ತಂದೆ ಪಾಕಿಸ್ತಾನ-ತಾಯಿ ಬೆಂಗಳೂರು: ಭಾರತ ಪೌರತ್ವಕ್ಕೆ ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿದ್ದ ಅಪ್ರಾಪ್ತ ಮಕ್ಕಳ ಅರ್ಜಿ ವಜಾ!

ಬೆಂಗಳೂರಿನ ಮಹಿಳೆಯೊಬ್ಬರು ಪಾಕಿಸ್ತಾನ ವ್ಯಕ್ತಿಯೊಂದಿಗೆ ಮದ್ವೆಯಾಗಿ ಬಳಿಕ ವಿಚ್ಚೇದನ ಪಡೆದುಕೊಂಡಿದ್ದು, ಇದೀಗ ತನ್ನ ಮಕ್ಕಳಿಗೆ ಭಾರತ ಪೌರತ್ವ ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್​ ವಜಾಗೊಳಿಸಿದೆ.

ತಂದೆ ಪಾಕಿಸ್ತಾನ-ತಾಯಿ ಬೆಂಗಳೂರು: ಭಾರತ ಪೌರತ್ವಕ್ಕೆ ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿದ್ದ ಅಪ್ರಾಪ್ತ ಮಕ್ಕಳ ಅರ್ಜಿ ವಜಾ!
ಕರ್ನಾಟಕ ಹೈಕೋರ್ಟ್

Updated on: Apr 07, 2023 | 8:29 AM

ಮುಖ್ಯಾಂಶಗಳು

  • ಭಾರತ ಪೌರತ್ವಕ್ಕೆ ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿದ್ದ ಪಾಕ್ ಮೂಲದ ಅಪ್ರಾಪ್ತ ಮಕ್ಕಳ ಅರ್ಜಿ ವಜಾ
  • ತನ್ನ ಮಕ್ಕಳಿಗೆ ಭಾರತ ಪೌರತ್ವ ನೀಡುವಂತೆ ಕರ್ನಾಟಕ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ ಬೆಂಗಳೂರಿನ ಮಹಿಳೆ
  • ಪಾಕಿಸ್ತಾನ ಪೌರತ್ವ ತ್ಯಜಿಸಲು ಕನಿಷ್ಠ 21 ವರ್ಷ ವಯಸ್ಸಾಗಿರಬೇಕು ಎನ್ನುವ ಕಾರಣಕ್ಕೆ ಅರ್ಜಿ ವಜಾಗೊಳಿಸಿದ ಕೋರ್ಟ್

ಬೆಂಗಳೂರು: ಪಾಕಿಸ್ತಾನ ಮೂಲದ ಇಬ್ಬರು ಅಪ್ರಾಪ್ತ ಮಕ್ಕಳು ಭಾರತದ ಪೌರತ್ವಕ್ಕಾಗಿ(Indian citizenship) ಕರ್ನಾಟಕ ಹೈಕೋರ್ಟ್‌ನಲ್ಲಿ(Karnataka High Court) ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಮಾನವೀಯತೆ ಆಧಾರದಲ್ಲಿ ಪಾಸ್‌ಪೋರ್ಟ್ ಪಡೆದ ಭಾರತಕ್ಕೆ ಮರಳಿದ ಬೆಂಗಳೂರು ಮೂಲದ ಮಹಿಳೆ ಹಾಗೂ ಇಬ್ಬರು ಮಕ್ಕಳಿಗೆ ಕಾನೂನಿನ ತೊಡಕು ಎದುರಾಗಿದೆ. ಪಾಕಿಸ್ತಾನ ಪೌರತ್ವ(Pakistani citizenship) ತ್ಯಜಿಸದೆ ಭಾರತ ಪೌರತ್ವ ನೀಡಲು ಸಾಧ್ಯವಾಗದ ಕಾರಣ, ಕರ್ನಾಟಕ ಹೈಕೋರ್ಟ್ ಅರ್ಜಿ ವಜಾ ಮಾಡಿದೆ. ಭಾರತದ ಪೌರತ್ವ ನೀಡುವುದಕ್ಕೆ ಯಾವುದೇ ಅಭ್ಯಂತರವಿಲ್ಲ, ಆದರೆ ಪಾಕಿಸ್ತಾನ ಪೌರತ್ವ ತ್ಯಜಿಸಲು ಕನಿಷ್ಠ 21 ವರ್ಷ ವಯಸ್ಸಾಗಿರಬೇಕು ಎನ್ನುವ ನಿಯಮವಿದೆ. ಈ ಕಾರಣದಿಂದ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದೆ.

ಬೆಂಗಳೂರಿನ ಅಮೀನಾ ರಾಹೀಲ್, ಪಾಕಿಸ್ತಾನದ ಮೂಲದ ಅಸಾದ್ ಮಲಿಕ್ ಜೊತೆ 2002ರಲ್ಲಿ ವಿವಾಹವಾಗಿದ್ದು, ದುಬೈನಲ್ಲಿ ಅದ್ಧೂರಿ ಮದುವೆ ಸಮಾರಂಭ ನಡೆದಿತ್ತು. ಉದ್ಯೋಗ ಕಾರಣ ಅಸಾದ್ ಹಾಗೂ ಅಮೀನಾ ದುಬೈನಲ್ಲೇ ನೆಲೆಸಿದ್ದರು. ದಂಪತಿಗಳಿಗೆ 17 ವಯಸ್ಸು ಹಾಗೂ 14 ವರ್ಷದ ಇಬ್ಬರು ಮಕ್ಕಳಿದ್ದಾರೆ. ಆದ್ರೆ, 2014ರಲ್ಲಿ ಅಮೀನಾ ಹಾಗೂ ಅಸಾದ್ ದುಬೈ ನ್ಯಾಯಾಲಯದಿಂದ ವಿಚ್ಚೇದನ ಪಡೆದಿದ್ದರು. ಈ ವೇಳೆ ಮಕ್ಕಳ ಪಾಲನ ಹಾಗೂ ಎಲ್ಲಾ ಹಕ್ಕನ್ನು ತಾಯಿಗೆ ನೀಡಲಾಗಿತ್ತು. 2021ರಲ್ಲಿ ಅಮೀನಾ ದುಬೈ ಜೀವನ ಕಷ್ಟವಾದ ಕಾರಣ ತಾಯಿ ಮನಗೆ ಮರಳಲು ನಿರ್ಧರಿಸಿದ್ದರು. ಆದ್ರೆ, ತಾಯಿ ಅಮೀನಾ ಭಾರತದ ಪ್ರಜೆಯಾದರೂ, ಮಕ್ಕಳಿಬ್ಬರು ಪಾಕಿಸ್ತಾನದ ಪ್ರಜೆಗಳಾಗಿದ್ದಾರೆ.

ತಂದೆ ಪಾಕಿಸ್ತಾನ ಪ್ರಜೆಯಾದ ಕಾರಣ ಮಕ್ಕಳಿಗೆ ಪಾಕಿಸ್ತಾನದ ಪೌರತ್ವ ಸಿಕ್ಕಿದೆ. ಆದರೆ ಅಮೀನಾ ಭಾರತಕ್ಕೆ ಮರಳಲು ರಾಯಭಾರಿ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಇಬ್ಬರು ಅಪ್ರಾಪ್ತ ಮಕ್ಕಳ ಬಳಿ ಭಾರತದಲ್ಲಿ ಪಾಸ್‌ಪೋರ್ಟ್ ಇಲ್ಲದ ಕಾರಣ ಕಾನೂನು ತೊಡಕು ಎದುರಾಗಿತ್ತು. ಅಮೀನಾ ಹಾಗೂ ಮಕ್ಕಳು ಬೆಂಗಳೂರಿನಲ್ಲಿ ನೆಲಸಲು ಮಾನ್ಯತೆ ಇಲ್ಲದಾಗಿತ್ತು. ಈ ವೇಳೆ ಮಕ್ಕಳ ಪಾಕಿಸ್ತಾನ ಪಾಸ್‌ಪೋರ್ಟ್ ಕಚೇರಿಗೆ ಹಿಂದುರುಗಿಸಿ, ಮಾನವೀಯತೆ ಆಧಾರದಲ್ಲಿ ಭಾರತ ರಾಯಭಾರ ಕಚೇರಿ ತಾತ್ಕಾಲಿಕ ಪಾಸ್‌ಪೋರ್ಟ್ ನೀಡಿತ್ತು. ಬಳಿಕ ಬೆಂಗಳೂರಿಗೆ ಆಗಮಿಸಿದ ಅಮೀನಾ ಹಾಗೂ ಇಬ್ಬರು ಮಕ್ಕಳು ತಾಯಿ ಮನೆಯಲ್ಲಿ ವಾಸವಾಗಿದ್ದಾರೆ. 17 ವರ್ಷ ಹಾಗೂ 14 ವರ್ಷದ ಮಕ್ಕಳು ಪಾಕಿಸ್ತಾನ ಪೌರತ್ವ ತ್ಯಜಿಸಿ ಭಾರತದ ಪೌರತ್ವ ಪಡೆಯಬೇಕಿದೆ.

ಆದ್ರೆ ತಾತ್ಕಾಲಿಕ ಪಾಸ್‌ಪೋರ್ಟ್ ಅವಧಿ ಅಂತ್ಯಗೊಂಡಿದೆ. ಇತ್ತ ಗೃಹ ಸಚಿವಾಲಯಕ್ಕೆ ಮನವಿ ಮಾಡಿದರೂ ಉತ್ತರ ಬಂದಿರಲಿಲ್ಲ. ಹೀಗಾಗಿ ಅಪ್ರಾಪ್ತ ಮಕ್ಕಳಿಗೆ ಭಾರತ ಪೌರತ್ವ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.

ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Loading...
Unable to load recommendations.
Follow Us