Minister George Press Meet Live: ಉಚಿತ ಕರೆಂಟ್ ಬಗ್ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಸುದ್ದಿಗೋಷ್ಠಿ

| Updated By: ಆಯೇಷಾ ಬಾನು

Updated on: Jun 07, 2023 | 12:32 PM

ಇಂಧನ ಖಾತೆ ಸಚಿವ ಕೆ.ಜೆ.ಜಾರ್ಜ್​ ಸುದ್ದಿಗೋಷ್ಠಿ ನಡೆಸಿ ಗೃಹಜ್ಯೋತಿ ಯೋಜನೆ ಜಾರಿ ವಿಚಾರಕ್ಕೆ ಸಂಬಂಧಿಸಿ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಜಾರಿ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಇಂಧನ ಖಾತೆ ಸಚಿವ ಕೆ.ಜೆ.ಜಾರ್ಜ್​ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಮನೆ ವಿದ್ಯುತ್ ಬಳಕೆದಾರರು ಎಷ್ಟು ಬಳಕೆ ಮಾಡಿದ್ದಾರೆ ಎಂದು ಲೆಕ್ಕ ಹಾಕಿ ನೋಡಿ. ಸ್ವಂತ ಮನೆ ಇರಲಿ, ಬಾಡಿಗೆ ಮನೆಯಲ್ಲಿ ಇರಲಿ, ಬಾಡಿಗೆ ಕರಾರು ಪತ್ರ ಬೇಕು. ಸೇವಾಸಿಂಧು ಪೋರ್ಟಲ್ ನಲ್ಲಿ ಗೃಹ ಜ್ಯೋತಿ ಅಂತ ಪ್ರತ್ಯಕ್ಷವಾಗಿ ಅರ್ಜಿ ಹಾಕಲು ಅವಕಾಶ ಇದೆ. ನಮ್ಮದು ಒಂದು ಪ್ರತ್ಯೇಕ ಆ್ಯಪ್ ಬಿಡುಗಡೆ ‌ಮಾಡ್ತಿವಿ. ಜುಲೈ ತಿಂಗಳಿನ ಬಿಲ್ ಆಗಸ್ಟ್ ನಲ್ಲಿ ಪಾವತಿ ಮಾಡುವುದು ಬೇಡ. ನಮ್ಮ ಬಳಿ ಎರಡು ಕೋಟಿ 16 ಗ್ರಾಹಕರಿದ್ದಾರೆ. ಅದರಲ್ಲಿ 2 ಕೋಟಿ 14 ಲಕ್ಷ ಗ್ರಾಹಕರಿಗೆ ಈ ಯೋಜನೆ ಲಾಭ ಸಿಗುತ್ತದೆ ಎಂದರು.

Published on: Jun 07, 2023 12:25 PM