಂಗಳೂರಿನಲ್ಲಿ ಸದ್ದಿಲ್ಲದೇ ಶೋಧ ಕಾರ್ಯ ಆರಂಭ​​: ಅಭ್ಯರ್ಥಿಗಳಲ್ಲದೇ ಬೆಂಬಲಿಗರ ಮೇಲೂ ಪೊಲೀಸರ ಹದ್ದಿನ ಕಣ್ಣು
ಪ್ರಾತಿನಿಧಿಕ ಚಿತ್ರ
Follow us
|

Updated on:Apr 05, 2023 | 8:45 AM

ಬೆಂಗಳೂರು: ವಿಧಾನಸಭಾ ಚುನಾವಣಾ (Karnataka Assembly Elections 2023) ಹಿನ್ನೆಲೆ ರಾಜ್ಯದಲ್ಲೆಡೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚಲು ಕಟ್ಟುನಿಟ್ಟಿನ ಕ್ರಮವಹಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ತಂದ ವಸ್ತುಗಳ ಮೇಲೆ ಅಧಿಕಾರಿಗಳ ಕಣ್ಣು ಬಿದ್ದಿದ್ದು, ಸಿಲಿಕಾನ್ ಸಿಟಿಯಲ್ಲಿ ಸದ್ದಿಲ್ಲದೇ ಸರ್ಚಿಂಗ್​ ನಡೆಸಿದ್ದಾರೆ. ಕಣ್ಣಾಮುಚ್ಚಾಲೆ ಆಡುವ ಅಭ್ಯರ್ಥಿಗಳ ಮೇಲೆ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಅಷ್ಟೇ ಅಲ್ಲದೇ ಅಭ್ಯರ್ಥಿಗಳಲ್ಲದೇ ಬೆಂಬಲಿಗರ ಮೇಲೂ ಹದ್ದಿನ ಕಣ್ಣಿಡಲಾಗಿದೆ. ಕಳೆದ ಆರು ತಿಂಗಳಿಂದ ಮಾಹಿತಿ ಸಂಗ್ರಹ ನಡೆದಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳು, ಸಂಭವನೀಯ ಅಭ್ಯರ್ಥಿಗಳ ಬೆಂಬಲಿಗರ ಮೇಲೆ ಅಧಿಕಾರಿಗಳಿಂದ ನಿಗಾ ವಹಿಸಲಾಗಿದ್ದು, ನಗರದ ಹಲವು ಕ್ಷೇತ್ರಗಳಲ್ಲಿ ಅಧಿಕಾರಿಗಳಿಂದ ಶೋಧ ನಡೆಯುತ್ತಿದೆ. ಸೀರೆ, ಕುಕ್ಕರ್​ ಹಾಗೂ ನಗದು ಸೇರಿದಂತೆ ಇತರೆ ವಸ್ತುಗಳ ಮೇಲೆ ನಿಗಾ ಇಡಲಾಗುತ್ತಿದೆ.

ಅಭ್ಯರ್ಥಿಗಳು ತಮ್ಮ ಬೆಂಬಲಿಗರ ಮುಖಾಂತರ ಹಂಚುವ ಸಾಧ್ಯತೆಯಿದ್ದು, ಅಧಿಕಾರಿಗಳ ಕಾರ್ಯಾಚರಣೆಯಿಂದ ಕೆಲ ಅಭ್ಯರ್ಥಿಗಳು ಶಾಕ್ ಆಗಿದ್ದಾರೆ. ಮತ್ತೊಂದು ಕಡೆ ಅಭ್ಯರ್ಥಿಗಳು ಹಾಗೂ ಬೆಂಬಲಿಗರ ವಿರುದ್ದ ಚುನಾವಣಾಧಿಕಾರಿಗಳ ಬಳಿ ದೂರು ನೀಡಲಾಗುತ್ತಿದೆ. ಚುನಾವಣೆಯಲ್ಲಿ ಅಭ್ಯರ್ಥಿಗಳ ಕಳ್ಳಾಟದ ತಂತ್ರಕ್ಕೆ ಚುನಾವಣಾಧಿಕಾರಿಗಳು ಪ್ರತಿತಂತ್ರ ರೂಪಿಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಚುನಾವಣಾಧಿಕಾರಿಗಳ ಭರ್ಜರಿ ಬೇಟೆ: 6 ದಿನಗಳಲ್ಲಿ 47 ಕೋಟಿಗೂ ಹೆಚ್ಚು ಮೌಲ್ಯದ ವಸ್ತು ಸೇರಿದಂತೆ 12 ಕೋಟಿಗೂ ಹೆಚ್ಚು ನಗದು ಜಪ್ತಿ

ಚುನಾವಣೆ ಸಮೀಸುತ್ತಿದ್ದಂತೆ ಅಭ್ಯರ್ಥಿಗಳ ಮನೆ ಮೇಲೆ ಸ್ಕ್ವಾಡ್​ಗಳು ದಾಳಿ ನಡೆಸಿದ್ದಾರೆ. ದೂರುಗಳು ಹೆಚ್ಚಾಗಿ ಬರುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಕ್ಷೇತ್ರದ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರ ಪಟ್ಟಿಯನ್ನುಅಧಿಕಾರಿಗಳು ಸಿದ್ದ ಮಾಡಿಕೊಂಡಿದ್ದಾರೆ. ಆ ಮೂಲಕ ಅಭ್ಯರ್ಥಿಗಳಿಗೆ ಅತ್ಯಾಪ್ತ, ಆಪ್ತರಾಗಿರುವವರ ಮನೆ, ಗೋಡನ್​ಗಳ ಮೇಲೆ ಕಣ್ಣು ಇಡಲಾಗಿದೆ.

ಖಾಸಗಿ ಬಸ್​​ನಲ್ಲಿ 2 ಕೋಟಿ ರೂ. ಹಣ ಪತ್ತೆ 

ಬೆಳಗಾವಿ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2 ಕೋಟಿ ರೂ. ಹಣವನ್ನು ತಾಲೂಕಿನ ಹಿರೇಬಾಗೇವಾಡಿ ಟೋಲ್​​ನಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮುಂಬೈನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ತಪಾಸಣೆ ವೇಳೆ 2 ಕೋಟಿ ರೂ. ಹಣ ಪತ್ತೆಯಾಗಿದ್ದು, ಸದ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಹಾಲಾಡಿ ಶ್ರೀನಿವಾಸ್ ಶೆಟ್ಟಿ ಬೆನ್ನಲ್ಲೇ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಮತ್ತೋರ್ವ ಬಿಜೆಪಿ ಶಾಸಕ

7 ಲಕ್ಷ ಮೌಲ್ಯದ ಅಕ್ಕಿ ವಶಕ್ಕೆ 

ಶಿವಮೊಗ್ಗ: ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನಲೆ ದಾಖಲೆಗಳಿಲ್ಲದೇ ಲಾರಿಯಲ್ಲಿ ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದ ಅಂದಾಜು 7 ಲಕ್ಷ ಮೌಲ್ಯದ ಒಟ್ಟು 460 ಚೀಲಗಳಲ್ಲಿ ತುಂಬಿದ್ದ 119 ಕ್ವಿಂಟಾಲ್ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಅಂದಾಜು 1.4 ಲಕ್ಷ ಮೌಲ್ಯದ ಒಟ್ಟು 50 ಗ್ಯಾಸ್​ಸ್ಟೋವ್​ ​ಗಳನ್ನು ಕೋಟೆ ಪೊಲೀಸರು ಸೀಜ್ ಮಾಡಿದ್ದಾರೆ.

ಆರು ದಿನಗಳಲ್ಲಿ ಒಟ್ಟಾರೆ 47 ಕೋಟಿ 43 ಲಕ್ಷದ 85 ಸಾವಿರ ರೂ. ಮೌಲ್ಯದ ವಸ್ತು ಜಪ್ತಿ 

ರಾಜ್ಯದಲ್ಲಿ ಕಳೆದ ಆರು ದಿನಗಳ ಕಾರ್ಯಚರಣೆಯಲ್ಲಿ ಒಟ್ಟಾರೆ 47 ಕೋಟಿ 43 ಲಕ್ಷದ 85 ಸಾವಿರ ರೂ. ಮೌಲ್ಯದ ವಸ್ತು ಜಪ್ತಿ ಮಾಡಲಾಗಿದೆ. ಈ ಕುರಿತು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳಿಂದ ಅಧಿಕೃತ ಮಾಹಿತಿ ಹೊರಬಿದ್ದಿತ್ತು. ನೀತಿ ಸಂಹಿತೆ ಜಾರಿ ಬಳಿಕ 6 ದಿನಗಳ ಕಾರ್ಯಾಚರಣೆಯಲ್ಲಿ 12 ಕೋಟಿ 82 ಲಕ್ಷ 94 ಸಾವರ ರೂ. ನಗದು, ರಾಜ್ಯದಲ್ಲಿ 16 ಕೋಟಿ ಮೌಲ್ಯದ 2,78,798 ಲೀಟರ್ ಮದ್ಯ, 41 ಲಕ್ಷ ರೂಪಾಯಿ ಮೌಲ್ಯದ 79.44 ಕೆ.ಜಿ ಮಾದಕವಸ್ತು, 6 ಕೋಟಿ 72 ಲಕ್ಷ ರೂಪಾಯಿ ಮೌಲ್ಯದ 13.575 ಕೆ.ಜಿ ಚಿನ್ನ, 63 ಲಕ್ಷ 98 ಸಾವಿರ ಮೌಲ್ಯದ 88.763 ಕೆಜಿ ಬೆಳ್ಳಿ ಆಭರಣ ಸೀಜ್​ ಮಾಡಲಾಗಿತ್ತು.

ಈವರೆಗೆ 10 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಗಿಫ್ಟ್‌ಗಳು ವಶ ಪಡೆಸಿಕೊಂಡಿದ್ದು, ನಗದು, ಮದ್ಯ, ಡ್ರಗ್ಸ್ ಜಪ್ತಿ ಸಂಬಂಧ ಒಟ್ಟು 316 ಪ್ರಕರಣ ದಾಖಲು ಮಾಡಲಾಗಿದೆ. 31,486 ಶಸ್ತ್ರಾಸ್ತ್ರ ಠೇವಣಿ, 10 ಶಸ್ತ್ರಾಸ್ತ್ರಗಳನ್ನ ಠೇವಣಿ ಮಾಡಿಲ್ಲ. ರಾಜ್ಯದಲ್ಲಿ ಈವರೆಗೆ 7 ಗನ್‌ ಲೈಸೆನ್ಸ್‌ಗಳನ್ನು ರದ್ದುಗೊಳಿಸಲಾಗಿದೆ. ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ 1,416 ಜನರ ವಿರುದ್ಧ ಮೊಕದ್ದಮೆ ಹೂಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:40 am, Wed, 5 April 23

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ