ಸೆಪ್ಟೆಂಬರ್​ 11ರಂದು ಬೆಂಗಳೂರಿನಲ್ಲಿ ಖಾಸಗಿ ವಾಹನಗಳ ಬಂದ್​ಗೆ ಕರೆ; ಇಲ್ಲಿದೆ ಸಂಪೂರ್ಣ ಮಾಹಿತಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 05, 2023 | 3:24 PM

ಖಾಸಗಿ ವಾಹನ ಸಂಘಗಳ ಒಕ್ಕೂಟದಿಂದ ಸೆಪ್ಟೆಂಬರ್​ 11 ರಂದು ಬೆಂಗಳೂರಿನಲ್ಲಿ ಬಂದ್​ಗೆ ಕರೆ ನೀಡಲಾಗಿದೆ. ಈ ಹಿನ್ನಲೆ ಇಂದು(ಸೆ.05) ಬೆಂಗಳೂರು ಬಂದ್ ಪೋಸ್ಟರ್​ನ್ನು ಸಂಘಟನೆಗಳು ಬಿಡುಗಡೆ ಮಾಡಿ ಸಕಲ ಸಿದ್ಧತೆ ನಡೆಸಿದೆ. ಇನ್ನು ಯಾವ್ಯಾವ ವಾಹನಗಳು ಬಂದ್​ ಆಗಲಿವೆ?, ಸಂಘಗಳ ಬೇಡಿಕೆಯೇನು? ಇಲ್ಲಿದೆ ಮಾಹಿತಿ.

ಸೆಪ್ಟೆಂಬರ್​ 11ರಂದು ಬೆಂಗಳೂರಿನಲ್ಲಿ ಖಾಸಗಿ ವಾಹನಗಳ ಬಂದ್​ಗೆ ಕರೆ; ಇಲ್ಲಿದೆ ಸಂಪೂರ್ಣ ಮಾಹಿತಿ
ಸೆ.11 ರಂದು ಬೆಂಗಳೂರಿನಲ್ಲಿ ಖಾಸಗಿ ವಾಹನಗಳ ಬಂದ್​ಗೆ ಕರೆ
Follow us on

ಬೆಂಗಳೂರು, ಸೆ.05: ಕಾಂಗ್ರೆಸ್​ ಸರ್ಕಾರ ನೀಡಿದ ಐದು ಗ್ಯಾರೆಂಟಿಗಳಲ್ಲೊಂದಾದ ಶಕ್ತಿ ಯೋಜನೆಯಡಿ (Shakti Scheme) ಮಹಿಳೆಯರಿಗೆ ಸರ್ಕಾರಿ ಬಸ್​ನಲ್ಲಿ ಉಚಿತ ಪ್ರಯಾಣ ನೀಡಲಾಗಿದೆ. ಇದರಿಂದ ಖಾಸಗಿ ವಾಹನ ಸಂಘಗಳ ಒಕ್ಕೂಟದಿಂದ ಸೆಪ್ಟೆಂಬರ್​ 11 ರಂದು ಬೆಂಗಳೂರಿನಲ್ಲಿ ಬಂದ್​ಗೆ ಕರೆ ನೀಡಲಾಗಿದೆ. ಈ ಹಿನ್ನಲೆ ಇಂದು(ಸೆ.05) ಬೆಂಗಳೂರು ಬಂದ್ ಪೋಸ್ಟರ್​ನ್ನು ಸಂಘಟನೆಗಳು ಬಿಡುಗಡೆ ಮಾಡಿ ಸಕಲ ಸಿದ್ಧತೆ ನಡೆಸಿದೆ. ಅಷ್ಟೇ ಅಲ್ಲ, ಆಟೋ, ಟ್ಯಾಕ್ಸಿ ಹಾಗೂ ಕ್ಯಾಬ್​ಗಳಿಗೆ ಕಪ್ಪು ಬಾವುಟ ಕಟ್ಟಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಯಾವ್ಯಾವ ವಾಹನಗಳು ಬಂದ್​ ಆಗಲಿವೆ?

ಈಗಾಗಲೇ ಜಯನಗರದ ಶಾಲಿನಿ ಆಟದ ಮೈದಾನದಲ್ಲಿ ಸೆ.11ರಂದು ಬೆಂಗಳೂರು ಬಂದ್​ಗೆ ಕರೆ ಪೋಸ್ಟರ್​ ಬಿಡುಗಡೆ ಮಾಡಿ, ಬಾವುಟ ಹಂಚಿಕೆ ಆಗಿದೆ. ಬಂದ್ ಸಂಬಂಧ 32 ಒಕ್ಕೂಟಗಳ ಅಧ್ಯಕ್ಷರು ಮತ್ತು ಸದಸ್ಯರು ಭಾಗಿಯಾಗಿದ್ದು, ಚಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಇನ್ನು ಸೆ.11 ರಂದು ಆಟೋ, ಟ್ಯಾಕ್ಸಿ, ಮಿನಿ ಟ್ರಕ್, ಖಾಸಗಿ ಬಸ್​ಗಳ ಸಂಚಾರ ಬಂದ್ ಆಗಲಿದೆ ಎಂದಿದ್ದಾರೆ.

ಇದನ್ನೂ ಓದಿ:ಇಂದು ಕೊಲ್ಹಾಪುರ ಬಂದ್​​: ರಾಜ್ಯದಿಂದ ಮಹಾರಾಷ್ಟ್ರಕ್ಕೆ ಕೆಎಸ್​ಆರ್​ಟಿಸಿ ಬಸ್​ ಸಂಚಾರ ಸ್ಥಗಿತ

ಖಾಸಗಿ ವಾಹನ ಒಕ್ಕೂಟದ ಬೇಡಿಕೆಗಳೇನು?

ಇನ್ನು ಖಾಸಗಿ ವಾಹನಗಳ ಬೇಡಿಕೆಗಳು ಈ ಕೆಳಗಿನಂತಿದೆ.

1) ಚಾಲಕರಿಗೆ 10 ಸಾವಿರ ಮಾಸಿಕ ಪರಿಹಾರ ಧನ
2) ರ್ಯಾಪಿಡ್ ಬೈಕ್ ಟ್ಯಾಕ್ಸಿಗಳ ಸಂಪೂರ್ಣ ನಿಷೇಧ
3) ಅಸಂಘಟಿತ ವಾಣಿಜ್ಯ ಚಾಲಕರ ಮತ್ತು ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ, ಸೌಲಭ್ಯ ಯೋಜನೆಯಡಿ ಆಟೋ, ಟ್ಯಾಕ್ಸಿ ಚಾಲಕರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಬೇಕು
4)ವೈಟ್ ಬೋರ್ಡ್ ವಾಹನದಲ್ಲಿ ಬಾಡಿಗೆ ಮಾಡೋದಕ್ಕೆ ಬ್ರೇಕ್
5) ಚಾಲಕರ ಮಕ್ಕಳಿಗೆ ವಿದ್ಯಾರ್ಥಿವೇತನ
6) ಓಲಾ, ಊಬರ್ ಆಪ್ ಆಧಾರಿತ ಸೇವೆಗಳ ನಿರ್ಬಂಧ
7) ಖಾಸಗಿ ಬಸ್​ಗಳಿಗೂ ಶಕ್ತಿ ಯೋಜನೆ ಅಡಿ ಸೇವೆಗೆ ಅವಕಾಶ
8) ಖಾಸಗಿ ವಾಹನಗಳನ್ನ ಕಿ.ಮೀ ಆಧಾರದಲ್ಲಿ ಸರ್ಕಾರ ಬಾಡಿಗೆಗೆ ಪಡೆಯುವುದು
9) ನಿಯಮ ಬಾಹಿರವಾಗಿ ವಾಹನ ವಶಕ್ಕೆ ಪಡೆಯುವ ಫೈನಾನ್ಸ್ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳಬೇಕು
ಇನ್ನಿತರ ಹಲವು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಬಂದ್​ಗೆ ಕರೆ ನೀಡಲಾಗಿದೆ. ಇನ್ನು ಸೆಪ್ಟೆಂಬರ್ 10 ರ ಮಧ್ಯರಾತ್ರಿಯಿಂದಲೇ ಬಂದ್ ಶುರುವಾಗಲಿದೆ. ಈ ಹಿನ್ನಲೆ ಇಂದು ಬಂದ್​ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ