AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ: ಡಿಸಿಎಂ ಡಿಕೆ ಶಿವಕುಮಾರ್

ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಮಾಡಿಲ್ಲ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸ್ಥಿತಿ ಚಿಂತಾಜನಕವಾಗಿದೆ. ಹೀಗಾಗಿ ದರ ಏರಿಕೆ ಬಗ್ಗೆ ನಾಗರಿಕರು, ಅಧಿಕಾರಿಗಳ ಜತೆ ಚರ್ಚಿಸಬೇಕಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ: ಡಿಸಿಎಂ ಡಿಕೆ ಶಿವಕುಮಾರ್
ಡಿಸಿಎಂ ಡಿ.ಕೆ.ಶಿವಕುಮಾರ್
Rakesh Nayak Manchi
|

Updated on: Jun 06, 2023 | 9:55 PM

Share

ಬೆಂಗಳೂರು: ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಮಾಡಿಲ್ಲ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (Bangalore Water Supply and Sewerage Board) ಸ್ಥಿತಿ ಚಿಂತಾಜನಕವಾಗಿದೆ. ಹೀಗಾಗಿ ದರ ಏರಿಕೆ ಬಗ್ಗೆ ನಾಗರಿಕರು, ಅಧಿಕಾರಿಗಳ ಜತೆ ಚರ್ಚಿಸಬೇಕಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. 2014ರಿಂದ ನೀರಿನ ದರ ಏರಿಸಿಲ್ಲ, ಉದ್ಯೋಗಿಗಳು ಸಂಕಷ್ಟದಲ್ಲಿದ್ದಾರೆ. ನೀರಿನ ದರ ಏರಿಕೆ ಬಗ್ಗೆ ನಾಗರಿಕರು, ಅಧಿಕಾರಿಗಳ ಜೊತೆ ಚರ್ಚಿಸಬೇಕಿದೆ ಎಂದರು.

BWSSB ಸ್ಥಿತಿ ಬಹಳ ಚಿಂತಾ ಜನಕವಾಗಿದೆ. ಐದನೇ ಪೇಸ್ ಕಂಪ್ಲಿಟ್ ಆಗಬೇಕಿದೆ. ಅಕ್ರಮ ನೀರಿನ ಸಂಪರ್ಕಗಳನ್ನು 48 ರಿಂದ 28 ತಂದಿದ್ದಾರೆ. ಎಲ್ಲೆಲ್ಲಿ ಲೋಪದೋಷವಾಗಿದೆ ಎಂಬುದನ್ನು ಗುರುತಿಸಲು ಹೇಳಿದ್ದೇನೆ. ಸೀವೇಜ್ ವಾಟರ್ ಪೈಪ್​ನಲ್ಲಿ ಹೋಗುತ್ತಿದೆ. ಮುಂದೆ ಮಾರ್ಗದರ್ಶನ ನೀಡಬೇಕಿದೆ ಎಂದು ಡಿಸಿಎಂ ಹೇಳಿದರು.

ಇದನ್ನೂ ಓದಿ: ರಾಜಕೀಯ ಬಿಟ್ಟು ಬೆಂಗಳೂರು ಅಭಿವೃದ್ಧಿ ಮಾಡೋಣ: ಶಾಸಕರ ಸಭೆಯಲ್ಲಿ ಡಿಕೆ ಶಿವಕುಮಾರ್ ಕಿವಿಮಾತು

ಕುಡಿಯುವ ನೀರು ಮುಖ್ಯ. ಬೆಂಗಳೂರಿಗೆ ಶುಚಿ ನೀರು ಕೊಡಬೇಕಿದೆ. ಜನರಿಗೆ ಕ್ವಾಲಿಟಿ ನೀರು ಕೊಡಬೇಕಿದೆ. 2014 ರಲ್ಲಿ ನೀರಿನ ದರ ಏರಿಕೆ ಆಗಿದ್ದು ಇಲ್ಲಿಯವರೆಗೂ ಆಗಿಲ್ಲ. ನಾಗರೀಕರು, ಅಧಿಕಾರಿಗಳ ಜೊತೆ ಮಾತನಾಡಬೇಕಿದೆ. ಮುಂದೆ ಕುಳಿತು ಸಹಕಾರ ನೀಡುವೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ಇದಕ್ಕೂ ಮುನ್ನ ಶಾಂತಿನಗರದ ನಮ್ಮ ಮೆಟ್ರೋ ಕೇಂದ್ರ ಕಚೇರಿಯಲ್ಲಿ BMRCL ಅಧಿಕಾರಿಗಳ ಜತೆ ಸಭೆ ನಡೆಸಿದ ಡಿಕೆ ಶಿವಕುಮಾರ್, ವಾಸ್ತವಾಂಶ ಪರಿಶೀಲನೆ ನಡೆಸಿದರು. ಬೈಯ್ಯಪ್ಪನಹಳ್ಳಿ ಕೆ.ಆರ್ ಪುರಂ ಮೆಟ್ರೋ ಜುಲೈ ವೇಳೆಗೆ, ಕೆಂಗೇರಿ ಹಾಗೂ ಚಲಘಟ್ಟ ಆಗಸ್ಟ್ ಅಥವಾ ಸೆಪ್ಟೆಂಬರ್​ನಲ್ಲಿ, ನಾಗಸಂದ್ರ ಹಾಗೂ ಮಾದವಾರ ಸೆಪ್ಟೆಂಬರ್, ಅಕ್ಟೋಬರ್ ವೇಳೆಗೆ ಸಿದ್ಧವಾಗಬಹುದು ಎಂದು ಇದೇ ವೇಳೆ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ