ಬೆಂಗಳೂರಿಗರಿಗೆ ಬಿಗ್ ಶಾಕ್: ಗ್ಯಾರಂಟಿ ಯೋಜನೆಗಳ ಮಧ್ಯೆ ನೀರಿನ ದರ ಏರಿಕೆಗೆ ಚಿಂತನೆ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅನಿಶ್ಚಿತ ಆರ್ಥಿಕ ಸ್ಥಿತಿಯನ್ನು ಬಿಡಬ್ಲ್ಯುಎಸ್‌ಎಸ್‌ಬಿ ಅಧಿಕಾರಿಗಳು ಮಂಗಳವಾರ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ.ಶಿವಕುಮಾರ್ ಅವರಿಗೆ ವಿವರಿಸಿದರು.

ಬೆಂಗಳೂರಿಗರಿಗೆ ಬಿಗ್ ಶಾಕ್: ಗ್ಯಾರಂಟಿ ಯೋಜನೆಗಳ ಮಧ್ಯೆ ನೀರಿನ ದರ ಏರಿಕೆಗೆ ಚಿಂತನೆ
ಡಿಸಿಎಂ ಡಿ.ಕೆ.ಶಿವಕುಮಾರ್

Updated on: Jun 07, 2023 | 11:21 AM

ಬೆಂಗಳೂರು: 5 ಗ್ಯಾರಂಟಿಗಳ(Congress Guarantee) ಘೋಷಣೆ ಮಾಡಿ ಜನರಿಗೆ ಸಿಹಿ ಹಂಚಿದ್ದ ಕಾಂಗ್ರೆಸ್ ಈಗ ಒಂದಾದ ಮೇಲೆ ಒಂದರಂತೆ ಶಾಕ್ ಕೊಟ್ತಿದೆ. ಗ್ಯಾರಂಟಿಗಳಿಗೆ ಒಂದಷ್ಟು ಷರತ್ತುಗಳನ್ನು ಹಾಕಿ ಜನರನ್ನು ಗೊಂದಲಕ್ಕೆ ನೂಕಿದೆ. ಇನ್ನು ಮತ್ತೊಂದೆಡೆ ಗೃಹಜ್ಯೋತಿ ಯೋಜನೆ(Gruha Jyothi yojana) ಘೋಷಿಸಿದ್ದ ಕಾಂಗ್ರೆಸ್ ಕರೆಂಟ್ ಬಿಲ್ ದರ ಏರಿಸಿ ಬರೆ ಹಾಕಿದೆ. ಜೊತೆಗೆ ಈಗ ನೀರಿನ ದರ(Water Tariff) ಏರಿಕೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿದ್ದಾರೆ. ನಿನ್ನೆ ಸಭೆ ನಡೆಸಿದ ಡಿಸಿಎಂ ಡಿಕೆ ಶಿವಕುಮಾರ್ ಅಧಿಕಾರಿಗಳ ಜೊತೆ ನೀರಿದ ದರ ಏರಿಕೆ ಬಗ್ಗೆ ಚರ್ಚೆ ಮಾಡಿದ್ದಾರೆ. ಹೀಗಾಗಿ ಜನರಿಗೆ ಮತ್ತೊಂದು ಟ್ಯಾಕ್ಸ್ ಬೀಳಲಿದೆ ಎನ್ನಲಾಗುತ್ತಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅನಿಶ್ಚಿತ ಆರ್ಥಿಕ ಸ್ಥಿತಿಯನ್ನು ಬಿಡಬ್ಲ್ಯುಎಸ್‌ಎಸ್‌ಬಿ ಅಧಿಕಾರಿಗಳು ಮಂಗಳವಾರ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ.ಶಿವಕುಮಾರ್ ಅವರಿಗೆ ವಿವರಿಸಿದರು. 2014 ರಿಂದ ಬದಲಾಗದೆ ಉಳಿದಿರುವ ನೀರಿನ ದರವನ್ನು ಹೆಚ್ಚಿಸುವ ಅಗತ್ಯತೆಯ ಬಗ್ಗೆ ಅಧಿಕಾರಿಗಳು ಡಿಸಿಎಂ ಜೊತೆ ಚರ್ಚಿಸಿದ್ದಾರೆ. ಡಿಕೆ ಶಿವಕುಮಾರ್ ಅವರು ನಿನ್ನೆ(ಜೂನ್ 06) ಸಂಜೆ ಕಾವೇರಿ ಭವನಕ್ಕೆ ಭೇಟಿ ನೀಡಿ ಮಂಡಳಿ ಕೈಗೊಂಡಿರುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಪಡೆದರು. BWSSB ಅಧ್ಯಕ್ಷ ಎಸ್ ಜಯರಾಮ್ ಈ ಬಗ್ಗೆ ಡಿಸಿಎಂ ಡಿಕೆಶಿಗೆ ವಿವರಿಸಿದರು.

ಇದನ್ನೂ ಓದಿ: ವಿದ್ಯುತ್ ಫ್ರೀ ನಡುವೆಯೇ ಜನರಿಗೆ ಕರೆಂಟ್​ ಶಾಕ್: 2023ರ ಏಪ್ರಿಲ್​ನಿಂದ ಡಿಸೆಂಬರ್ ವರೆಗೂ ವಿದ್ಯುತ್ ದರ ಹೆಚ್ಚಳ, ಎಷ್ಟೆಷ್ಟು? ಇಲ್ಲಿದೆ ವಿವರ

BWSSB ಬೋರ್ಡ್ ಮಾಸಿಕ 110 ಕೋಟಿ ಆದಾಯವನ್ನು ಪಡೆಯುತ್ತದೆ, ಆದರೆ ಅದರ ಮಾಸಿಕ ವೆಚ್ಚವು ಸುಮಾರು 140 ಕೋಟಿ ರೂ. ಇದೆ. ಇನ್ನು ಇತ್ತೀಚಿಗೆ ಹೆಚ್ಚಿಸಲಾದ ವಿದ್ಯುತ್ ದರದಲ್ಲಿ, BWSSB ವಿದ್ಯುತ್ ಶುಲ್ಕಕ್ಕಾಗಿ 90 ಕೋಟಿ ರೂ. ನೀಡಬೇಕು. ವಿದ್ಯುತ್ ದರದಲ್ಲಿ ವಾರ್ಷಿಕ ಹೆಚ್ಚಳವಾಗಿದ್ದರೂ, ನೀರಿನ ದರವು 2014 ರಿಂದ ಒಂದೇ ಆಗಿದೆ. ಹೀಗಾಗಿ ಈ ಬಾರಿಯಾದರೂ ನೀರಿದ ದರ ಹೆಚ್ಚಿಸಿ ಎಂದು BWSSB ಪ್ರಸ್ತಾವನೆ ಸಲ್ಲಿಸಿದೆ.

ಪ್ರಸ್ತಾವನೆಯನ್ನು ಪರಿಶೀಲಿಸುವುದಾಗಿ ಡಿಕೆ ಶಿವಕುಮಾರ್ ಭರವಸೆ ನೀಡಿದರು ಎಂದು ಸಭೆಯಲ್ಲಿ ಅಧಿಕಾರಿಯೊಬ್ಬರು ತಿಳಿಸಿದರು. ಕಳೆದ ಒಂಬತ್ತು ವರ್ಷಗಳಲ್ಲಿ ವಿದ್ಯುತ್ ದರದಲ್ಲಿ 10 ಹೆಚ್ಚಳ ಮಾಡಲಾಗಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದರು. ಬೆಂಗಳೂರಿಗೆ ಪ್ರತಿ ದಿನಕ್ಕೆ 1,450 ಮಿಲಿಯನ್ ಲೀಟರ್ ನೀರು (ಎಂಎಲ್‌ಡಿ) ಬೇಕು. ಮತ್ತು ಕಾವೇರಿ ವಿ ರಾಜ್ಯವು ಕಾರ್ಯಾರಂಭಗೊಂಡಾಗ ಅದು ಇನ್ನೂ 775 ಎಂಎಲ್‌ಡಿ ಹೆಚ್ಚಾಗಿದೆ ಎಂದು ಜಯರಾಮ್ ವಿವರಿಸಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ