ಬೆಂಗಳೂರು: ರಾಜ್ಯ ಸರ್ಕಾರ ಆರು IPS ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಕಮಲ್ ಪಂತ್(Kamal Pant) ವರ್ಗಾವಣೆಯಾಗಿದ್ದು ನೂತನ ಬೆಂಗಳೂರು ಪೊಲೀಸ್ ಆಯುಕ್ತರಾಗಿ ಪ್ರತಾಪ್ ರೆಡ್ಡಿ(CH Pratap Reddy) ನೇಮಕಗೊಂಡಿದ್ದಾರೆ. ಪ್ರತಾಪ್‌ರೆಡ್ಡಿ ಅವರು ಈ ಹಿಂದೆ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿದ್ದರು. ಸದ್ಯ ಕಮಲ್ ಪಂತ್ ಅವರನ್ನು ನೇಮಕಾತಿ ವಿಭಾಗದ ಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಇನ್ನು ಕೆಎಸ್‌ಆರ್‌ಪಿ ಎಡಿಜಿಪಿಯಾಗಿದ್ದ ಅಲೋಕ್ ಕುಮಾರ್ರನ್ನು ಲಾ & ಆರ್ಡರ್ ಎಡಿಜಿಪಿಯಾಗಿ ವರ್ಗಾಹಿಸಲಾಗಿದೆ. ಕೆಎಸ್‌ಆರ್‌ಪಿ ಎಡಿಜಿಪಿಯಾಗಿ ಆರ್.ಹಿತೇಂದ್ರರನ್ನ ವರ್ಗಾವಣೆ ಮಾಡಲಾಗಿದ್ದು ಸಿಐಡಿ ಎಸ್‌ಪಿಯಾಗಿ ಎಂ.ಎನ್.ಅನುಚೇತ್ ವರ್ಗಾವಣೆಯಾಗಿದೆ. ಬೆಂಗಳೂರಿನ ಕೇಂದ್ರ ವಿಭಾಗದ ಡಿಸಿಪಿಯಾಗಿ ವೆಂಕಟೇಶ್ ವರ್ಗಾವಣೆಯಾಗಿದ್ದಾರೆ.
ಹಾಸನದ ASPಯಾಗಿ ಕರ್ನಾಟಕ ಕ್ಯಾಡರ್‌ನಲ್ಲಿ ಸೇವೆ ಆರಂಭಿಸಿದ್ದ ಪ್ರತಾಪ್
ಪ್ರತಾಪ್ ರೆಡ್ಡಿ 1991 ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು, ಆಂಧ್ರಪ್ರದೇಶದ ಗುಂಟೂರು ಮೂಲದವರು. ಹಾಸನದ ASPಯಾಗಿ ಕರ್ನಾಟಕ ಕ್ಯಾಡರ್‌ನಲ್ಲಿ ಸೇವೆ ಆರಂಭಿಸಿದ್ರು. ಈ ಹಿಂದೆ ಬೆಂಗಳೂರಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಕೆಲಸ ಮಾಡಿದ್ದರು. ಸದ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಹುದ್ದೆಯಿಂದ ಬೆಂಗಳೂರು ಪೊಲೀಸ್ ಆಯುಕ್ತರಾಗಿ ವರ್ಗಾವಣೆಗೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಮುಖ್ಯಮಂತ್ರಿಗಳ ಪದಕ್ಕೆ ಭಾಜನರಾಗಿರುವ ಪ್ರತಾಪ್ ರೆಡ್ಡಿ
1994ರಲಿ ಮುಖ್ಯಮಂತ್ರಿಗಳ ಪದಕ್ಕೆ ಭಾಜನರಾಗಿರುವ ಪ್ರತಾಪ್ ರೆಡ್ಡಿ, ಡೈರೆಕ್ಟರ್ ಆಫ್ ನ್ಯಾಷನಲ್ ಸೈಬರ್ ಸೆಕ್ಯುರಿಟಿ ಇನಿಶಿಯೇಟಿವ್, ಕಲ್ಬುರ್ಗಿ, ಬಿಜಾಪುರ, ಮುಂಬೈ, ಬೆಂಗಳೂರು ಸಿಬಿಐ ಘಟಕಗಳಲ್ಲಿ
ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಎಡಿಜಿಪಿಯಾಗಿ ಕರ್ತವ್ಯ ನಿರ್ವಹಿಸಿರುವ ಅನುಭವ ಹೊಂದಿದ್ದಾರೆ.
ನನ್ನ ಜೊತೆ ಕೆಲಸ ಮಾಡಿದ ಪ್ರತಿ ಸಿಬ್ಬಂದಿಗೆ ಧನ್ಯವಾದ ಅರ್ಪಿಸುತ್ತೇನೆ -ಕಮಲ್ ಪಂತ್
ನಾನು ಸರ್ಕಾರಕ್ಕೆ ಋಣಿಯಾಗಿದ್ದೇನೆ. ಡಿಜಿಯಾದ ಬಳಿಕವೂ ಒಂದು ವರ್ಷಕಾಲ ಮುಂದುವರೆಯಲು ಅವಕಾಶ ನೀಡಿದ್ದಾರೆ. ನನ್ನ ಜೊತೆ ಕೆಲಸ ಮಾಡಿದ ಪ್ರತಿ ಸಿಬ್ಬಂದಿಗೆ ಧನ್ಯವಾದ ಅರ್ಪಿಸುತ್ತೇನೆ. ಅವರ ಸಹಕಾರದಿಂದಲೇ ನಾನು ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಿದೆ. ಬೆಂಗಳೂರಿನ ಜನತೆ, ಮಾಧ್ಯಮಗಳ ಸಹಕಾರಕ್ಕೂ ವಂದನೆಗಳನ್ನ ಸಲ್ಲಿಸುತ್ತೇನೆ ಎಂದು ನಿರ್ಗಮಿತ ಕಮಿಷನರ್ ಕಮಲ್ ಪಂತ್ ಹೇಳಿದ್ರು. ಇನ್ನು ಪೊಲೀಸ್ ನೇಮಕಾತಿ ವಿಭಾಗಕ್ಕೆ ವರ್ಗಾವಣೆ ಕುರಿತು ಮಾತನಾಡಿದ ಕಮಲ್ ಪಂತ್, ನಾನು ಈವರೆಗೂ ಅಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವವಿಲ್ಲ. ಮುಂದಿನ ದಿನಗಳಲ್ಲಿ ನೇಮಕಾತಿ ವಿಭಾಗದಲ್ಲಿ ಉತ್ತಮ ಸೇವೆ ಸಲ್ಲಿಸುವ ಭರವಸೆಯಿದೆ. ರೌಡಿ ಚಟುವಟಿಕೆ, ಡ್ರಗ್ಸ್ ದಂಧೆ ನಿಯಂತ್ರಣಕ್ಕೆ ಬಂದಿದೆ. ಸೈಬರ್ ಕ್ರೈಂ ತಡೆಗೆ ಸಿಐಆರ್ ಮಾದರಿ ಜಾರಿಗೆ ತಂದಿದ್ದೇವೆ. ಸಿಐಆರ್ ಮಾದರಿಯನ್ನು ದೇಶಾದ್ಯಂತ ಅನುಸರಿಸುತ್ತಿದ್ದಾರೆ. ಕೊವಿಡ್ ವೇಳೆ ಸಿಬ್ಬಂದಿ ಉತ್ತಮವಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ.
ಯಾವುದೇ ಆಪಾದನೆ ಒಪ್ಪಲು ಸಾಧ್ಯವಿಲ್ಲ. ಬಿಟ್ ಕಾಯಿನ್ ಕೇಸ್‌ನ ಕುರಿತು ಯಾವುದೇ ಗೊಂದಲವಿರಲಿಲ್ಲ. ಚಂದ್ರು ಕೊಲೆ ಪ್ರಕರಣದಲ್ಲೂ ಯಾವುದೇ ಗೊಂದಲ ಇರಲಿಲ್ಲ. ನಾನು ಸಂಪೂರ್ಣ ತೃಪ್ತಿಯಿಂದ ವರ್ಗಾವಣೆಯಾಗುತ್ತಿದ್ದೇನೆ. ಇದು ನನ್ನ ಜೀವನದ ಗರಿಷ್ಠ ತೃಪ್ತಿ ಎಂದೇ ಹೇಳಬಹುದು. ಚಂದ್ರು ಕೊಲೆ ಪ್ರಕರಣದಲ್ಲೂ ಯಾವುದೇ ಗೊಂದಲ ಇರಲಿಲ್ಲ ಎಂದು ಗೃಹ ಸಚಿವರಿಗೆ ಕಮಲ್ ಪಂತ್ ಧನ್ಯವಾದ ತಿಳಿಸಿದ್ದಾರೆ. ಸಿ.ಹೆಚ್.ಪ್ರತಾಪ್ ರೆಡ್ಡಿ ದಕ್ಷ ಹಾಗೂ ಸಮರ್ಥ ಅಧಿಕಾರಿ ಎಂದರು.
Published On - 7:13 pm, Mon, 16 May 22